ಭಾರತ ಸಹಿತ 20 ದೇಶಗಳ ಪ್ರಜೆಗಳಿಗೆ ಸೌದಿ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ

0
220

ಸನ್ಮಾರ್ಗ ವಾರ್ತೆ

ಜಿದ್ದ, ಫೆ.3: ಕೊರೋನ ಪ್ರಕರಣಗಳು ಸೌದಿ ಅರೇಬಿಯದಲ್ಲಿ ಮರುಕಳಿಸಿದ ಹಿನ್ನೆಲೆಯಲ್ಲಿ 20 ದೇಶಗಳ ಜನರಿಗೆ ದೇಶ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಫೆಬ್ರುವರಿ 3ರ ಬುಧವಾರ ರಾತ್ರೆ ಒಂಬತ್ತು ಗಂಟೆಯಿಂದ ನಿಷೇಧ ಜಾರಿಗೆ ಬರಲಿದೆ ಎಂದು ಸೌದಿ ಅರೇಬಿಯದ ಗೃಹ ಸಚಿವಾಲಯ ತಿಳಿಸಿದೆ.

ಯುಎಇ, ಜರ್ಮನಿ, ಅಮೆರಿಕ, ಇಂಡೊನೇಷಿಯ, ಇಟಲಿ, ಪಾಕಿಸ್ತಾನ, ಬ್ರಿಟನ್, ದಕ್ಷಿಣ ಆಫ್ರಿಕ, ಫ್ರಾನ್ಸ್, ಲೆಬನಾನ್, ಈಜಿಪ್ಟ್, ಜಪಾನ್, ಅರ್ಜೆಂಟೀನ, ಐರ್ಲೆಂಡ್, ಬ್ರೆಝಿಲ್, ಪೊರ್ಚುಗಲ್, ಟರ್ಕಿ, ಸ್ವೀಡನ್, ಭಾರತ, ಸ್ವಿಝರ್ಲ್ಯಾಂಡ್ ನಿಷೇಧ ಹೇರಲಾದ ದೇಶಗಳು.

ಆದರೆ ಈ ದೇಶಗಳಲ್ಲಿರುವ ಸೌದಿ ಅರೇಬಿಯ ಪ್ರಜೆಗಳು, ವಿದೇಶಿ ರಾಜತಾಂತ್ರಿಕರು, ಆರೋಗ್ಯ ಕಾರ್ಯಕರ್ತರು, ಇವರ ಕುಟುಂಬಗಳಿಗೆ ಆರೋಗ್ಯ ಸಚಿವಾಲಯ ನಿಶ್ಚಯಿಸಿದ ಕೊರೋನ ನಿಯಂತ್ರಣಗಳನ್ನು ಕಠಿಣವಾಗಿ ಪಾಲಿಸಿ ಸೌದಿ ಅರೇಬಿಯ ಪ್ರವೇಶಿಸಬಹುದು. ಇವರಿಗೆ ಈ ನಿಷೇಧವು ಅನ್ವಯಿಸುವುದಿಲ್ಲ.

ನಿಷೇಧ ಹೇರಿದ ದೇಶಗಳಲ್ಲಿ ಹದಿನಾಲ್ಕು ದಿನ ಸಂದರ್ಶನ ಮಾಡಿದ ಇತರ ದೇಶಗಳ ಪ್ರಜೆಗಳಿಗೂ ಸೌದಿ ಪ್ರವೇಶಕ್ಕೆ ನಿಷೇಧ ಅನ್ವಯಿಸುತ್ತದೆ. ಆದರೆ, ಭಾರತ ಸಹಿತ ನಿಷೇಧ ಹೇರಿದ ದೇಶಗಳ ಪ್ರಜೆಗಳು ಮತ್ತು ನಿಷೇಧ ಅನ್ವಯಕವಲ್ಲದ ದೇಶಗಳಲ್ಲಿ 14 ಕ್ವಾರಂಟೈನ್ ಪೂರ್ತೀಕರಿಸಿ ಸೌದಿಗೆ ಬರಲು ಸಾಧ್ಯವೇ ಎಂಬ ವಿಷಯ ಅಸ್ಪಷ್ಟವಾಗಿದೆ.