ಅಮೆರಿಕದ ಅತೀ ಕ್ರೂರಿ ಸರಣಿ ಹಂತಕ ನಿಧನ

0
516

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.31: ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕ್ರೂರಿಯಾದ ಸೀರಿಯಲ್ ಕಿಲ್ಲರ್ ಸ್ಯಾಮುವೇಲ್ ಲಿಟಿಲ್ ನಿಧನನಾಗಿದ್ದು ಈತನಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಜೈಲು ಅಧಿಕಾರಿಗಳು ಅವನ ಸಾವನ್ನು ದೃಢಪಡಿಸಿದ್ದಾರೆ ಎಂದು ಎಫ್‍ಬಿಐ ವರದಿ ಮಾಡಿದೆ. ಪರೋಲ್ ಇಲ್ಲದೆ 2014ರಿಂದ ಆತ ಜೈಲುಶಿಕ್ಷೆ ಅನುಭವಿಸುತ್ತಿದ್ದ. 93 ಮಂದಿಯನ್ನು 1970ರಿಂದ 2005ರವರೆಗೆ ಕೊಲೆ ಮಾಡಿದ್ದ. ಈತನಿಂದ ಕೊಲೆಯಾದವರಲ್ಲಿ ಬಹುಪಾಲು ಮಹಿಳೆಯರಾಗಿದ್ದರು. ದಶಕಗಳಷ್ಟು ಕಾಲ ಈತ ಅಜ್ಞಾತನಾಗಿದ್ದು ಮಾದಕವಸ್ತು ಪ್ರಕರಣದಲ್ಲಿ 2012ರಲ್ಲಿ ಸೆರೆಸಿಕ್ಕಿದ ಮೇಲೆ ಸರಣಿ ಹತ್ಯೆಯ ರಹಸ್ಯ ಮುನ್ನೆಲೆಗೆ ಬಂದಿತ್ತು.

ಮಾಜಿ ಬಾಕ್ಸರ್ ಕೂಡ ಆಗಿರುವ ಸ್ಯಾಮುವೇಲ್ ಮಾದಕದ್ರವ್ಯದ ದಾಸರಾಗಿದ್ದವರು ಮತ್ತು ಲೈಂಗಿಕ ಕಾರ್ಯಕರ್ತರೇ ಹೆಚ್ಚಾಗಿ ಈತನಿಂದ ಬಲಿಯಾಗಿದ್ದಾರೆ. ಕೊಲೆಯಾಗಿದ್ದವರಲ್ಲಿ ಹೆಚ್ಚಿನ ಮಹಿಳೆಯರನ್ನು ಗುರುತಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಪ್ರಕರಣದಲ್ಲಿ ಸ್ಯಾಮುವೇಲ್ ಹೇಳಿಕೆಯ ಆಧಾರದಲ್ಲಿ ಕೊಲೆಯಾದವರನ್ನು ಗುರುತಿಸಲಾಗಿದೆ. ಎಂದೂ ಸೆರೆ ಸಿಕ್ಕಲಾರೆ ಎಂಬ ಧೈರ್ಯ ಈತನಿಗೆ ಇಷ್ಟು ಕೊಲೆ ಮಾಡಲು ಪ್ರೇರೇಪಿಸಿತ್ತು.

ಕೊಲೆಯಾದವರ ಸಂಬಂಧಿಕರು ದೂರು ನೀಡಿಲ್ಲ ಎಂದು ಸಾಮುವೇಲ್ ಭಾವಿಸಿಕೊಂಡಿದ್ದ. ಬಾಕ್ಸಿಂಗ್ ತಾರೆಯಾಗಿದ್ದ ಈತನ ನಿಜವಾದ ಹೆಸರು ಸ್ಯಾಮುವೇಲ್ ಮಕ್ಡೋವಲ್ ಎಂದು. ಥಳಿತದಿಂದ ನಿಶಕ್ತರಾದ ಬಳಿಕ ಕತ್ತು ತಿರುಚಿ ಕೊಲೆ ಮಾಡುವುದು ಸ್ಯಾಮುವೇಲನ ರೀತಿಯಾಗಿತ್ತು. ಕೊಲೆಯಾದವರ ದೇಹದಲ್ಲಿ ಗಾಯಗಳೋ, ಅಂತಹ ಕಲೆಗಳೋ ಕಂಡು ಬಂದಿರಲಿಲ್ಲ.