ಅಯೋಧ್ಯೆ ಸುರಕ್ಷಾ ವಲಯದಲ್ಲಿ; ನಿಗಾ ಇರಿಸಲು ಡ್ರೋನ್‌ಗಳ ಬಳಕೆ

0
280

ಸನ್ಮಾರ್ಗ ವಾರ್ತೆ

ಅಯೋಧ್ಯೆ,ನ.9: ಬಾಬರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರಿಂಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆಯಾದ್ಯಂತ ಬಿಗು ಭದ್ರತೆ ಯೋಜಿಸಲಾಗಿದೆ. ಪರಿಸ್ಥಿತಿಯಲ್ಲಿ ನಿಗಾ ಇರಿಸಲಿಕ್ಕಾಗಿ ಡ್ರೋನ್‌ಗಳನ್ನು ಬಳಸಲಾಗಿದೆ.

ನಾಲ್ಕು ಸಾವಿರ ಅರೆಸೈನಿಕ ಪಡೆಯನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. ಅಯೋಧ್ಯೆಯಲ್ಲಿ ದ್ವಿಚಕ್ರ ಸವಾರರ ಸಹಿತ ಎಲ್ಲರನ್ನೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದ್ದು ವಿವಿಧ ಜಿಲ್ಲೆಗಳಲ್ಲಿ ಅಗತ್ಯಕ್ಕೆ ತಕ್ಕಂತಹ ಸುರಕ್ಷೆಯನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಎಡಿಜಿಪಿ ರಾಮಶಾಸ್ತ್ರಿ ಹೇಳಿದರು.

ಭಯೋತ್ಪಾದನೆ ವಿರೋಧಿ ಸ್ಕ್ವಾಡ್, ಬಾಂಬು ನಿಷ್ಕ್ರಿಯ ದಳ ಕೂಡ ಉಪಸ್ಥಿತವಿದೆ. ಎರಡು ತಿಂಗಳಿನಿಂದ ಇವರಿಗೆ ಮೇಲ್ಮಟ್ಟದ ತರಬೇತಿ ನೀಡಲಾಗಿತ್ತು. ಅಯೋಧ್ಯೆಗೆ ಬರುವ ಭಕ್ತರನ್ನು ತಡೆಯುವುದಿಲ್ಲ ಮತ್ತು ತುರ್ತು ಪರಿಸ್ಥಿತಿ ನಿರ್ಮಾಣವಾದರೆ ಹೆಲಿಪ್ಯಾಡ್‍ಗಳನ್ನು ಉಪಯೋಗಿಸಲಾಗುವುದು ಎಂದು ಪೊಲೀಸರು ಹೇಳಿದರು.