ದಿಲ್ಲಿ ಗಲಭೆಯಲ್ಲಿ ಫೇಸ್‍ಬುಕ್ ಪಾತ್ರ: ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಫೇಸ್‌ಬುಕ್ ಇಂಡಿಯಾ

0
408

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.24: ದಿಲ್ಲಿ ಗಲಭೆಯಯಲ್ಲಿ ಫೇಸ್‍ಬುಕ್ ನಿರ್ವಹಿಸಿದ ಪಾತ್ರದ ಕುರಿತು ತನಿಖೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿ ಫೇಸ್‍ಬುಕ್ ಇಂಡಿಯಾ ಸುಪ್ರೀಂಕೋರ್ಟಿನ ಮೊರೆ ಹೋಗಿದೆ. ಫೇಸ್‍ಬುಕ್ ಇಂಡಿಯಾ ಉಪಾಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರಕ್ಟರ್ ಅಜಿತ್ ಮೋಹನ್ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂ ಕೋರ್ಟು ದಿಲ್ಲಿ ವಿಧಾನಸಭೆ ಸಮಿತಿಗೆ ನೋಟಿಸು ಜಾರಿ ಮಾಡಿ ಅಜಿತ್ ಮೋಹನ್ ವಿರುದ್ಧ ಕ್ರಮ ಜರಗಿಸಬಾರದೆಂದು ಆದೇಶ ಹೊರಡಿಸಿದೆ. ನಂತರ ದಿಲ್ಲಿ ವಿಧಾನಸಭೆಯ ಶಾಂತಿ-ಸೌಹಾರ್ದ ಸಮಿತಿ ಬುಧವಾರದ ವಿಚಾರಣೆಯನ್ನು ಮುಂದೂಡಿದೆ.

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ಮಾಡಿದವರ ವಿರುದ್ಧ ದಿಲ್ಲಿಯಲ್ಲಿ ಸಂಘಪರಿವಾರ ಆಯೋಜಿಸಿದ್ದ ಕೋಮು ಗಲಭೆಯಲ್ಲಿ ವಾಟ್ಸಪ್ ,ಫೇಸ್‍ಬುಕ್ ಪಾತ್ರವಹಿಸಿದೆ ಎಂಬ ದೂರಿನಲ್ಲಿ ದಿಲ್ಲಿ ವಿಧಾನಸಭೆ ಸಮಿತಿ ಫೇಸ್‍ಬುಕ್ ಇಂಡಿಯಾ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಾಷನಷ್ಟ ಸಂಭವಿಸಿತ್ತು.

ಸಂಘಪರಿವಾರ ಸಂಪರ್ಕ ಇರುವ ಫೇಸ್‍ಬುಕ್ ಇಂಡಿಯಾ ಪಾಲಿಸಿ ಮುಖ್ಯಸ್ಥೆ ಅಂಕಿದಾಸ್ ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಮುಸ್ಲಿಮರ ವಿರುದ್ಧ ವಿದ್ವೇಷ ಪ್ರಚಾರ ಮಾಡಲು ಫೇಸ್‍ಬುಕ್‍ನಲ್ಲಿ ಅನುಮತಿ ನೀಡಿದ ವಿವರವನ್ನು ಅಮೆರಿಕದ ಪತ್ರಿಕೆ ವಾಲ್‍ಸ್ಟ್ರೀಟ್ ಜರ್ನಲ್ ಬಯಲಿಗೆಳೆದಿತ್ತು. ಶಶಿ ತರೂರ್ ಅಧ್ಯಕ್ಷರಾದ ಪಾರ್ಲಿಮೆಂಟರಿ ಮಾಹಿತಿ ತಂತ್ರಜ್ಞಾನ ಸಮಿತಿ ನೋಟಿಸು ಕಳುಹಿಸಿದ್ದಾಗ ಅಂದು ಫೇಸ್‍ಬುಕ್ ಅಧಿಕಾರಿಗಳು ಹಾಜರಾಗಿದ್ದರು. ಆದರೆ, ದಿಲ್ಲಿ ವಿಧಾನಸಭಾ ಸಮಿತಿಯ ಸಮನ್ಸ್‌ಗೆ ಫೇಸ್ಬುಕ್ ಪ್ರತಿಕ್ರಿಯಿಸಲು ಸಿದ್ಧವಾಗಿಲ್ಲ.

