ಮಸ್ಜಿದುಲ್ ಹರಮ್‌ನಲ್ಲಿ ಬೃಹತ್ ನೆರಳು ಕೊಡೆಗಳ ಸ್ಥಾಪನೆಗೆ ತೀರ್ಮಾನ

0
676

ಸನ್ಮಾರ್ಗ ವಾರ್ತೆ

ಜಿದ್ದ,ಆ. 21: ಮಕ್ಕದ ಮಸ್ಚಿದುಲ್ ಹರಮ್‌ನ ವಿವಿಧ ಭಾಗಗಳಲ್ಲಿ ನೆರಳು ಕೊಡೆಗಳನ್ನು ಕೂಡಲೇ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಜಗತ್ತಿನ ಅತಿದೊಡ್ಡ ನೆರಳು ಕೊಡೆಗಳನ್ನು ಕಅಬಾವನ್ನು ಸೇರುವ ಮಸ್ಚಿದುಲ್ ಹರಮ್‌ನ ಅಂಗಳದಲ್ಲಿ ಸ್ಥಾಪಿಸಲಾಗುವುದು. ಹಜ್‍ನ ಬಳಿಕ ಛತ್ರಿಗಳನ್ನು ಸ್ಥಾಪಿಸುವುದಾಗಿ ಅಧಿಕಾರಿಗಳು ಈ ಹಿಂದೆಯೇ ತಿಳಿಸಿದ್ದರು. ರಮಝಾನ್‍ಗೆ ಮುಂಚಿತವಾಗಿ ಈ ಕೆಲಸ ಪೂರ್ಣಗೊಳ್ಳಲಿದ್ದು ತೆರೆದ ಟೆರೆಸ್‍ನಲ್ಲಿ ಕಅಬ ಪ್ರದಕ್ಷಿಣೆಗೆ ಇದರ ನೆರಳ ಸಹಾಯಕವಾಗಲಿದೆ.

ಜಗತ್ತಿನ ದೊಡ್ಡ ಕೊಡೆಗಳನ್ನು ಈಗ ಮದೀನಾದ ಪ್ರವಾದಿವರ್ಯರ(ಸ) ಮಸೀದಿಯ ಅಂಗಳದಲ್ಲಿ ಸ್ಥಾಪಿಸಲಾಗಿದ್ದು ಅಗತ್ಯನುಸಾರ ಅದನ್ನು ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆಯಿದೆ. ಸೂರ್ಯಾಸ್ತಮಾನವಾದಾಗ ಸ್ವಯಂಚಾಲಿತವಾಗಿ ಮದೀನಾದ ಮಸ್ಚಿದುನ್ನಬವಿಯ ಕೊಡೆಗಳು ಮುಚ್ಚಿಕೊಳ್ಳುತ್ತಿವೆ. ಇದಕ್ಕಿಂತಲೂ ದೊಡ್ಡ ಕೊಡೆಗಳನ್ನು ಹರಮ್‌ನಲ್ಲಿ ಸ್ಥಾಪಿಸಲಾಗುವುದು.

ಇದಕ್ಕೆ ಅಗತ್ಯವಿದ್ದ ಕೆಲಸಗಳು ಪೂರ್ಣಗೊಂಡಿದ್ದು ಎರಡು ಹರಮ್‌ಗಳ ಕಾರ್ಯಾಲಯ ವಿಭಾಗ ತಿಳಿಸಿದೆ. ಮೂರನೆಯ ಅಭಿವೃದ್ಧಿ ಯೋಜನೆ ಇಲ್ಲಿ ನಡೆಯುತ್ತಿದ್ದು ಕೊಡೆಗಳನ್ನು ಮೊದಲು ಸ್ಥಾಪಿಸಲಾಗುವುದು. ಇದರಿಂದ ಕಅಬಕ್ಕೆ ಪ್ರದಕ್ಷಿಣೆ ಬರುವವರು ಬಿಸಿಲಿನಿಂದ ರಕ್ಷಣೆ ಪಡೆಯುವರು. ಮುಂಬರುವ ರಮಝಾನ್‍ಗೆ ಮೊದಲು ಛತ್ರಿ ಅಳವಡಿಸುವ ಕಾರ್ಯ ಮುಗಿಯಲಿದೆ ಎಂದು ಉಭಯ ಹರಮ್‌ಗಳ ಕಾರ್ಯಾಲಯ ವಿಭಾಗ ತಿಳಿಸಿದೆ.