ಪೌರತ್ವ ಮಸೂದೆಯ ವಿರುದ್ಧ ಸಮಸ್ತದಿಂದ ಪ್ರತಿಭಟನಾ ಸಮ್ಮೇಳನ: ಪ್ರಧಾನಿ, ಗೃಹ ಸಚಿವರ ಭೇಟಿ

0
1371

ಸನ್ಮಾರ್ಗ ವಾರ್ತೆ-

ಕೇರಳ, ಡಿ. 12: ಪೌರತ್ವ ತಿದ್ದು ಪಡಿ ಮಸೂಸೆಯ ವಿರುದ್ಧ ಕೇರಳ ವಿದ್ವಾಂಸರ ಸಂಘಟನೆ ಸಮಸ್ತ ಪ್ರತಿಭಟನಾ ಸಮ್ಮೇಳನವನ್ನು ಮುಂದಿನವಾರ ಕೋಝಿಕ್ಕೋಡಿನಲ್ಲಿ ಆಯೋಜಿಸಲಿದೆ ಎಂದು ಸಮಸ್ತ ಕೇರಳ ಜಮ್ ಇಯ್ಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮಸ್ತೆ ಕರೆದಿದ್ದ ಮುಸ್ಲಿಂ ಧರ್ಮ ಸಂಘಟನೆಗಳ ಸಭೆಯನ್ನು ಮುಂದೂಡಿದ್ದು ಲೀಗ್ ಮಧ್ಯ ಪ್ರವೇಶಿಸಿದ್ದರಿಂದ ಎಂದು ಜಿಫ್ರಿ ತಂಙಳ್ ಹೇಳಿದರು.

ದೇಶದ ಸಂವಿಧಾನ ಕೊಡಮಾಡುವ ಹಕ್ಕುಗಳನ್ನು ಇಲ್ಲದಾಗಿಸುವ ಪೌರತ್ವ ತಾರತಮ್ಯದ ವಿರುದ್ಧ ಪ್ರತಿಭಟನಾ ಧ್ವನಿ ಎತ್ತುವ ಸಮ್ಮೇಳನ ಆಗಿದ್ದು ಪಾಣಕ್ಕಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಞಳ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮಸ್ತ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೇರಳದ ಎಲ್ಲ ಸಂಸದರನ್ನು ಭಾಗವಹಿಸಲು ಕೋರಲಾಗುವುದು. ವಿವಿಧ ರಾಜಕೀಯ ಪಾರ್ಟಿಯ ಪ್ರತಿನಿಧಿಗಳು ಕೂಡ ಭಾಗವಹಿಸಲಿರುವರು.

ಪ್ರಜೆಗಳ ನಡುವೆ ತಾರತಮ್ಯ ತೋರಿಸುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕೆಂದು ಸಮಸ್ತ ನಾಯಕರು ಆಗ್ರಹಿಸಿದರು. ಪ್ರಧಾನಿ, ಗೃಹ ಸಚಿವರನ್ನು ಸಮಸ್ತ ನಾಯಕರು ನೇರವಾಗಿ ಭೇಟಿಯಾಗಲಿದ್ದಾರೆ. ಕೋಝಿಕ್ಕೋಡಿನಲ್ಲಿ ನಡೆಯುವ ಪ್ರತಿಭಟನಾ ಸಮ್ಮೇಳನ ಕಾರ್ಯಕ್ರಮಕ್ಕೆ ಶೀಘ್ರದಲ್ಲಿ ಅಂತಿಮ ರೂಪ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಯಕರು ತಿಳಿಸಿದರು.