ಸಿಂಧ್ಯಾರ ಮಾರ್ಗವನ್ನು ಸಚಿನ್ ಪೈಲೆಟ್ ಅನುಸರಿಸಬಾರದು; ಕಾಂಗ್ರೆಸ್‍ನಲ್ಲಿ ಉತ್ತಮ ಭವಿಷ್ಯವಿದೆ- ದಿಗ್ವಿಜಯ ಸಿಂಗ್

0
391

ಸನ್ಮಾರ್ಗ ವಾರ್ತೆ

ಭೋಪಾಲ,ಜು.20: ರಾಜಸ್ತಾನ ಕಾಂಗ್ರೆಸ್‌ನ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸಚಿನ್ ಪೈಲಟ್‍ರ ಕುರಿತು ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿನ್ ಪೈಲಟ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿಕೊಂಡ ಜ್ಯೋತಿರಾದಿತ್ಯ ಸಿಂಧ್ಯಾರ ದಾರಿಯನ್ನು ಅನುಸರಿಸಬಾರದು. ಸಚಿನ್‍ಗೆ ಕಾಂಗ್ರೆಸ್‍ನಲ್ಲಿ ಉತ್ತಮ ಭವಿಷ್ಯವಿದೆ. ರಾಜಸ್ಥಾನದ ಬಿಕ್ಕಟ್ಟಿನ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ನೀವಿನ್ನೂ ಯುವಕರು. ಒಂದೊಮ್ಮೆ ಗೆಹ್ಲೋಟ್ ನಿಮಗೆ ಮೋಸ ಮಾಡಿರಬಹುದು. ಆದರೆ ಎಲ್ಲ ಸಮಸ್ಯೆಗಳನ್ನು ಸಮನ್ವತೆಯಿಂದ ಪರಿಹರಿಸಿಕೊಳ್ಳಬಹುದು. ಸಿಂಧ್ಯಾರ ತಪ್ಪನ್ನು ನೀವು ಮಾಡಬೇಡಿ. ಬಿಜೆಪಿ ವಿಶ್ವಾಸ ಯೋಗ್ಯವಲ್ಲ. ಬೇರೆ ಪಾರ್ಟಿಯಿಂದ ಹೋದವರು ಯಾರೂ ಅಲ್ಲಿ ದಡ ತಲುಪುವುದಿಲ್ಲ ಎಂದು ಸಿಂಗ್ ಸಲಹೆ ನೀಡಿದ್ದಾರೆ.

ಸಚಿನ್ ನನಗೆ ಪುತ್ರನಂತೆ. ಅವನು ನನ್ನನ್ನು ಗೌರವಿಸುತ್ತಾನೆ. ನಾನು ಅವನನ್ನು ಇಷ್ಟಪಡುತ್ತೇನೆ. ಅವನಿಗೆ ಮೂರು ನಾಲ್ಕು ಬಾರಿ ಕರೆ ಮಾಡಿದ್ದೆ. ಸಂದೇಶ ಕಳುಹಿಸಿದ್ದೆ. ಅವನು ಹಿಂದಿನಂತಿಲ್ಲ. ಹಿಂದೆ ತಕ್ಷಣ ಪೋನೆತ್ತಿಕೊಳ್ಳುತ್ತಿದ್ದ. ಪೈಲಟ್ ಹೊಸ ಪಾರ್ಟಿ ಕಟ್ಟುತ್ತಾರೆ ಎಂದು ಕೇಳಿದೆ. ಅದು ಯಾಕೆ. ಕಾಂಗ್ರೆಸ್ ಅವನಿಗೆ ಏನೂ ಕೊಟ್ಟಿಲ್ಲವೆಂದೇ.

ಸಚಿನ್ 26ನೇ ವರ್ಷಕ್ಕೆ ಸಂಸದರಾಗಿ, 32 ವರ್ಷದಲ್ಲಿ ಕೇಂದ್ರ ಸಚಿವರಾಗಿ. 34ನೆ ವರ್ಷದಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ಅಷ್ಟಯಾಕೆ 38 ವರ್ಷದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ ಇದಕ್ಕಿಂತ ಆಚೆ ಏನು ಬೇಕಾಗಿದೆ. ಇನ್ನೂ ಸಮಯ ಇದೆ. ಜೊತೆಗಿರುವವರಲ್ಲಿ ವಿಶ್ವಾಸ ಇದ್ದರೆ ಅವರನ್ನು ಯಾಕೆ ಹೊಟೇಲಲ್ಲಿರಿಸಿದ್ದು. ಪೈಲಟ್ ಹಿಂದಿನದೆಲ್ಲವನ್ನೂ ಮರೆತು ಕಾಂಗ್ರೆಸನ್ನು ಬಲಪಡಿಸಲು ಕೆಲಸ ಮಾಡಬೇಕೆಂದು ದಿಗ್ವಿಜಯ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.