ಆಮ್ ಆದ್ಮಿ ಪಾರ್ಟಿ ಶಾಸಕ ರಾಘವ್ ಚಡ್ಡಾ ಅಧ್ಯಕ್ಷತೆಯ ವಿಧಾನಸಭಾ ಸಮಿತಿ ಮೊದಲು ಕಳುಹಿಸಿದ ಸಮನ್ಸ್‌ಗೆ ಅಜಿತ್ ಮೋಹನ್ ಹಾಜರಾಗಿರಲಿಲ್ಲ. ಪುನಃ ಈ ತಿಂಗಳು 20ಕ್ಕೆ ಸಮನ್ಸ್ ಕಳುಹಿಸಲಾಗಿತ್ತು. 23 ಸಭಾ ಸಮಿತಿ ಮುಂದೆ ಹಾಜರಾಗಬೇಕು ಈ ವಿಷಯದಲ್ಲಿ ವಹಿಸುತ್ತಿರುವ ನಿರ್ಲಕ್ಷ್ಯ ಸಂವಿಧಾನಿಕ ಹಕ್ಕಿನ ಉಲ್ಲಂಘನೆ ಎಂದು ಮುನ್ನೆಚ್ಚರಿಕೆಯನ್ನೂ ಸಮಿತಿ ನೀಡಿತ್ತು.

ಫೇಸ್‍ಬುಕ್ ಮುಖ್ಯಸ್ಥ ಹಾಜರಾಗದಿರುವುದು ದಿಲ್ಲಿ ವಿಧಾನಸಭೆಯೊಂದಿಗೆ ಮಾತ್ರವಲ್ಲ ದಿಲ್ಲಿಯ ಜನತೆಯೊಂದಿಗಿನ ಅವಹೇಳನ ಎಂದು ಚಡ್ಡ ನೆನಪಿಸಿದರು.

ಈ ಪ್ರಕಾರ 23ಕ್ಕೆ ಸಮಿತಿಯ ಮುಂದೆ ಅಜಿತ್ ಮೋಹನ್ ಹಾಜರಿರಬೇಕಿತ್ತು. ಆದರೆ ಅದರಿಂದ ಪಾರಾಗಲು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ. ಕೇಂದ್ರ ಸರಕಾರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಫೇಸ್‍ಬುಕ್‍ಗಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಫೇಸ್‍ಬುಕ್ ಇಂಡಿಯಕ್ಕಾಗಿ ಹಾಜರಾಗಿದ್ದಾರೆ. ಶಿಕ್ಷೆಯ ಬೆದರಿಕೆಯೊಂದಿಗೆ ಬಲವಂತದಿಂದ ವ್ಯಕ್ತಿಯನ್ನು ವಿಧಾನಸಭಾ ಸಮಿತಿಯ ಮುಂದೆ ಹಾಜರಾಗಲು ಹೇಳುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಸಾಳ್ವೆ ವಾದಿಸಿದರು.

ಇಂತಹ ತನಿಖಿಸುವ ಅಧಿಕಾರ ದಿಲ್ಲಿ ವಿಧಾನಸಭಾ ಸಮಿತಿಗಿಲ್ಲ ಎಂದು ಸಾಳ್ವೆ ವಾದಿಸಿದರು. ವಿಧಾನಸಭಾ ಸಮಿತಿಯ ಮುಂದಿನ ಕ್ರಮವನ್ನು ಮುಂದೂಡಲಾಗಿದೆ ಎಂದು ದಿಲ್ಲಿ ವಿಧಾನಸಭಾ ಸಮಿತಿಗಾಗಿ ಹಾಜರಾದ ಕಾಂಗ್ರೆಸ್ ನಾಯಕ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟಿಗೆ ತಿಳಿಸಿದರು. ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.