ರೈತ ಪ್ರತಿಭಟನೆ ದಮನಿಸುವುದನ್ನು ನಿಲ್ಲಿಸಿ: ರಾಷ್ಟ್ರಪತಿಗೆ ಸಂಯುಕ್ತ ಕಿಸಾನ್ ಮೋರ್ಚಾ ಪತ್ರ

0
318

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಆಂದೋಲನಗಳನ್ನು ದಮನಿಸುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ರಾಷ್ಟ್ರಪತಿಗೆ ಸಂಯುಕ್ತ ಕಿಸಾನ್ ಮೋರ್ಚಾ ಪತ್ರ ಬರೆದಿದೆ. ಪತ್ರದಲ್ಲಿ ಪ್ರತಿಭಟನೆಯನ್ನು ದಮನಿಸುವ ನಿಲುವನ್ನು ಕೇಂದ್ರ ಕೊನೆಗೊಳಿಸಬೇಕೆಂದು ಕಿಸಾನ್ ಮೋರ್ಚಾ ಆಗ್ರಹಿಸಿದೆ.

ಸುಳ್ಳು ಪ್ರಕರಣಗಳನ್ನು ದಾಖಲಿಸಿ ನೂರಕ್ಕೂ ಹೆಚ್ಚು ನಿರಪರಾಧಿಗಳಾದ ರೈತರನ್ನು ಕೇಂದ್ರ ಸರಕಾರ ಜೈಲಿಗೆ ತಳ್ಳಿದೆ. ಇವರ ಮೇಲೆ ಹೊರಿಸಲಾದ ಆರೋಪಗಳನ್ನು ಹಿಂತೆಗೆಯಬೇಕು. ಅವರನ್ನು ಬಿಡುಗಡೆಗೊಳಿಸಬೇಕು. ರೈತ ನಾಯಕರ ವಿರುದ್ಧ ಪೊಲೀಸರು ಮತ್ತು ಇತರ ಕೇಂದ್ರ ಏಜೆನ್ಸಿಗಳು ನೋಟಿಸು ಕಳುಹಿಸುವುದು ಮತ್ತು ತನಿಖೆ ಘೋಷಿಸುವುದನ್ನು ನಿಲ್ಲಿಸಬೇಕೆಂದು ರೈತ ಸಂಘಟನೆ ರಾಷ್ಟ್ರಪತಿ ರಾಮನಾಥ್ ಕೋವಿಂದರವರಲ್ಲಿ ಪತ್ರದ ಮೂಲಕ ಭಿನ್ನವಿಸಿದೆ.

ಸಂಯುಕ್ತ ಕಿಸಾನ್ ಮೋರ್ಚಾ ಅಲ್ಲದೆ, ತಾಲೂಕು, ಜಿಲ್ಲೆಗಳಲ್ಲಿ ಕಾರ್ಯವೆಸಗುವ ಹಲವು ರೈತ ಸಂಘಟನೆಗಳು ಕೂಡ ರಾಷ್ಟ್ರಪತಿಗೆ ಮನವಿ ಸಲ್ಲಿಸಲಿದೆ. ರೈತ ಹೋರಾಟವನ್ನು ಬೆಂಬಲಿಸಿದ ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿಸಿದ ಯುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ನೀಡಿರುವುದನ್ನು ಕಿಸಾನ್ ಮೋರ್ಚಾ ಸ್ವಾಗತಿಸಿದೆ.