ಸಾಲಿಹಾತ್ ಬಾಲಕಿಯರ ಪ. ಪೂ. ಕಾಲೇಜಿಗೆ 97.87% ಫಲಿತಾಂಶ

0
503

ಸನ್ಮಾರ್ಗ ವಾರ್ತೆ

ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವಕಾಲೇಜು 2019-20 ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 97.87% ಫಲಿತಾಂಶ ಪಡೆದಿದೆ.

ಒಟ್ಟು ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣೆಯಲ್ಲಿ , 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 03 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ಹೊಂದಿರುತ್ತಾರೆ. ಕಲಾ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 100 % ಫಲಿತಾಂಶ ದಾಖಲಿಸಿದೆ.

ಕಲಾ ವಿಭಾಗದಲ್ಲಿ ಮುಸ್ಕಾನ್ 546, ವಾಣಿಜ್ಯ ವಿಭಾಗದಲ್ಲಿ ಐಶಾ ಪರ್ವಿನ್ 572, ಮುಝಾ ಝಿನಬ್ 572, ಸಿಮಾಝ್ ಪರ್ವಿನ್ 566, ವಿಜ್ಞಾನ ವಿಭಾಗದಲ್ಲಿ ಫಾತಿಮಾ ಫಾಝಿಲಾ 564, ಸುಹಾ ಫಾತಿಮಾ 541 ಅಂಕ ಗಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.