ಸೌದಿಯ ಪ್ರಥಮ ಮಹಿಳಾ ಪೈಲೆಟ್ ಯಾಸ್ಮಿನ್ ಮೈಮನಿ

0
330

ಜಿದ್ದಾ, ಜೂ.14: ಸೌದಿ ಅರೇಬಿಯದ ಪ್ರಥಮ ಮಹಿಳಾ ಪೈಲೆಟ್ ಆಗಿ ಯಾಸ್ಮಿನ್ ಮೈಮನಿ ಸ್ಥಾನ ವಹಿಸಿಕೊಂಡಿದ್ದಾರೆ. ಖಾಸಗಿ ವಿಮಾನ ಕಂಪೆನಿ ನಸ್ಮ ಏರ್‍ಬೇಸ್‍ನ ಅಲ್‍ ಖಸೀಂ ತಬೂಕ್ ನಿವಾಸಿ ಯಾಸ್ಮೀನ್ ಮೈಮನಿ ಕಳೆದ ದಿವಸ ವಿಮಾನ ಚಲಾಯಿಸುವ ಕನಸನ್ನು ಸಾಕ್ಷಾತ್ಕರಿಸಿಕೊಂಡು ಸೌದಿ ಅರೇಬಿಯದ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡರು.

ಕಳೆದ ಮಾರ್ಚ್ ತಿಂಗಳಲ್ಲಿ ನಸ್ಮಾ ಏರ್‍ಕ್ರಾಪ್ಟ್ ತರಬೇತಿಗೆ ಹೋಗಿದ್ದ ಅವರು ಅಲ್ಲಿ ಯಶಸ್ವಿಯಾಗಿ ವಿಮಾನ ಚಲಾಯಿಸಿದ್ದರು. ನಾವು ತರಬೇತಿ ನೀಡಿದ ಹನ್ನೊಂದು ಮಂದಿಯಲ್ಲಿ ಯಾಸ್ಮೀನ್ ಮೈಮನಿ ಉತ್ತಮ ರೀತಿಯಲ್ಲಿ ಹಾರಾಟ ನಡೆಸಿದರು ಎಂದು ನಸ್ಮಾದ ಆಪರೇಶನ್ ಮ್ಯಾನೇಜರ್ ಅಹ್ಮದ್ ಜುಹನಿ ಹೇಳಿದರು. ಯಾಸ್ಮೀನ್ ಸಿವಿಲ್ ಎವಿಯೇಶನ್‍ನಿಂದ ವಿಮಾನ ಹಾರಾಟಕ್ಕೆ ಪರವಾನಿಗೆ ಪಡೆದುಕೊಂಡಿದ್ದಾರೆ.