ಕುರ್‍ಆನಿನ ಸಾಮಾಜಿಕ ಚಿಂತನೆಗಳು: ಧರ್ಮ ಗ್ರಂಥ

0
1261

ಎಂ. ಅಶೀರುದ್ದೀನ್ ಆಲಿಯ, ಮಂಜನಾಡಿ

“ಓ ಪೈಗಂಬರರೇ, ಅವನು ನಿಮ್ಮ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಇದು ಸತ್ಯವನ್ನು ತಂದಿದೆ. ಇದು ಈ ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ. ಇದಕ್ಕಿಂತ ಮುಂಚೆ ಅವನು ಮಾನವನ ಸನ್ಮಾರ್ಗದರ್ಶನಕ್ಕಾಗಿ ತೌರಾತ್ ಮತ್ತು ಇಂಜೀಲನ್ನು ಅವತೀರ್ಣ ಗೊಳಿಸಿದ್ದನು ಮತ್ತು ಅವನು `ಸತ್ಯಾಸತ್ಯತೆಗಳ ತಾರತಮ್ಯ ತೋರಿಸುವ’ ಒರೆಗಲ್ಲನ್ನೂ ಅವತೀರ್ಣ ಗೊಳಿಸಿರುತ್ತಾನೆ.” (ಆಲಿ ಇಮ್ರಾನ್: 3)

ಕಾಲ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಪ್ರವಾದಿಗಳ ಆಗಮಿಸಿದ್ದಾರೆ. ಜನರನ್ನು ಅನೈತಿಕ, ಅಕ್ರಮ, ಅಶ್ಲೀಲ ಕೃತ್ಯಗಳಿಂದ ಸರಿದಾರಿಗೆ ತರಲು ಪ್ರವಾದಿಗಳ ಮುಖಾಂತರ ಜನರಿಗೆ ಹಿತೋಪದೇಶ ಗಳನ್ನು, ಆಜ್ಞೆಗಳನ್ನು, ಸುವಾರ್ತೆಗಳನ್ನು ನೀಡುತ್ತಾ ಮ ನುಷ್ಯರನ್ನು ಶುದ್ಧೀಕರಿಸುವುದು ಇವರ ಕರ್ತವ್ಯ. ದೇವನ ದಿವ್ಯ ದರ್ಶನದಿಂದಲ್ಲದೆ ಅವನ ನುಡಿಗಳಿಂದಲ್ಲದೆ ಪ್ರವಾದಿಗಳಿಗೆ ಜನರನ್ನು ಉತ್ತಮರಾಗಿ ಪರಿವರ್ತನೆಗೊಳಿಸಲು ಸಾಧ್ಯವಿಲ್ಲ. ಆ ಧರ್ಮೋಪದೇಶಗಳು ನಂತರದ ಕಾಲಘಟ್ಟದಲ್ಲಿ ಪುಸ್ತಕ ಅಥವಾ ಗ್ರಂಥಗಳ ರೂಪಕ್ಕಿಳಿದು ಧರ್ಮಗ್ರಂಥಗಳು ಎಂದು ಎನಿಸಿಕೊಂಡವು. ಆ ಮುಖಾಂತರ ಆ ಸಮಾಜದ ಜನರನ್ನು ಹಿತೋಪದೇಶ ಮಾಡುತ್ತಾ, ಸಂಸ್ಕರಿಸುತ್ತಾ ಬಂತು. ಪ್ರವಾದಿ ಆದಂ(ಅ)ರಿಂದ ಆರಂಭವಾದ ಮನುಷ್ಯಕುಲಕ್ಕೆ ಎಲ್ಲ ಕಾಲಗಳಲ್ಲೂ ಪ್ರವಾದಿಗಳ ಆಗಮನವಾಗಿರುತ್ತದೆ. ಎಲ್ಲಾ ಪ್ರವಾದಿಗಳ ಮುಖಾಂತರ ಅವರ ಸಮುದಾಯಕ್ಕೆ ದೇವನ ಸಂದೇಶವೂ ರವಾನೆಯಾಗಿರುತ್ತದೆ. ಅವುಗಳನ್ನು ಕೆಲವರು ಕಂಠಪಾಠ ಮಾಡಿಯೂ ಕಲ್ಲುಗಳಲ್ಲಿ ಕೆತ್ತಿಯೂ, ಚರ್ಮಗಳಲ್ಲಿ, ಎಲೆಗಳಲ್ಲಿ ಬರೆದೂ ಶೇಖರಿಸಿ ಗ್ರಂಥವಾಗಿಸಿದ್ದಾರೆ. ಕೆಲವು ಅಳಿದು ಹೋದವುಗಳೂ ಇವೆ. ಆದ್ದರಿಂದ ಇಂದು ನಮ್ಮ ಮುಂದೆ ಪ್ರಚಲಿತದಲ್ಲಿರುವ ಅಥವಾ ಗ್ರಂಥ ರೂಪದಲ್ಲಿರುವ ಯಾವ ಧರ್ಮ ಗ್ರಂಥವೂ ಸುಳ್ಳಲ್ಲ. ಅವುಗಳಲ್ಲಿ ಮನುಷ್ಯರ ಹಸ್ತಕ್ಷೇಪಗಳು ನಡೆದಿರಲೂ ಬಹುದು. ಆದರೆ ದೇವನು ಧರ್ಮೋಪದೇಶಗಳನ್ನು ಸಾರುವ ಧರ್ಮಗ್ರಂಥಗಳನ್ನು ಕಳುಹಿಸಿದ್ದಾನೆ ಎಂಬ ಮಾತು ಸತ್ಯಸಂಧವಾಗಿದೆ.

