RSS ಸಂಬಂಧ: ಪ್ರಶಾಂತ್ ಭೂಷಣ್‌ರವರ ಆರೋಪದ ಕುರಿತು ಕೇಜ್ರಿವಾಲ್ ಉತ್ತರಿಸಬೇಕು- ಶಶಿ ತರೂರ್ ಆಗ್ರಹ

0
441

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಆಮ್ ಆದ್ಮಿ ಪಾರ್ಟಿ ಯುಪಿಎ ಸರಕಾರವನ್ನು ಕೆಳಗಿಳಿಸಲಿಕ್ಕೆ ಆರೆಸ್ಸೆಸ್/ಬಿಜೆಪಿ ನಡೆಸಿದ ತಂತ್ರವಾಗಿತ್ತು ಎಂದು ಪ್ರಶಾಂತ್ ಭೂಷಣ್ ಮಾಡಿದ ಆರೋಪಗಳಿಗೆ ಅರವಿಂದ್ ಕೇಜ್ರಿವಾಲ್ ಉತ್ತರಿಸಬೇಕೆಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದರು.

ಇದರಲ್ಲಿ ಯಾವುದೇ ಆಶ್ಚರ್ಯದ ವಿಷಯ ಇಲ್ಲ, ಇಂಡಿಯಾ ಎಗೈನೈಸ್ಟ್ ಕರಪ್ಶನ್ ಮೂವ್‍ಮೆಂಟಿನ ಹಿಂದೆ ಆರೆಸ್ಸೆಸ್ ಇತ್ತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಆದರ್ಶವಿಲ್ಲದ ಅರವಿಂದ್ ಕೇಜ್ರಿವಾಲ್ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಶಶಿ ತರೂರ್ ಹೇಳಿದರು.

ನಮಗೆ ಗೊತ್ತಿದ್ದ ವಿಷಯವನ್ನೇ ಆಮ್ ಆದ್ಮಿಯ ಸ್ಥಾಪಕ ನಾಯಕರು ದೃಢೀಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶಾಂತ್ ಭೂಷಣ್‍ರ ಆರೋಪಕ್ಕೆ ಪ್ರತಿಕ್ರಿಯಿಸಿದ್ದರು. ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನ ಎಎಪಿಯ ರೂಪೀಕರಣ ಸಮಯದಲ್ಲಿ ಪ್ರಶಾಂತ್ ಸಕ್ರಿಯವಾಗಿದ್ದರು.

ನಂತರ ಪ್ರಶಾಂತ್ ಭೂಷಣ್‍ರನ್ನು ಪಾರ್ಟಿ ವಿರೋಧಿ ಚಟುವಟಿಕೆಗಳನ್ನು ಆರೋಪಿಸಿ ಶಿಸ್ತು ಕ್ರಮ ಕೈಗೊಂಡು ಅವರನ್ನು ಪಾರ್ಟಿಯಿಂದ ಹೊರ ಹಾಕಲಾಗಿತ್ತು. ಅಣ್ಣಾ ಹಝಾರೆಯವರ ಆಂದೋಲನವು, ಕಾಂಗ್ರೆಸ್ ಸರಕಾರವನ್ನು ಕೆಳಗಿಳಿಸಲು ಬಿಜೆಪಿ ಆರೆಸ್ಸೆಸ್ ಅಜೆಂಡವಾಗಿತ್ತು ಇದರಲ್ಲಿ ಈಗ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಇಂಡಿಯಾ ಟುಡೆಗೆ ರಾಜೀವ್ ಸರ್ದೇಸಾಯಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಹೇಳಿದ್ದರು.

ಆರೆಸ್ಸೆಸ್ ಹಸ್ತಕ್ಷೇಪ ಅಣ್ಣಾ ಹಝಾರೆಗೆ ಕೆಲವೊಮ್ಮೆ ಗೊತ್ತಿಲ್ಲದಿರಲೂಬಹುದು ಆದರೆ ಕೇಜ್ರಿವಾಲ್‍ಗೆ ಅದು ಗೊತ್ತಿತ್ತು. ತನಗೆ ಅಂದೇ ಒಂದು ಸಣ್ಣ ಸಂದೇಹವೂ ಇತ್ತು. ಈಗ ಅದು ಪೂರ್ಣ ಅರಿವಾಗಿದೆ ಎಂದು ಪ್ರಶಾಂತ್ ಭೂಷಣ್ ಸಂದರ್ಶನದ ವೇಳೆ ತಿಳಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.