ಭಾರತದಲ್ಲಿಯೂ ಆಕ್ಸ್‌ಫರ್ಡ್ ಕೊರೋನ ವ್ಯಾಕ್ಸಿನ್ ಪರೀಕ್ಷೆ ಸ್ಥಗಿತ

0
309

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.10: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ದಿ ಪಡಿಸಿದ ಕೊರೋನ ಪ್ರತಿರೋಧ ವ್ಯಾಕ್ಸಿನ್ ಪರೀಕ್ಷೆಯನ್ನು ಭಾರತದಲ್ಲಿಯೂ ಸೆರಂ ಇನ್ಸ್ಟಿಟ್ಯೂಟ್ ಸ್ಥಗಿತಗೊಳಿಸಿದೆ.

ಮುಂದಿನ ಪ್ರಕಟನೆಯವರೆಗೆ ವ್ಯಾಕ್ಸಿನ್ ಪರೀಕ್ಷೆಯನ್ನು ನಡೆಸುವುದು ಬೇಡ ಎಂದು ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(ಡಿಸಿಜೆಐ) ಸೂಚಿಸಿದೆ.

ವ್ಯಾಕ್ಸಿನ್ ಪರೀಕ್ಷೆ ಒಬ್ಬ ವ್ಯಕ್ತಿಯಲ್ಲಿ ಅಡ್ಡಪರಿಣಾಮ ಗಮನಕ್ಕೆ ಬಂದ ಕಾರಣದಿಂದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ತಾತ್ಕಾಲಿಕವಾಗಿ ಪರೀಕ್ಷೆಯನ್ನು ನಿಲ್ಲಿಸಿತ್ತು.

ಸೆರಂ ಇನ್ಸಿಟಿಟ್ಯೂಟ್ ಡಿಸಿಜಿಐಗೆ ವ್ಯಾಕ್ಸಿನ್ ಪ್ರತಿಕೂಲ ಪರಿಣಾಮವುಂಟು ಮಾಡಿದ ವರದಿಯಲ್ಲಿ ಸಲ್ಲಿಸಿಲ್ಲ ಎಂದು ನೋಟಿಸು ಜಾರಿ ಮಾಡಲಾಗಿದೆ. ವಿಶೇಷ ಪರಿಸ್ಥಿತಿಯಲ್ಲಿ ದೇಶದ ವ್ಯಾಕ್ಸಿನ್ ಪರೀಕ್ಷೆಯಲ್ಲಿ ತನಿಖೆ ನಡೆಸಲಾಗುವುದು ಎಂದು ಡಿಸಿಜಿಐಯ ನೋಟಿಸಿನಲ್ಲಿ ಹೇಳಲಾಗಿದೆ. ಇದರ ನಂತರ ವ್ಯಾಕ್ಸಿನ್ ಪರೀಕ್ಷೆ ಸ್ಥಗಿತಗೊಳಿಸಲಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆಸ್ಟ್ರೋ ಸನೆಕ ಸೇರಿ ಅಭಿವೃದ್ಧಿ ಪಡಿಸಿದ ಕೊವಿಶಿಲ್ಡ್ ಎಂಬ ಕೊರೋನ ಪ್ರತಿರೋಧ ವ್ಯಾಕ್ಸಿನ್‍‌ನನ್ನು ಭಾರತದಲ್ಲಿ ನಡೆಯುವ ಪರೀಕ್ಷೆಗಳಿಗೆ ಸೆರಂ ಇನ್ಸ್ಟಿಟ್ಯೂಟ್ ನೇತೃತ್ವ ನೀಡುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.