ಧರ್ಮಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಪವಿತ್ರವೆಂದು, ಭಗವಂತನ ಮಾತುಗಳೆಂದು ಪರಿಗಣಿಸಿ ಅಚಲವಾದ ನಂಬಿಕೆಯನ್ನು ಧರ್ಮಾನುಯಾಯಿಗಳು ಇಡುತ್ತಾರೆ. ವಿಶ್ವದಲ್ಲಿ ಪುರಾತನವಾದ ಹಾಗೂ ಪ್ರಸ್ತುತವಾದ ಹಲವು ಧರ್ಮಗಳು ಪ್ರಚಾರದಲ್ಲಿವೆ. ಅವುಗಳ ಸಂದೇಶಗಳನ್ನು ತಿಳಿಸುವ ಧರ್ಮ ಗ್ರಂಥಗಳೂ ಇವೆ. ಬಹಾಯಿ ಧರ್ಮದವರಿಗೆ ಕಿತಾಬ್-ಇ-ಅಬಾಸ್, ಬುದ್ಧ ಧರ್ಮದವರಿಗೆ ತ್ರಿಪಟಕ, ಯಹೂದಿಗಳಿಗೆ ತನಾಕ್, ಹಿಂದೂ ಧರ್ಮದಲ್ಲಿ ಭಗವದ್ಗೀತೆ, ರಾಮಾಯಣ, ವೇದಗಳು, ಉಪ ನಿಷತ್‍ಗಳು, ಕ್ರೈಸ್ತ ಧರ್ಮದವರಿಗೆ ಬೈಬಲ್ ಹಾಗೂ ಇಸ್ಲಾಮ್ ಧರ್ಮದವರಿಗೆ ಪವಿತ್ರ ಕುರ್‍ಆನ್ ಮುಖ್ಯ ಗ್ರಂಥಗಳಾಗಿವೆ.

