ರೈತರ ಆಂದೋಲನವನ್ನು ಒಡೆಯಲು ಬಿಜೆಪಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತು: ಕೇಂದ್ರ ಸರಕಾರದ ವಿರುದ್ಧ ಶಿವಸೇನೆ ಆರೋಪ

0
427

ಸನ್ಮಾರ್ಗ ವಾರ್ತೆ

ಮುಂಬೈ: ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ ಎಂದು ಶಿವಸೇನೆ ಆರೋಪಿಸಿದೆ. ದೆಹಲಿಯಯಲ್ಲಿ ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್ ರ‌್ಯಾಲಿಯಲ್ಲಿನ ಹಿಂಸಾಚಾರದ ಎರಡು ದಿನಗಳ ಬಳಿಕ ಶಿವಸೇನೆ ಈ ರೀತಿಯ ಹೇಳಿಕೆ ನೀಡಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ದೆಹಲಿ ಮುತ್ತಿಗೆ ಕಾರ್ಯಕ್ರಮ ಪೂರ್ವನಿಯೋಜಿತ. ಬಿಜೆಪಿ ಗುಪ್ತಚರ ವ್ಯವಸ್ಥೆಯ ಪ್ರಕಾರ, ರೈತರ ಆಂದೋಲನದಲ್ಲಿ ಉಗ್ರರ ಕೈವಾಡವಿದೆ. ಕೆಂಪು ಕೋಟೆಗೆ ನುಗ್ಗಿದ ಗಲಭೆಕೋರರ ಗುಂಪಿನ ನಾಯಕ ದೀಪ್ ಸಿಧು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಗುಂಪಿಗೆ ಸೇರಿದ್ದಾನೆ. ಪಂಜಾಬಿನ ಬಿಜೆಪಿ ಸಂಸದ ಸನ್ನಿ ಡಿಯೋಲ್ ಜೊತೆಗೆ ಹತ್ತಿರದ ಸಂಬಂಧ ಹೊಂದಿದ್ದಾನೆ. ಹಿಂಸಾಚಾರ ನಡೆಸಿ ರೈತರ ಪ್ರತಿಭಟನೆ ಒಡೆಯುವುದಾಗಿ ಸಿಧು ಹೇಳಿಕೆ ನೀಡಿದನ್ನು ರೈತ ಮುಖಂಡರು ಬಹಿರಂಗಪಡಿಸಿರುವುದಾಗಿ ಶಿವಸೇನೆ ಹೇಳಿದೆ.

ಸಿಂಘು ಗಡಿಯಲ್ಲಿ ಕಳೆದ 60 ಎರಡು ತಿಂಗಳುಗಳಿಂದ ಸಹಸ್ರಾರು ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಣರಾಜ್ಯೋತ್ಸವ ದಿನದಿನದಂದು ಶಾಂತಯುತವಾಗಿ ಟ್ರ್ಯಾಕ್ಟರ್ ರ‌್ಯಾಲಿ ನಡೆಸುವುದಾಗಿ ರೈತ ಮುಖಂಡರು ಹೇಳಿದ್ದರು. ಆದರೆ, ರೈತರ ಹೋರಾಟವನ್ನು ಒಡೆಯಲು ಬಿಜೆಪಿ ಈ ಹಿಂಸಾಚಾರದಲ್ಲಿ ಭಾಗಿಯಾಗಿದೆ ಎಂದು ಅದು ಆರೋಪಿಸಿದೆ‌.

ಕಳೆದ 6೦ ದಿನಗಳಿಂದ ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆದಿದೆ. ರೈತರ ವಿರೋಧಕ್ಕೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದನ್ನು ಬಿಟ್ಟು, ರೈತರ ಆಂದೋಲವನ್ನು ಒಡೆಯಲು ಸಾಧ್ಯವಾಗದೇ, ಕೇಂದ್ರ ಸರ್ಕಾರ ಹಿಂಸಾಚಾರದಲ್ಲಿ ಕೈ ಜೋಡಿಸಿದೆ. ರೈತರ ಆಂದೋಲನವನ್ನು ಈ ಹಿಂದೆ ಖಲಿಸ್ತಾನಿ ಎಂದೂ ಹೇಳಲಾಗಿತ್ತು. ಆದರೆ, ಈಗಲೂ ಕೂಡ ರೈತರು ಶಾಂತವಾಗಿದ್ದಾರೆ ಎಂದು ಹೇಳಿರುವ ಶಿವಸೇನೆ, ಪಂಜಾಬ್ ಮತ್ತೆ ಸಿಡಿದೆದ್ದರೆ ದೇಶಕ್ಕೆ ಒಳ್ಳೆಯದಲ್ಲಾ ಎಂದು ಎಚ್ಚರಿಕೆ ನೀಡಿದೆ.