ಶುಕ್ರವಾರದ ಜುಮಾ ನಮಾಜ್ ಗೆ ಹೊಸ ಜೀವಕಳೆ ನೀಡುತ್ತಿರುವ ಉಸ್ತಾದರುಗಳು

0
1231

ಏ ಕೆ ಕುಕ್ಕಿಲ

ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಬಿ ದಾರಿಮಿ, ಕೂರ್ನಡ್ಕ ಅಬೂಬಕರ್ ಸಿದ್ದೀಕ್  ಜಲಾಲಿ  ಮತ್ತು ಚೊಕ್ಕಬೆಟ್ಟು ಅಬ್ದುಲ್ ಅಜೀಜ್ ದಾರಿಮಿಯವರು ಶುಕ್ರವಾರದ ಜುಮಾಕ್ಕೆ ಹೊಸ ಖದರನ್ನು ತಂದಿಟ್ಟಿದ್ದಾರೆ. ಶುಕ್ರವಾರದ ಜುಮಾ ಖುತ್ಬಾವು ಅರಬಿ ಭಾಷೆಯಲ್ಲಿರಬೇಕೋ ಇಲ್ಲ ಸ್ಥಳೀಯ ಭಾಷೆಯಲ್ಲೋ ಎಂಬ ತರ್ಕದ ಆಚೆಗೆ, ಇವರು ಶುಕ್ರವಾರವನ್ನು ಜೀವಂತಗೊಳಿಸಿದ್ದಾರೆ. ಶುಕ್ರವಾರದ ಜುಮಾ ದಿನದಂದು ಈ ಉಸ್ತಾದರು ಮಾಡುವ ಪ್ರವಚನ ಜಿಲ್ಲೆಯ ಹೊರಗೂ ಬೇಡಿಕೆಯನ್ನು ಪಡೆಯುತ್ತಿದೆ. ವಾಟ್ಸಪ್ ಗ್ರೂಪುಗಳಲ್ಲಿ ಸದ್ದು ಮಾಡುತ್ತಿದೆ. ಪ್ರಚಲಿತ ವಿಷಯಗಳನ್ನು ಎತ್ತಿಕೊಂಡು ಅವರು ಮಾಡುವ ಪ್ರವಚನದಲ್ಲಿ ಧಾರ್ಮಿಕತೆಯೂ ಇದೆ, ವೈಚಾರಿಕತೆಯೂ ಇದೆ. ಸಾಮಾಜಿಕ ಕಳಕಳಿಯೂ ಇದೆ. “ಉಸ್ತಾದರು ಹೀಗೆ ಮಾತಾಡುತ್ತಾರಾ, ಪ್ರಚಲಿತ ವಿಷಯಗಳ ಮೇಲೆ ಇಷ್ಟು ಹಿಡಿತ ಇದೆಯಾ…” ಎಂದು ಅಚ್ಚರಿ ಪಟ್ಟವರನ್ನು ನಾನು ನೋಡಿದ್ದೇನೆ.

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಸದಸ್ಯರೆಲ್ಲರೂ ಶುಕ್ರವಾರ ಯಾವುದಾದರೊಂದು ಮಸೀದಿಯಲ್ಲಿ ಸೇರುತ್ತಾರೆ. ಹೀಗೆ ಸಮುದಾಯವೊಂದರ ಸದಸ್ಯರೆಲ್ಲರೂ ಪ್ರತಿವಾರ ಒಂದುಕಡೆ ಸೇರುವ ಸನ್ನಿವೇಶ ಇನ್ನಾವ ಸಮುದಾಯದಲ್ಲೂ ಇಲ್ಲ. ಇದರ ಸದುಪಯೋಗವಾಗಬೇಕು. ಪ್ರಚಲಿತ ವಿಷಯಗಳಲ್ಲಿ ಸಮುದಾಯಕ್ಕೆ ಮಾರ್ಗದರ್ಶನ ಮಾಡಲು ಈ ಸಂದರ್ಭವನ್ನು ಜಾಣತನದಿಂದ ಬಳಸಿಕೊಳ್ಳಬೇಕು. ಹೀಗಾದರೆ, ರಾತ್ರಿವೇಳೆಯ “ಧಾರ್ಮಿಕ ಪ್ರವಚನ”ದ ಅಗತ್ಯ ಬೀಳಲಾರದು.

 

ಎಸ್ ಬಿ ದಾರಿಮಿ, ಕೂರ್ನಡ್ಕ ಅಬೂಬಕರ್ ಸಿದ್ದೀಕ್ ಜಲಾಲಿ ಮತ್ತು ಚೊಕ್ಕಬೆಟ್ಟು ದಾರಿಮಿಯವರಿಗೆ ಕೃತಜ್ಞತೆಗಳು.