ಸಫಿಯಾ ವೇಣೂರು ರವರಿಗೆ ಡಾಕ್ಟರೇಟ್ ಪದವಿ

0
447

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ (ಮಂಗಳಗಂಗೋತ್ರಿ) ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕಿಯಾಗಿರುವ ಸಫಿಯಾರವರು, ವಿವಿಯ ವಿಶ್ರಾಂತ ಉಪನ್ಯಾಸಕಿ ಪ್ರೊ. ವಹೀದಾ ಸುಲ್ತಾನರವರ ಮಾರ್ಗದರ್ಶನದಲ್ಲಿ ಮಂಗಳೂರು ವಿ.ವಿ.ಯಲ್ಲಿ ಮಂಡಿಸಿದ Impact of social networking sites among media professionals in Karnataka( ಇಂಪ್ಯಾಕ್ಟ್ ಆಫ್ ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ಸ್ ಅಮೊಂಗ್ ಮೀಡಿಯಾ ಪ್ರೊಫೆಶನಲ್ಸ್ ಇನ್ ಕರ್ನಾಟಕ) ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.

ಇವರು ಕೋಸ್ಟಲ್ ಡೈಜೆಸ್ಟ್ ವೆಬ್‌ಸೈಟ್‌ನ ಸಂಪಾದಕ, ಪತ್ರಕರ್ತ ನಈಮ್ ಸಿದ್ದೀಖಿಯವರ ಪತ್ನಿ. ದಿವಂಗತ ಎಂ.ಅಬ್ದುಲ್ ಹಮೀದ್ ವೇಣೂರು ಮತ್ತು ರಾಬಿಯಮ್ಮರ ಪುತ್ರಿಯಾಗಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ನಿವಾಸಿಯಾಗಿರುವ ಡಾ. ಸಫಿಯಾರವರು, ಪ್ರಸ್ತುತ ಕುಟುಂಬದೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here