ಎಸ್ ಐ ಓ ರಾಷ್ಟ್ರಾಧ್ಯಕ್ಷರಾಗಿ ಲಬೀದ್ ಶಾಫಿ ಆಲಿಯಾ ಆಯ್ಕೆ

0
844

ಎಸ್ ಐ ಓ ರಾಷ್ಟ್ರಾಧ್ಯಕ್ಷ ರಾಗಿ ಲಬೀದ್ ಶಾಫಿ ಆಲಿಯಾ ಆಯ್ಕೆಯಾಗಿದ್ದಾರೆ. ಮುಹಮ್ಮದ್ ಮತ್ತು ಝೈನಬ್ ರ 8 ಮಕ್ಕಳಲ್ಲಿ 3 ನೇ ಮಗನಾಗಿ ಉಪ್ಪಿನಂಗಡಿಯಲ್ಲಿ ಜನಿಸಿರುವ ಇವರು,1 ರಿಂದ 7 ನೇ ತರಗತಿಯವರೆಗೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಣ. 8 ರಿಂದ 10 ನೇ ತರಗತಿಯವರೆಗೆ ಫರ್ಸ್ಟ್ ಗ್ರೇಡ್ ಕಾಲೇಜ್ ಉಪ್ಪಿನಂಗಡಿಯಲ್ಲಿ ಪ್ರೌಢ ಶಿಕ್ಷಣ. 2003 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಆಲಿಯಾ ಅರಬಿಕ್ ಕಾಲೆಜ್ ಕಾಸರಗೋಡು ಪ್ರವೇಶಪಡೆದ ಇವರು ಭಾಷಣ, ಬರಹ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

2008 ರಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕಾಸರಗೋಡು ನಡೆಸಿದ ಎಂಡೋ ಸಲ್ಫಾನ್ ವಿರುದ್ಧ ಹೋರಾಟದಲ್ಲಿ ಉಪ್ಪಳ ಪ್ರದೇಶದಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಗಮನ ಸೆಳೆದ ಇವರು,
ಸನ್ಮಾರ್ಗ ,ಅನುಪಮ ಪತ್ರಿಕೆಗಳಲ್ಲಿ ಲೇಖನ ಮತ್ತು ಕತೆಗಳನ್ನು ಬರೆದಿದ್ದಾರೆ. ಕನ್ನಡ, ಮಲೆಯಾಳಮ್, ಹಿಂದಿ, ಉರ್ದು, ಅರೆಬಿಕ್, ಇಂಗ್ಲಿಷ್, ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನೂ ಪಡೆದಿದ್ದಾರೆ.

2010- 2011 ರಲ್ಲಿ sio ಕಾಸರಗೋಡು ಜಿಲ್ಲಾ ಸದಸ್ಯರಾಗಿ ಸಕ್ರಿಯರಾದ ಇವರು,  2011-2013ರ ವರೆಗೆ ಮಲಪ್ಪುರಂ, ಉಪ್ಪಿನಂಗಡಿ, ಮಂಗಳೂರು, ಕೃಷ್ಣಾಪುರ ದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ sio ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾಗಿ ಹೊಣೆಗಾರಿಕೆ ನಿರ್ವಹಿಸಿ,  2014 -15 ರವರೆಗೆ sio ಕರ್ನಾಟಕ ರಾಜ್ಯದ ಹೊಣೆಗಾರಿಕೆ ನಿರ್ವಹಿಸಿದ್ದಾರೆ.  2015 -16 ಅವಧಿಗೆ sio ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆ. 2017-18 ಅವಧಿಗೆ sio ರಾಷ್ಟ್ರೀಯ ಕಾರ್ಯದರ್ಶಿಯಾಗಿ  ಆಯ್ಕೆ.

ಇದೀಗ 2019-2020  ಅವಧಿಗೆ sio ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ . ಇವರು ಕಲ್ಲಿಕೋಟೆ ವಿಶ್ವ ವಿದ್ಯಾನಿಲಯದಿಂದ M.A, B.ed ಮತ್ತು ಆಲಿಯಾ ಅರಬಿಕ್ ಕಾಲೇಜು ನಿಂದ ಅರಬಿಕ್ ಪಾರಾಂಗತರಾಗಿದ್ದಾರೆ.

 

ವರದಿ: ಅಶೀರುದ್ದೀನ್ ಆಲಿಯಾ