ಬ್ರದರ್ ಹುಡ್ ಜೊತೆ ನಂಟು ಆರೋಪ: ಕುವೈತ್ ದತ್ತಿ ನಿಧಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ

0
957

ಕೈರೋ: ಮುಸ್ಲಿಮ್ ಬ್ರದರ್ ಹುಡ್ ನೊಂದಿಗೆ ನಂಟು ಹೊಂದಿರುವ ಸಂಶಯದ ಮೇರೆಗೆ ಕುವೈತ್ ನ ದತ್ತಿ ಸಂಸ್ಥೆಯನ್ನು ಸೌದಿ ಅಧಿಕಾರಿಗಳು ನಿಷೇಧಿಸಿದ್ದಾರೆ.
ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಕುವೈತ್ ನಲ್ಲಿ ಸಾಮಾಜಿಕ ಸುಧಾರಣಾ ಕ್ರಮಗಳಲ್ಲಿ ಬ್ರದರ್ ಹುಡ್ ನೊಂದಿಗೆ ಸಂಬಂಧ ಹೊಂದಿರುವ ದತ್ತಿ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಸೌದಿ ಅರೇಬಿಯಾದಾದ್ಯಂತ ನಿಷೇಧಿಸಲು ಸುತ್ತೋಲೆ ಹೊರಡಿಸಿರುವುದಾಗಿ ಓಕ್ಜಾ ವರದಿ ಮಾಡಿದೆ.
ಭಯೋತ್ಪಾದಕ ಪಟ್ಟಿಯಲ್ಲಿನ ಯಾವುದೇ ಸಂಘ ಸಂಸ್ಥೆಗಳೊಂದಿಗೆ ಸೌದಿ ಅರೇಬಿಯಾದ ಸಂಸ್ಥೆಗಳು ಯಾವುದೇ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದಂತೆ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಾಮಾಜಿಕ ಸುಧಾರಣಾ ಕಾರ್ಯಗಳಲ್ಲಿ ಬ್ರದರ್ ಹುಡ್ ಬಹುಪಾಲು ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದ್ದು ಸೌದಿ ಸರಕಾರವು ಬ್ರದರ್ ಹುಡ್ ನ್ನು ಭಯೋತ್ಪಾಕ ಸಂಸ್ಥೆಯಾಗಿಸಿರುವುದರಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ಕುವೈತ್ ನ ದತ್ತಿ ಸಂಸ್ಥೆಗಳು ಸೇರ್ಪಡೆಗೊಂಡಿವೆ ಎಂಬುದಾಗಿ ಓಕ್ಜಾ ವರದಿ ಮಾಡಿದೆ.

ದತ್ತಿ ನಿಧಿಯನ್ನು ಸಂಗ್ರಹಿಸುವಲ್ಲಿ ಕುವೈತ್ ನ ಸಂಸ್ಥೆಗಳು ದೀರ್ಘ ಇತಿಹಾಸವನ್ನು ಹೊಂದಿವೆ. ಉನ್ನತ ಮಟ್ಟದ ಘೋಷಣೆಗಳ ಮೂಲಕ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕ್ ರೋಲಿಂಗ್ ಮಾಡುವ ಮೂಲಕ ಬ್ರದರ್ ಹುಡ್ ನಿಂದ ಹಣಕಾಸು ಸೌಲಭ್ಯವನ್ನು ಈ ಸಂಸ್ಥೆಗಳು ಪಡೆಯುತ್ತಿವೆ ಎಂದು ಓಕ್ಜಾ ಆರೋಪಿಸಿದೆ.