20 ದೇಶಗಳು 100 ಕೋಟಿ ಕೊರೋನ ವ್ಯಾಕ್ಸಿನ್ ಡೋಸ್ ಆರ್ಡರ್ ಮಾಡಿವೆ- ರಷ್ಯ

0
236

ಸನ್ಮಾರ್ಗ ವಾರ್ತೆ

ಮಾಸ್ಕೊ,ಆ.12: ನೂರು ಕೋಟಿ ಕೊರೋನ ವ್ಯಾಕ್ಸಿನ್ ಡೋಸ್‌‌ಗಾಗಿ 20 ದೇಶಗಳು ಪೂರ್ವಭಾವಿಯಾಗಿ ಆರ್ಡರ್ ನೀಡಿವೆ ಎಂದು ರಷ್ಯ ತಿಳಿಸಿದೆ.

ಸ್ಪುಟ್ನಿಕ್ ವಿ ಎಂಬ ವಿಶ್ವದ ಮೊದಲ ಕೊರೋನ ವ್ಯಾಕ್ಸಿನ್ ಸರಬರಾಜಿಗೆ ರಷ್ಯ ಅನುಮತಿ ನೀಡಿದೆ. ಸೋವಿಯತ್ ಯೂನಿಯನ್‍ನ ಸ್ಯಾಟ್ ಲೈಟ್ ಸ್ಪುಟ್ನಿಕ್‍ನ ಹೆಸರನ್ನು ವ್ಯಾಕ್ಸಿನ್‍ಗೆ ಇರಿಸಲಾಗಿದೆ.

ಕೊರೋನ ವ್ಯಾಕ್ಸಿನ್ ಮೂರನೇ ಹಂತದ ಪರೀಕ್ಷೆ ಬುಧವಾರ ಆರಂಭವಾಗಿದೆ. ವಾಣಿಜ್ಯ ಉತ್ಪಾದನೆಯನ್ನು ಸೆಪ್ಟಂಬರಿನಲ್ಲಿ ಮಾಡಲಾವುದು ಎಂದು ವ್ಯಾಕ್ಸಿನ್ ಯೋಜನೆಗೆ ಆರ್ಥಿಕ ಸಹಾಯ ನೀಡಿದ ರಷ್ಯನ್ ಡೈರಕ್ಟರೇಟ್ ಇನ್‍ವೆಸ್ಟ್‌ಮೆಂಟ್ ಫಂಡ್ ಮುಖ್ಯಸ್ಥ ಕಿರಿಲ್ ದಿಮಿತ್ರೋವ್ ಹೇಳಿದರು.

ವಿದೇಶದಿಂದ ವ್ಯಾಕ್ಸಿನ್‍ಗೆ ಹೆಚ್ಚಿನ ಬೇಡಿಕೆ ಇದೆ. 20 ದೇಶಗಳಿಂದ ನೂರು ಕೋಟಿಗಿಂತಲೂ ಹೆಚ್ಚು ಡೋಸ್ ಬೇಡಿಕೆಯು ಬಂದಿದ್ದು ಅದಕ್ಕೆ ಪೂರ್ವಭಾವಿಯಾಗಿ ಆರ್ಡರ್ ಸಿಕ್ಕಿದೆ. ವಿದೇಶಿ ಪಾಲುದಾರರು ಸೇರಿ ಐದು ದೇಶಗಳಲ್ಲಿ 50 ಕೋಟಿ ಡೋಸ್ ನಿರ್ಮಿಸಲು ರಷ್ಯ ಸಿದ್ಧ ಎಂದು ದಿಮಿತ್ರಿಯೋವ್ ತಿಳಿಸಿದರು.

ಇದೇವೇಳೆ, ರಷ್ಯದ ಸಾಧನೆಯನ್ನು ಕೀಳ್ಮಟ್ಟಕ್ಕಿಳಿಸಲು ಮತ್ತು ಅಪ್ರಚಾರ ನಡೆಸುವ ಯತ್ನವೂ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.