ಆರೆಸ್ಸೆಸ್, ಐಎಸ್‍ಗೆ ಸಮಾನ ಎಂದ ತಮಿಳ್ನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ!

0
156

ಚೆನ್ನೈ,ಮೇ 14: ಭಯೋತ್ಪಾದನಾ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಸಮಾನವಾಗಿದೆ ಎಂದು ತಮಿಳ್ನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್‍.ಅಳಗಿರಿ ಹೇಳಿದ್ದಾರೆ. ಐಎಸ್‍ನಂತೆ ಆರೆಸ್ಸೆಸ್ ಕೂಡ ಅವರ ಚಿಂತನೆಗಳನ್ನು ವಿರೋಧಿಸುವವರನ್ನು ದ್ವೇಷಿಸುತ್ತದೆ ಎಂದು ಮಕ್ಕಳ್ ನೀತಿ ಮಯ್ಯಂ (ಎಂಎನ್‍ಎಂ) ಅಧ್ಯಕ್ಷ ಕಮಲ್ ಹಾಸನ್ ಹೇಳಿಕೆಗೆ ಬೆಂಬಲ ಸೂಚಿಸಿ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.ಕಮಲ್ ಹಾಸನ್ ಮಹಾತ್ಮಾ ಗಾಂಧಿ ಹಂತಕ ನಾಥೂ ರಾಂ ಗೋಡ್ಸೆಯನ್ನು ಹಿಂದೂ ಭಯೋತ್ಪಾದಕ ಎಂದು ಕರೆದಿದ್ದರು.

“ನಾನು ಕಮಲ್ ಹಾಸನ್‍ರ ಹೇಳಿಕೆಯನ್ನು ಸಾವಿರ ಶೇಕಡ ಬೆಂಬಲಿಸುತ್ತೇನೆ. ಇಸ್ಲಾಮಿಕ್ ಸ್ಟೇಟ್‍ನಂತೆ ಹಿಂದುಸ್ತಾನದಲ್ಲಿ ಆರೆಸ್ಸೆಸ್ ಆಗಿದೆ. ಅರಬ್ ದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಹೇಗಿದೆಯೋ ಅದರಂತೆ ತಮ್ಮ ಆಶಯವನ್ನು ವಿರೋಧಿಸುವವರನ್ನು ನಿರ್ಮೂಲನ ಮಾಡಲು ಆರೆಸ್ಸೆಸ್, ಜನಸಂಘ, ಹಿಂದೂ ಮಹಾಸಭಾ ನಂಬಿದೆ” ಎಂದು ಕೆಎಸ್ ಅಳಗಿರಿ ಹೇಳಿದರು. ತಮ್ಮ ಆಶಯದಲ್ಲಿ ನಂಬಿಕೆ ಇರಿಸದಿದ್ದವರು ಮುಸ್ಲಿಮರಾದರೂ ಮುಗಿಸಿಬಿಡುತ್ತೇವೆ ಎಂದು ಐಎಸ್ ಹೇಳುತ್ತದೆ. ಸುಮ್ಮನೆ ಮುಗಿಸಿ ಬಿಡುವುದೆನ್ನುವುದಲ್ಲ. ಲೋಕದಿಂದಲೇ ನಿವಾರಿಸಿ ಬಿಡುವುದು. ತೀವ್ರ ಬಲಪಂಥೀಯ ಮತ್ತು ಎಡ ಪಕ್ಷವೂ ಧಾರ್ಮಿಕ ಮೂಲಭೂತವಾದಿಗಳೂ ಇದೇ ನೀತಿಯನ್ನು ಅನುಸರಿಸುತ್ತಾರೆ ಎಂದು ಅಳಗಿರಿ ಹೇಳಿದರು.