ಓವೈಸಿ ಬಿಹಾರದಲ್ಲಿ ಬಿಜೆಪಿಗೆ ನೆರವಾದರು; ಯುಪಿ-ಬಂಗಾಳದಲ್ಲೂ ಅವರು ಬಿಜೆಪಿಗೆ ನೆರವಾಗುತ್ತಾರೆ: ಸಾಕ್ಷಿ ಮಹಾರಾಜ್

0
222

ಸನ್ಮಾರ್ಗ ವಾರ್ತೆ

ಲಕ್ನೋ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ. ಬುಧವಾರ ಅಸದುದ್ದೀನ್ ಒವೈಸಿ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ ಅವರು, ಓವೈಸಿ ಬಿಹಾರದಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈಗ ಯುಪಿಯಲ್ಲಿ ಮತ್ತು ಬಂಗಾಳದಲ್ಲೂ ಸಹಾಯ ಮಾಡಲು ಬರುತ್ತಾರೆ. ಲಕ್ನೌದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರು, “ಉತ್ತರ ಪ್ರದೇಶದಲ್ಲಿ ಓವೈಸಿಗೆ ದೇವರು ಶಕ್ತಿ ನೀಡಲಿ” ಎಂದು ಹೇಳಿದರು.

ಓವೈಸಿ ಮಂಗಳವಾರ ಉತ್ತರಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಅವರು ಮೊದಲು ಅಜಮ್‌ಗಢ ಕ್ಕೆ ಭೇಟಿ ನೀಡಿದ್ದು, ಇದಲ್ಲದೆ ಜೌನ್‌ಪುರಕ್ಕೂ ಭೇಟಿ ನೀಡಿದ್ದಾರೆ.