ಇಸ್ರೇಲ್ ಅಧಿಕಾರಿಗಳನ್ನು ಭೇಟಿಯಾದ ಮುಹಮ್ಮದ್ ಬಿನ್ ಸಲ್ಮಾನ್: ಸೌದಿಯಿಂದ ನಿರಾಕರಣೆ

0
240

ಸನ್ಮಾರ್ಗ ವಾರ್ತೆ

ರಿಯಾದ್,ನ.24: ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಇಸ್ರೇಲಿನ ಅಧಿಕಾರಿಗಳು ರವಿವಾರ ಭೇಟಿಯಾಗಿದ್ದಾರೆ ಎಂದು ವರದಿಯಾಗಿದ್ದು ಸೌದಿ ಅರೇಬಿಯದ ವಿದೇಶ ಸಚಿವ ಫೈಸಲ್ ಬಿನ್ ಫರ್‍ಹಾನ್ ಅಲ್ ಸೌದ್ ಇದನ್ನು ನಿರಾಕರಿಸಿದ್ದಾರೆ.

ಅಮೆರಿಕದ ಸ್ಟೇಟ್ ಸೆಕ್ರಟರಿ ಮೈಕ್ ಪೊಂಪಿಯೊ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ ವೇಳೆ ಸೌದಿಯ ರಾಜಕುಮಾರ ಮತ್ತು ಇಸ್ರೇಲಿನ ಅಧಿಕಾರಿಗಳ ನಡುವೆ ಚರ್ಚೆ ನಡೆದಿತ್ತು ಎಂದು ಪತ್ರಿಕಾ ವರದಿಗಳನ್ನು ನೋಡಿದ್ದೇನೆ. ಅಂತಹದ್ದೊಂದು ಭೇಟಿ ನಡೆದಿಲ್ಲ. ಅಮೆರಿಕ ಮತ್ತು ಸೌದಿಯ ಅಧಿಕಾರಿಗಳು ಮಾತ್ರ ಚರ್ಚೆ ನಡೆಸಿದ್ದರು ಎಂದು ಫೈಸಲ್ ಬಿನ್ ಫರ್‍ಹಾನ್ ಅಲ್ ಸೌದ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್‍ರೊಂದಿಗೆ ಕಳೆದ ರವಿವಾರ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಹಸ್ಯವಾಗಿ ಸೌದಿ ಅರೇಬಿಯದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಈ ಹಿಂದೆ ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿದ್ದವು.