ಸನ್ಮಾರ್ಗ ಕುರ್‍ಆನ್ ಕ್ವಿಝ್ ಸ್ಪರ್ಧೆ: ನೂರ್ ಜಹಾನ್ ಮಂಗಳೂರು ಪ್ರಥಮ

0
910

ಮಂಗಳೂರು: ಸನ್ಮಾರ್ಗ ಪತ್ರಿಕೆಯು ತನ್ನ ರಮಝಾನ್ ವಿಶೇಷಾಂಕದಲ್ಲಿ ಏರ್ಪಡಿಸಿದ್ದ ಕುರ್‍ಆನ್ ಕ್ವಿಝ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಇಲ್ಲಿನ ಹಿದಾಯತ್ ಸೆಂಟರ್ ನಲ್ಲಿ ಜುಲೈ 20 ರಂದು ನಡೆಯಿತು.

ನೂರ್ ಜಹಾನ್ ಮಂಗಳೂರು ಅವರು ಪ್ರಥಮ ಬಹುಮಾನವಾದ 6 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಪಡೆದರು.

ಸಲ್ಮತ್ ಬೆಂಗಳೂರು ದ್ವಿತೀಯ ಬಹುಮಾನವಾದ ರೂ. 5 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಪಡೆದರು.

ಝರೀನಾ ಬೇಗಮ್ ಉಳ್ಳಾಲ ಅವರು ತೃತೀಯ ಬಹುಮಾನವಾದ ರೂ. 4 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಪಡೆದರು.

ಸಮಾಧಾನಕರ ಬಹುಮಾನವಾಗಿ ತಲಾ 1 ಸಾವಿರ ರೂ. ಮತ್ತು ಸ್ಮರಣಿಕೆಯನ್ನು

ಸಿಹಾನ ಬಿ.ಎಂ. ಉಳ್ಳಾಲ,

ಮರ್ಯಮ್ ಅಫ್ನಾನ್ ಬಂಟ್ವಾಳ,

ಝರೀನಾ ಸಾಲಿಹ್ ಪುತ್ತೂರು,

ಸಲೀಮಾ ಎಂ.ಹೆಚ್. ಪಾಣೆಮಂಗಳೂರು,

ಮರ್ಯಮ್ ನುಶ್ರತ್ ಮಂಗಳೂರು,

ಅಝ್ಮತ್ ನಯಾಝ್ ಮಂಗಳೂರು,

ರಫೀನಾ ಬೀಬಿ ಮಂಗಳೂರು,

ಶಹನಾಝ್ ಝೈನಬ್ ಹುಸೇನ್ ಕಂದಕ್,

ಫಾತಿಮಾ ನಿಶಾ ಪೆರ್ಮನ್ನೂರು,

ಹಿದಾಯತುಲ್ಲಾ ದೇರಳಕಟ್ಟೆ ಇವರು ಪಡೆದರು. ಸ್ಪರ್ಧಾ ವಿಜೇತರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮೌಲ್ಯ ಮಾಪನ ಮಾಡಿರುವ ಮಿಸ್ಬಾ ತರೀಕೆರೆ ಅವರಿಗೆ ನಗದು ರೂಪಾಯಿ ಮತ್ತು ಸ್ಮರಣಿಕೆಯನ್ನು ನೀಡಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಿ. ಯೂಸುಫ್‍ರವರು ಮಾತನಾಡುತ್ತಾ, “ಕುರ್‍ಆನ್ ಆಶಯದಂತೆ ಬಾಳಿ ಬದುಕಿದರೆ ಉತ್ತಮ ಸಮೂಹವನ್ನು ಬೆಳೆಸಬಹುದು. ಅದಕ್ಕೆ ಅಧ್ಯಯನದ ಅಗತ್ಯವಿದೆ. ಸನ್ಮಾರ್ಗವು ಇಸ್ಲಾಮಿನ ಕುರಿತು ತಪ್ಪುಕಲ್ಪನೆ ನೀಗಿಸುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ” ಎಂದರು.

ಜ.ಇ. ಮಂಗಳೂರು ಶಾಖೆಯ ಅಧ್ಯಕ್ಷರಾದ ಕೆ.ಎಂ. ಅಶ್ರಫ್‍ರವರು ಸಮಾರೋಪ ನುಡಿಗಳನ್ನಾಡುತ್ತಾ, “ಮಹಿಳೆ ಜ್ಞಾನಿಯಾದರೆ ಕುಟುಂಬವೇ ಜ್ಞಾನಿಯಾದಂತೆ. ಕುರ್‍ಆನ್ ಎಲ್ಲದಕ್ಕೂ ಗುಣೌಷಧವಾಗಿದೆ. ಅಮಾನವೀಯತೆಯ ಮಾನಸಿಕ ಕಾಯಿಲೆಯನ್ನು ಅದು ಹೋಗಲಾಡಿಸುತ್ತದೆ” ಎಂದು ಹೇಳಿದರು.

ಮಂಗಳೂರಿನ ಸುಲ್ತಾನ್ ಡೈಮ೦ಡ್ & ಗೋಲ್ಡ್ ಸಂಸ್ಥೆಯು ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಿತು. ವೇದಿಕೆಯಲ್ಲಿದ್ದ ಅತಿಥಿಗಳು ಬಹುಮಾನವನ್ನು ವಿತರಿಸಿದರು. ಸನ್ಮಾರ್ಗ ಸಂಪಾದಕ ಏ.ಕೆ. ಕುಕ್ಕಿಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸನ್ಮಾರ್ಗ ಪತ್ರಿಕೆಯ ಪ್ರಕಾಶಕರಾದ ಎಂ. ಸಾದುಲ್ಲಾ, ಕೆ.ಎಂ. ಶರೀಫ್‍ರವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಹಮ್ಮದ್ ಆರಿಫ್ ಕಲಾಯಿ ಕುರ್‍ಆನ್ ಪಠಿಸಿದರು. ಸನ್ಮಾರ್ಗ ಉಪಸಂಪಾದಕ ಸಲೀಮ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.