ಮೂಗು, ಬಾಯಿ ಮುಚ್ಚುವ ರೀತಿಯಲ್ಲಿ ಮಾಸ್ಕ್ ಧರಿಸಬೇಕು- ಸೌದಿ ಆರೋಗ್ಯ ಸಚಿವಾಲಯ

0
792

ಸನ್ಮಾರ್ಗ ವಾರ್ತೆ

ಜಿದ್ದ,ಜೂ.3: ಮೂಗು ಬಾಯಿ ಮುಚ್ಚುವ ರೀತಿ ಮಾಸ್ಕ್ ಧರಿಸುವುದು ಮುಖ್ಯ ಎಂದು ಸೌದಿ ಆರೇಬಿಯದ ಆರೋಗ್ಯ ಸಚಿವಾಲಯ ವಕ್ತಾರ ಡಾ. ಮುಹಮ್ಮದ್ ಅಬ್ದು ಅಲ್ ಅಲಿ ಹೇಳಿದ್ದಾರೆ. ಹಲವು ಜನರು ಆರೋಗ್ಯ ಸುರಕ್ಷಾ ಮುನ್ನೆಚ್ಚರಿಕೆಯನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದು ರೋಗ ಹರಡಲು ಕಾರಣವಾಗುತ್ತದೆ. ಮುಂಬರುವ ದಿನಗಳಲ್ಲಿ ಆರೋಗ್ಯ ಸುರಕ್ಷೆಯ ಮುನ್ನೆಚ್ಚರಿಕೆಯನ್ನು ಪಾಲಿಸುವುದು ಪ್ರಮುಖ ವಿಚಾರವಾಗಿದೆ. ಒಬ್ಬನೇ ಇರುವಾಗ, ಇತರರಿಂದ ದೂರ ಇರುವಾಗ ಮಾಸ್ಕ್ ಧರಿಸುವುದು ಅಷ್ಟು ನಿರ್ಬಂಧವಲ್ಲ ಎಂದೂ ಅವರು ತಿಳಿಸಿದರು.

ಕಚೇರಿಯಲ್ಲಿ ಯಾರಿಲ್ಲ ಎಂದಾದರೆ ಮಾಸ್ಕ್ ಬೇಕಿಲ್ಲ. ಕಾರಿನ ಬಾಗಿಲು ಮುಚ್ಚಿ ಒಬ್ಬನೇ ಕಾರಿನಲ್ಲಿದ್ದರೆ ಮಾಸ್ಕ್ ಧರಿಸಬೇಕಿಲ್ಲ. ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ. ಇತರರ ನಡುವೆ ಎರಡು ಮೀಟರ್ ದೂರ ಇರಬೇಕು. ಕೈ ಆಗಾಗ ಸಾಬುನು ಹಚ್ಚಿ ತೊಳೆಯುತ್ತಿರಬೇಕು. ಹಸ್ತಲಾಘವ ಮತ್ತು ವಸ್ತುಗಳ ಮೇಲ್ಮೈ ಮುಟ್ಟವುದನ್ನು ಮಾಡಬಾರದು. ಆರೋಗ್ಯ ನಿರ್ದೇಶಗಳನ್ನು ಪಾಲಿಸುವುದು ಶಿಕ್ಷಯಲ್ಲ, ಕಾನೂನು ಉಲ್ಲಂಘಿಸುವುದು ಬೇಡ ಎಂಬ ಕಾರಣಕ್ಕಾಗಿಯೂ ಅಲ್ಲ ಬದಲಾಗಿ, ಸ್ವತಃ ನಮ್ಮ ಮತ್ತು ಇತರರ ಆರೋಗ್ಯ ಸುರಕ್ಷೆಗಾಗಿದೆ ಎಂಬುದನ್ನು ನೆನಪಿನ್ನಲ್ಲಿಟ್ಟುಕೊಳ್ಳಲು ಅವರು ಎಚ್ಚರಿಕೆ ನೀಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.