ಪಂಡಿತ್ ದೀನ್‍ದಯಾಳ್ ಉಪಾಧ್ಯಯರನ್ನು ಸ್ಮರಿಸಿದ ಗೃಹ ಸಚಿವ ಅಮಿತ್ ಶಾ

0
391

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.25: ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಜನಸಂಘ ಸಂಸ್ಥಾಪಕ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರನ್ನು ಶುಕ್ರವಾರ ಅವರ ಹುಟ್ಟುಹಬ್ಬದ ದಿನದಲ್ಲಿ ಸ್ಮರಿಸಿಕೊಂಡು ಉಪಾಧ್ಯಾಯರ ಜೀವನ ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರಭಕ್ತಿಗೆ ಅನುಪಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಜನಸಂಘ ಸಂಸ್ಥಾಪಕ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ 104ನೆ ಜಯಂತಿಯಾಗಿದೆ.

ಭಾರತೀಯ ರಾಜಕೀಯ ಯೋಧ, ಬಹುಮಖ ವ್ಯಕ್ತಿತ್ವ ಮತ್ತು ಜನಸಂಘದ ಸಂಸ್ಥಾಪಕ ಸದಸ್ಯರಾಗಿರುವ ಉಪಾಧ್ಯಯರು ಭಾರತೀಯ ಸಂಸ್ಕೃತಿಯ ಮತ್ತು ಮೌಲ್ಯಗಳ ರಕ್ಷಣೆ ಸಂರಕ್ಷಣೆಗಾಗಿ ಜೀವನವಿಡೀ ಸಂಘರ್ಷ ಮಾಡಿದರು. ಏಕಾತ್ಮ ಮಾನವವಾದ ಮತ್ತು ಅಂತ್ಯೋದಯ ವಿಚಾರಗಳಿಂದ ಅವರು ದೇಶವಕ್ಕೆ ಪ್ರಗತಿಶೀಲ ವಿಚಾರ ಧಾರೆಯನ್ನು ಕೊಡುವ ಕೆಲಸ ಮಾಡಿದರು ಎಂದು ಶಾ ಟ್ವೀಟ್ ಮಾಡಿದರು.

ಉತ್ಕೃಷ್ಟ ಸಂಘಟಕರಾದ ಅವರು ಪರ್ಯಾಪ್ತ ರಾಜಕೀಯದ ಅಡಿಗಲ್ಲು ಹಾಕಿದರು. ಇಂದು ದೇಶದ ಬಡವರು, ವಂಚಿತ ಮತ್ತು ಶೋಷಿತ ವರ್ಗವನ್ನು ಅಭಿವೃದ್ಧಿಯ ಮುಖ್ಯಧಾರೆಗೆ ತರುವ ಕೆಲಸ ಮಾಡಿದರು. ಅವರ ಜೀವನ ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರಭಕ್ತಿಯ ಅನುಪಮ ಉದಾಹರಣೆಯಾಗಿದೆ. ಇಂತಹ ದೇಶಭಕ್ತರ ಜಯಂತಿಯ ವೇಳೆ ಅವರಿಗೆ ಕೋಟಿ ಕೋಟಿ ನಮಗಳು ಎಂದು ಅಮಿತ್ ಶಾ ಹೇಳಿದರು.