900 ಸಿರಿಯನ್ನರು ಶೀಘ್ರ ಸ್ವಂತ ಮನೆಗಳಿಗೆ ತೆರಳಲಿದ್ದಾರೆ: ರಷ್ಯಾ

0
121

ಡಮಸ್ಕಸ್,ಜೂ. 12: ಜೋರ್ಡಾನ್, ಲೆಬನಾನ್‍ಗಳಿಂದ 900ರಷ್ಟು ಸಿರಿಯನ್ ಪ್ರಜೆಗಳು ಸ್ವಂತ ಮನೆಗಳಿಗೆ ಶೀಘ್ರದಲ್ಲಿ ಮರಳಲಿದ್ದಾರೆ ಎಂದು ರಷ್ಯನ್ ಗೃಹ ಸಚಿವಾಲಯ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ 884 ಸಿರಿಯನ್ ನಾಗರಿಕರು ನಿರಾಶ್ರಿತ ಶಿಬಿರಗಳಿಂದ ತಮ್ಮ ಮನೆಗಳಿಗೆ ಮರಳಲಿದ್ದಾರೆ. ಇವರಲ್ಲಿ 103 ಮಂದಿ ಮಹಿಳೆಯರು ಮತ್ತು 174 ಮಕ್ಕಳೂ ಇದ್ದಾರೆ.

ಜೋರ್ಡಾನಿನ ನಸೀಬ್ ಚೆಕ್‍ಪೋಸ್ಟ್ ಮೂಲಕ ಇವರು ಮರಳುತ್ತಿದ್ದಾರೆ. 2011ರಲ್ಲಿ ಆರಂಭವಾದ ಯುದ್ಧದ ಬಳಿಕ ಸಾವಿರಾರು ಸಿರಿಯನ್ ಪ್ರಜೆಗಳು ಪಲಾಯ ಮಾಡಿ ಪ್ರಪಂಚದ ನಾನಾ ಭಾಗಗಳಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಹಲವಾರು ಮಂದಿ ಸ್ವಂತ ಮನೆ, ಊರು, ಕುಟುಂಬ ತೊರೆದು ವಿದೇಶದಲ್ಲಿ ಬದುಕುತ್ತಿದ್ದು ಕೆಲವರು ಈಗಲೂ ನಿರಾಶ್ರಿತರ ಶಿಬಿರದಲ್ಲಿಯೇ ಉಳಿದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here