ಸತತ 16 ಗಂಟೆಯ ಪರಿಶ್ರಮದಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

0
591

ಪುಣೆ: ಪುಣೆಯಲ್ಲಿ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ ಹದಿನಾರು ಗಂಟೆಯ ಅವಿರತ ಪ್ರಯತ್ನದಲ್ಲಿ ರಕ್ಷಿಸಲಾಗಿದೆ. ಕೊಳವೆ ಬಾವಿಗೆ ಬಿದ್ದ ಮಗು 10 ಅಡಿ ಆಳದಲ್ಲಿ ತೂಗಾಡಿ ನಿಂತಿತ್ತು. ರಾಷ್ಟ್ರೀಯ ದುರಂತ ಪರಿಹಾರ ದಳ, ಪೊಲೀಸರು ಸೇರಿ ರವಿ ಪಂಡಿತ್ ಬಿಲ್ ಎಂಬ ಆರು ವರ್ಷದ ಬಾಲಕನನ್ನು ರಕ್ಷಿಸಿದ್ದಾರೆ.

ಕಳೆದ ದಿವಸ ಸಂಜೆ ಆಟವಾಡುತ್ತಿದ್ದ ಮಗು ಕೊಳವೆ ಬಾವಿಗೆ ಬಿದ್ದಿದೆ. ಘಟನೆ ನಡೆದಾಗ ಮಗುವಿನ ತಂದೆ,ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ದರು. ತೊರಾಂಡ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಹಿಂದೆಯೂ ಸಮಾನವಾದ ಘಟನೆಗಳು ಭಾರತದಲ್ಲಿ ನಡೆದಿವೆ. ತಮಿಳ್ನಾಡು, ಬಿಹಾರ, ಮಧ್ಯಪ್ರದೇಶ, ಗುಜರಾತ್‍ಗಳಲ್ಲಿ ಮಕ್ಕಳು ಕೊಳವೆ ಬಾವಿಯೊಳಗೆ ಬಿದ್ದ ಘಟನೆಗಳು ವರದಿಯಾಗಿದ್ದವು.