ಈ ವರ್ಷವೂ ವಿದೇಶಿ ಹಜ್ಜ್ ಯಾತ್ರಾರ್ಥಿಗಳಿಗೆ ಅನುಮತಿಯಿಲ್ಲ

0
414

ಸನ್ಮಾರ್ಗ ವಾರ್ತೆ

ಮಕ್ಕಾ (ಸೌದಿ ಅರೇಬಿಯಾ): ಕೊರೋನಾದ ಎರಡನೇ ಅಲೆಯ ಹಾನಿ ಸಂಪೂರ್ಣ ತೊಲಗದಿರುವ ಹಿನ್ನೆಲೆಯಲ್ಲಿ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ವಿದೇಶಿ ಹಜ್ಜ್ ಯಾತ್ರಿಕರಿಗೆ ಈ ವರ್ಷವೂ ಅನುಮತಿ ಇಲ್ಲ ಎಂದು ಸೌದಿ ಅರೇಬಿಯಾದ ಅಧಿಕಾರಿಗಳನ್ನು ಉದ್ಧರಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೂ ಈ ವಿಷಯದಲ್ಲಿ ಅಂತಿಮ ತೀರ್ಮಾನ ಇದಲ್ಲ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷದ ಕೂಡ ವಿದೇಶಿಯರಿಗೆ ಕೊರೊನದ ಕಾರಣದಿಂದ ಹಜ್ಜ್ ನಿರ್ವಹಿಸುವ ಅವಕಾಶ ಇರಲಿಲ್ಲ. ಬದಲಾಗಿ ನಿರ್ದಿಷ್ಟ ಸ್ವದೇಶಿಯರಿಗೆ ಹಜ್ಜ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಕಟ್ಟುನಿಟ್ಟಿನ ಕೊರೋನ ಪ್ರೊಟೊಕಾಲ್ ಪಾಲಿಸಿ ಹಜ್ಜ್ ಕರ್ಮಗಳನ್ನು ನಿರ್ವಹಿಸಲಾಗಿತ್ತು. ಈ ಬಾರಿ ವ್ಯಾಕ್ಸಿನೇಶನ್ ಎರಡು ಡೋಸ್ ಸ್ವೀಕರಿಸಿದವರಿಗೆ ಮಾತ್ರ ಹಜ್ಜ್ ನಿರ್ವಹಿಸುವ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಎರಡನೇ ಅಲೆ ತೀವ್ರವಾಗಿ ಕಾಡುತ್ತಿರುವುದರಿಂದ ಸರಕಾರ ನಿಲುವು ಬದಲಿಸಿದೆ.

ಕೊರೋನ ವ್ಯಾಕ್ಸಿನ್ ಪಡೆದುಕೊಂಡವರಿಗೆ ಉಮ್ರಾ ನಿರ್ವಹಿಸುವ ಅನುಮತಿ ನೀಡಲಾಗಿತ್ತು. ವ್ಯಾಕ್ಸಿನ್ ತೆಗೆದುಕೊಂಡ ಸೌದಿ ಪ್ರಜೆಗಳು ಮತ್ತು ದೇಶದಲ್ಲಿ ವಾಸ್ತವ್ಯ ಇರುವ ಬೇರೆ ದೇಶದವರಿಗೂ, ಈಗಾಗಲೇ ಕೊರೋನದಿಂದ ಗುಣಮುಖರಾದವರಿಗೂ ಈ ಸಲ ಹಜ್ಜ್ ಗೆ ಅನುಮತಿ ಇರಲಿದೆ ಎಂದು ವರದಿಗಳು ತಿಳಿಸಿವೆ.