ಫಲಿತಾಂಶ ಬರುವ ಮೊದಲೇ ಕೃತಜ್ಞತೆ ಸಲ್ಲಿಸಿದ ಸ್ಮೃತಿ ಇರಾನಿ!

0
300

ಹೊಸದಿಲ್ಲಿ,ಮೇ 23: ಎನ್‍ಡಿಎ ಸರಕಾರಕ್ಕೆ ಎಲ್ಲ ಬೆಂಬಲವನ್ನು ನೀಡಿದ ಜನರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರಲು ಕೆಲವು ಗಂಟೆಗಳಿರುವಾಗಲೇ ಸ್ಮೃತಿ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇಶವನ್ನು ಒಡೆಯಲಾಗುತ್ತಿದೆ ಎಂದು ಬೊಬ್ಬೆಹಾಕಿದ ಜನರ ವಿರುದ್ಧ ಗಟ್ಟಿಯಾಗಿ ನಿಂತು ಭಾರದ ಕುರಿತು, ದೇಶದ ಭವಿಷ್ಯದ ಕುರಿತು ಸ್ಪಷ್ಟ ನಿಲುವನ್ನು ಪ್ರಕಟಪಡಿಸಿದ ಎಲ್ಲ ಪ್ರಜೆಗಳಿಗೂ ತನ್ನ ಹೃತ್ಪೂರ್ವಕ ಕೃತಜ್ಞತೆಗೆಳು ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.