ವ್ಯಾಕ್ಸಿನ್ ವಿರುದ್ಧ ಆರೋಪ: 100ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸೆರಂ ಇನ್ಸಿಟಿಟ್ಯೂಟ್

0
379

ಸನ್ಮಾರ್ಗ ವಾರ್ತೆ

ಚೆನ್ನೈ,ನ.30: ಕೊರೋನ ವ್ಯಾಕ್ಸಿನ್ ಕೊವಿಶೀಲ್ಡ್ ಪರೀಕ್ಷೆಯಲ್ಲಿ ಭಾಗವಹಿಸಿದ ವ್ಯಕ್ತಿಯ ವಿರುದ್ಧ ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ 100 ಕೋಟಿ ರೂ. ಮಾನನಷ್ಟ ಪ್ರಕರಣ ದಾಖಲಿಸಿದೆ. ವ್ಯಾಕ್ಸಿನ್ ಪಡೆದ ಬಳಿಕ ತನಗೆ ನಾಡಿಗೆ ಸಂಬಂಧಿಸಿದ ಮತ್ತು ಮಾನಸಿಕ ಸಮಸ್ಯೆಗಳುಂಟಾಗಿದೆ ಎಂದು ಈ ವ್ಯಕ್ತಿ ಹೇಳಿದ್ದರು. ಜತೆಗೆ ಸೆರಂ ಇನ್ಸಿಟಿಟ್ಯೂಟ್ ಐದು ಕೋಟಿ ರೂಪಾಯಿ ಮಾನನಷ್ಟ ತನಗೆ ನೀಡಬೇಕೆಂದು 40 ವರ್ಷದ ವ್ಯಕ್ತಿ ಹೇಳಿದ್ದರು.

ಆಕ್ಸ್‌ಫಡ್ ವಿಶ್ವವಿದ್ಯಾನಿಲಯ ಆಸ್ಟ್ರೊಸೆನಕ ಜಂಟಿಯಾಗಿ ತಯಾರಿಸಿದ ವ್ಯಾಕ್ಸಿನ್ ಕೊವಿಶೀಲ್ಡ್ ಆಗಿದೆ. ಪುಣೆಯ ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯ ಭಾರತದಲ್ಲಿ ವ್ಯಾಕ್ಸಿನ್ ಪರೀಕ್ಷೆ ನಡೆಸುತ್ತಿದೆ. ಚೆನ್ನೈಯ ಒಬಂದು ಸಂಸ್ಥೆ ಅಕ್ಟೋಬರ್ ಒಂದರಂದು ನಡೆಸಿದ ಕೊರೊನ ಪರೀಕ್ಷೆಯಲ್ಲಿ ಭಾಗವಹಿಸಿದ ವ್ಯಕ್ತಿ ದೂರುದಾರ ಆಗಿದ್ದಾರೆ. ವ್ಯಾಕ್ಸಿನ್ ತೆಗೆದ ಕೊಂಡ ವ್ಯಕ್ತಿ ಆರೋಪವನ್ನು ಸೆರಂ ತಳ್ಳಿಹಾಕಿದೆ. ಅಲ್ಲದೇ ವ್ಯಕ್ತಿಯ ವಿರುದ್ಧ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಜಡಿದಿದೆ. ಜತೆಗೆ ಕ್ರಿಮಿನಲ್ ಕೇಸನ್ನೂ ಈ ವ್ಯಕ್ತಿಯ ವಿರುದ್ಧ ಹಾಕಲಾಗಿದೆ.

ನಲ್ವತ್ತು ವರ್ಷದ ವ್ಯಕ್ತಿಯ ಆರೋಗ್ಯ ಸಮಸ್ಯೆಗೆ ಸೆರಂ ಇನ್ಸಿಟಿಟ್ಯೂಟ್ ಸಂತಾಪ ವ್ಯಕ್ತಿಪಡಿಸಿದ್ದು ವ್ಯಾಕ್ಸಿನ್‍ಗೂ ಅವರ ಆರೋಗ್ಯ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು.