ಸಾಲೆತ್ತೂರು: ಸ್ವಯಂ ಪ್ರೇರಿತ ಲಾಕ್‌‌ಡೌನ್‌ಗೆ ವ್ಯಾಪಾರಸ್ಥರಿಂದ ತೀರ್ಮಾನ

0
220

ಸನ್ಮಾರ್ಗ ವಾರ್ತೆ

ಸಾಲೆತ್ತೂರು,ಜು.4: ದ.ಕ‌ ಜಿಲ್ಲೆಯಲ್ಲಿ ಕೊರೋನ ವ್ಯಾಪಕವಾಗುತ್ತಿದ್ದು ವಿಟ್ಲ ಪರಿಸರದಲ್ಲೂ ಹಲವು ಕೊರೋನಾ ಪಾಸಿಟಿವ್ ವರದಿಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸಾಲೆತ್ತೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 6ರ ಸೋಮವಾರದಿಂದ ಸಾಲೆತ್ತೂರಿನಾದ್ಯಂತ ಮುಂದಿನ ತೀರ್ಮಾನದವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಕೊರೋನಾ ವಾರಿಯರ್ಸ್‌ಗಳಾದ ಹಲವು ವೈದ್ಯರು, ಲ್ಯಾಬ್ ಟೆಕ್ನೀಶಿಯನ್‌ಗಳು, ಪೊಲೀಸ್ ಅಧಿಕಾರಿಗಳು, ಶಾಸಕರು, ಸ್ತಳೀಯಾಡಳಿತ ಸಂಸ್ಥೆಗಳ ಸದಸ್ಯರೂ ಕೂಡಾ ಕೋವಿಡ್-19ಗೆ ತುತ್ತಾಗಿದ್ದು, ಹಲವರ ಕೋವಿಡ್ ಸಂಪರ್ಕ ಮೂಲಗಳೇ ಇನ್ನೂ ಕೂಡಾ ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸಾಲೆತ್ತೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ‌‌ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

ಓದುಗರೇ,ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.