ಜಾತ್ಯತೀತೆಯೊಂದಿಗಿನ ಬದ್ಧತೆಯಿಂದ ಬಿಜೆಪಿಯ ಆಮಿಷಕ್ಕೆ ಬೀಳಲಿಲ್ಲ: ಮನೋಜ್ ತಿವಾರಿಯನ್ನು ಅಭಿನಂದಿಸಿದ ಶಶಿತರೂರು

0
534

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‍ಗೆ ಸೇರಿದ ಕ್ರಿಕೆಟ್ ಆಟಗಾರ ಮನೋ ತಿವಾರಿಯವರನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿತರೂರು ಅಭಿನಂದಿಸಿದ್ದು ಮನೋಜ್ ತಿವಾರಿಯ ಜಾತ್ಯತೀತತೆಯ ಬದ್ಧತೆಯಿಂದಾಗಿ ಅವರು ಬಿಜೆಪಿಗೆ ಸೇರಿಲ್ಲ ಎಂದು ಹೇಳಿದ್ದಾರೆ. ಮನೋಜ್‍ ತಿವಾರಿಯೊಂದಿಗೆ ನಡೆಸಿದ ಸಂದರ್ಶನದ ಕ್ಲಿಪನ್ನು ಕೂಡ ಶಶಿ ತರೂರ್ ಹಂಚಿಕೊಂಡಿದ್ದಾರೆ.

ಮನೋಜ್ ತಿವಾರಿಯ ಉತ್ಕೃಷ್ಟ ಸಂದರ್ಶನ ಅದು ಜಾತ್ಯತೀತೆಯೊಂದಿಗಿನ ಅವರ ಬದ್ಧತೆ ಬಿಜೆಪಿಯ ಆಮಿಷಕ್ಕೆ ಬೀಳಲಿಲ್ಲ ಎಂದು ವಿವರಿಸುತ್ತಾರೆ. ಭಾರತದ ಹೆಚ್ಚಿನ ಕ್ರಿಕೆಟ್ ಆಟಗಾರರು ಧರ್ಮದ ಹೆಸರಿನಲ್ಲಿ ತಾರತಮ್ಯಕ್ಕೆ ಮುಂದಾಗದವರು. ಕ್ರಿಕೆಟ್ ಒಗ್ಗಟ್ಟನ್ನು ಹೆಚ್ಚಿಸುವಾಗ ಬಿಜೆಪಿ ಧರ್ಮದ ಹುಚ್ಚು ಮತ್ತು ವಿಭಜನೆ ಮಾಡುತ್ತದೆ ಎಂದು ತರೂರ್ ಟ್ವೀಟ್ ಮಾಡಿದರು. ಅಭಿನಂದನೆಗಳು ಶಶಿ ತರೂರ್‌ರಿಗೆ ಎಂದು ಮನೋಜ್ ತಿವಾರಿ ಅಭಿನಂದಿಸಿದರು.

ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್‍ಗೆ ನಿನ್ನೆ ಸೇರಿದ್ದಾರೆ. ಭಾರತಕ್ಕಾಗಿ 12 ಏಕದಿನ ಆಡಿದರು ಮೂರು ಟ್ವೆಂಟಿ20 ಆಡಿದ್ದಾರೆ. ಐಪಿಎಲ್‍ನಲ್ಲಿ ಕ್ರಿಕೆಟ್ ಪ್ರಿಯರಿಗೆ ಸುಪರಿಚಿತರು. ಅವರಿಗೆ 35 ವರ್ಷ ವಯಸ್ಸಾಗಿದ್ದು ಹೌರದ ನಿವಾಸಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 104 ರನ್ಸ್ ಹೊಡೆದಿದ್ದಾರೆ. 2012ರಲ್ಲಿ ಐಪಿಎಲ್ ಚಾಂಪಿಯನ್ ಆದ ಕೊಲ್ಕತಾ ನೈಟ್ ರೈಡರ್ಸ್‌ನಲ್ಲಿ ಉತ್ತಮವಾಗಿ ಆಡಿದ್ದರು. ದಿಲ್ಲಿ ಮತ್ತು ರೈಸಿಂಗ್ ಪುಣೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಗೂ ಆಡಿದ್ದರು. 2015ರಲ್ಲಿ ಝಿಂಬಾಬ್ವೆಯ ವಿರುದ್ಧ ಕೊನೆಯದಾಗಿ ಅವರು ಭಾರತವನ್ನು ಪ್ರತಿನಿಧಿಸಿದ್ದರು.