ಧರ್ಮ ಗ್ರಂಥಗಳು ಮನುಷ್ಯನ ಜೀವನಕ್ಕೆ ಇರುವ ದಾರಿದೀಪ. ಜನರ ಕಲ್ಯಾಣಕ್ಕಿರುವ, ಮನುಷ್ಯನ ಹಿತಕ್ಕಿರುವ ದೇವ ಗ್ರಂಥಗಳನ್ನು ಮನುಷ್ಯ ಕಾಲ ಕಳೆದಂತೆ ತನ್ನ ಸ್ವಾರ್ಥದ ಲಾಭಕ್ಕಾಗಿ ಬಳಸಿಕೊಂಡ. ಹೀಗೆ ಬಳಸಿಕೊಂಡದ್ದ ರಿಂದ ನಾಡಿನ, ಸಮಾಜದ ವ್ಯವಸ್ಥೆಯು ಅಸ್ತವ್ಯಸ್ತವಾಗಿ ಪರಿಣಮಿಸಿತು. ಬೈಬಲ್, ಭಗವದ್ಗೀತೆ ಹಾಗೂ ವೇದ ಉಪನಿಷತ್‍ಗಳಲ್ಲಿ ಮನುಷ್ಯನ ಹಸ್ತಕ್ಷೇಪಗಳು ನಡೆದಿದೆ ಮತ್ತು ಮನುಷ್ಯನ ಲಾಭಕ್ಕಾಗಿ ದುರಪಯೋಗ ಪಡಿಸಿಕೊಳ್ಳಲಾಗಿದೆ. ಅದು ಅವತರಿಸಿದ ಅಂದಿನ ರೂಪದಲ್ಲಿ ಇಂದಿಲ್ಲ. ಬೈಬಲ್‍ನಲ್ಲಿ ಎರಡು ವಿಭಾಗಗಳಿವೆ. ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ. ಹಳೆ ಒಡಂಬಡಿಕೆ ಕುರ್‍ಆನಿನ ಪ್ರಕಾರ ಇಂಜೀಲ್ ಎಂದೂ, ಹೊಸ ಒಡಂಬಡಿಕೆಯು ತೌರಾತಿನ ಕೆಲವು ಭಾಗಗಳಾಗಿವೆ. ಇಂಜೀಲ್ ಈಸಾ (ಅ)[ಏಸು]ರವರಿಗೂ, ತೌರಾತ್ ಮೂಸಾ(ಮೋಸೆಸ್)ರವರಿಗೂ ಅವತಿರಿಸಿದ ಗ್ರಂಥ. ಇದು ಕಾಲ ಕಾಲಕ್ಕೆ ಮಾರ್ಪಾಟುಗೊಂಡು ತನ್ನ ಪರಿಶುದ್ಧತೆಯನ್ನು ಕಳೆದುಕೊಂಡಿದೆ. ಪ್ರಕೃತಿಗೆ ವಿರುದ್ಧವಿರುವ, ಜಾತಿ ತಾರತಮ್ಯವಿರುವ ವರ್ಣ ಭೇದಗಳನ್ನು ಸಾರುವ ಗ್ರಂಥಗಳು ದೇವ ಗ್ರಂಥಗಳಾಗಿರಲು ಸಾಧ್ಯವಿಲ್ಲ. ಅಂತಹ ಸೂಕ್ತಗಳು ಹಿಂದೂ ಧರ್ಮದ ಕೆಲವು ವೇದೋಪನಿಷತ್‍ಗಳಲ್ಲಿ ಕಾಣ ಸಿಗುತ್ತದೆ. ದೇವನು ಕಳುಹಿಸಿದ ಗ್ರಂಥಗಳಲ್ಲಿ ಹಸ್ತಕ್ಷೇಪ ನಡೆದ ಕಾರಣಕ್ಕೆ ಅಲ್ಲಾಹನು ಅಂತ್ಯದಿನದ ವರೆಗಿನ ಜನರನ್ನು ಬೋಧಿಸಲು, ಅವರ ಜೀವನವನ್ನು ಸಮ ರೀತಿಯಲ್ಲಿ ರೂಪಿಸಲು ಪ್ರವಾದಿ(ಸ) ಮುಖಾಂತರ ಕುರ್‍ಆನ್ ಅನ್ನು ಅವರ್ತೀಣಗೊಳಿಸುತ್ತಾನೆ. ಹಿಂದೆ ಬಂದಿರುವ ಎಲ್ಲಾ ಗ್ರಂಥಗಳಲ್ಲಿ ವಿಶ್ವಾಸವಿಟ್ಟು ಈ ಗ್ರಂಥದ ಮೇಲೆ ವಿಶ್ವಾಸವಿಡುವವರಿಗೆ ಇದು ಮಾರ್ಗ ದರ್ಶನವಾಗಿದೆ ಎಂದು ಹೇಳುತ್ತದೆ ಕುರ್‍ಆನ್.

