ಸಿಖ್ ಗುರುದ್ವಾರದ ಮೇಲಿನ ದಾಳಿ ಖಂಡನಾರ್ಹ; ಮುಸ್ಲಿಂ ಸಮುದಾಯ ಸಿಖ್ಖರ ಜೊತೆಯಿದೆ- ಜಮಾಅತೆ ಇಸ್ಲಾಮಿ ಹಿಂದ್

0
1100

ಸನ್ಮಾರ್ಗ ವಾರ್ತೆ

ನವದೆಹಲಿ: ಕಾಬೂಲ್‌ನಲ್ಲಿ ಸಿಖ್ ಗುರುದ್ವಾರದ ಮೇಲೆ ನಡೆದ ದಾಳಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಖಂಡಿಸಿದ್ದು, ಈ ರೀತಿಯ ದಾಳಿಗಳು ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸ್ವಚ್ಛಂದ ಉಲ್ಲಂಘನೆಯಾಗಿದೆ. ಈ ದಾಳಿಯ ಹಿಂದೆ ಇರುವವರನ್ನುಕಟಕಟೆಗೆ ತಂದು ಗರಿಷ್ಟ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಅಫ್ಘಾನಿಸ್ತಾನವನ್ನು ನಿರ್ಮಿಸುವಲ್ಲಿ ಸಕ್ರಿಯ ಪಾತ್ರ ವಹಿಸಿರುವ ಸಿಖ್ ಸಮುದಾಯದ ಭದ್ರತೆಯನ್ನು ಅಫಘಾನ್ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಅಫಘಾನ್ ಜನರು ಈ ಕೃತ್ಯ ಎಸಗಿದವರ ಸಂಚನ್ನು ಸೋಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಭಾರತದ ಮುಸ್ಲಿಂ ಸಮುದಾಯವು ಸಿಖ್ ಸಮುದಾಯದ ಜೊತೆಗಿದೆ. ಈ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ ಎಂದವರು ಹೇಳಿದ್ದಾರೆ.