“ಇದು ದೈವಿಕ ಗ್ರಂಥ; ಸಂದೇಹಾತೀತವಿದು. ಮುತ್ತಕಿಗಳಿಗೆ (ಭಯ-ಭಕ್ತಿಯುಳ್ಳವರಿಗೆ) ಇದು ಮಾರ್ಗದರ್ಶಿ.” (ಅಲ್‍ಬಕರ: 2) ಇದು ಸ್ಪಷ್ಟವಾದ ಅಲ್ಲಾಹನ ಗ್ರಂಥವಾಗಿದೆ. ಅದನ್ನು ಈ ರೀತಿ ಕುರ್‍ಆನ್ ಹೇಳುತ್ತದೆ, “ಈ ಕುರ್‍ಆನ್ ಅಲ್ಲಾಹನ ದಿವ್ಯವಾಣಿ ಮತ್ತು ಬೋಧನೆಯ ಹೊರತು ರಚಿಸಲ್ಪಡುವಂತಹ ವಸ್ತುವಲ್ಲ. ನಿಜವಾಗಿ ಇದು ಹಿಂದೆ ಬಂದಿದ್ದುದರ ದೃಢೀಕರಣವೂ ಪರಮ ಗ್ರಂಥದ ವಿವರಣೆಯೂ ಆಗಿರುತ್ತದೆ. ಇದು ಸರ್ವಲೋಕಾಧಿಪತಿಯ ಕಡೆಯಿಂದ ಬಂದಿರುವುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.” (ಯೂನುಸ್: 37)
ಅಲ್ಲಾಹನು ಕೊನೆಯದಾಗಿ ಕಳುಹಿಸಿದ ಈ ಗ್ರಂಥ ಯಾವಾಗ ಮನುಷ್ಯನಿಗೆ ಸಂಪೂರ್ಣ ಮಾರ್ಗದರ್ಶನ ಗ್ರಂಥವಾಗುತ್ತದೆಂದರೆ ಹಿಂದೆ ಕಳುಹಿಸಲ್ಪಟ್ಟ ಗ್ರಂಥದ ಮೇಲೆ ವಿಶ್ವಾಸವಿಡುವುದ ರಿಂದ ಮಾತ್ರ ಎಂದು ಕುರ್‍ಆನ್ ಹೇಳುತ್ತದೆ, ಆದ್ದರಿಂದ ಇದು ಮಾನವನ ಮಾರ್ಗದರ್ಶನಕ್ಕೆ ಕಳುಹಿಸಿದ ಗ್ರಂಥವಾಗಿರುತ್ತದೆ.

ಅಲ್ಲಾಹನು ಮೂಸರವರ ಮುಖಾಂತರ ಅವರ ಸಮುದಾಯಕ್ಕೂ ಧರ್ಮಗ್ರಂಥ ಕಳುಹಿಸಿ ದನು. ಅದೇ ರೀತಿ ಈಸಾ(ಅ) ಮುಖಾಂತರ ಅವರ ಸಮುದಾಯದ ಜನರಿಗೂ, ದಾವೂದ್‍ರ ಜನಾಂಗಕ್ಕೂ ಮತ್ತು ಕೆಲವು ಪ್ರವಾದಿಗಳಿಗೆ ಸುಹುಫ್ ಹಲಗೆಗಳನ್ನು, ಪತ್ರಗಳನ್ನು, ಲೇಖನ ಗಳನ್ನು ಕಳುಹಿಸಿದನು. ಅಲ್ಲಾಹನು ಅದನ್ನು ಹೀಗೆ ಹೇಳುತ್ತಾನೆ, “ಅವನು ನೂಹರಿಗೆ ಆಜ್ಞಾಪಿ ಸಿದ್ದ ಧರ್ಮ ವಿಧಾನವನ್ನೇ ನಿಮಗಾಗಿಯೂ ನಿಶ್ಚಯಿಸಿಕೊಟ್ಟಿದ್ದಾನೆ ಮತ್ತು ಈಗ ನಾವು ಅದನ್ನೇ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿರುತ್ತೇವೆ. ಇದನ್ನೇ ನಾವು ಇಬ್ರಾಹೀಮ್, ಮೂಸಾ ಮತ್ತು ಈಸಾರಿಗೂ ಬೋಧಿಸಿದ್ದೆವು.” (ಅಶ್ಶೂರಾ: 13) ಅದೇ ರೀತಿ.

“ಓ ಪೈಗಂಬರರೇ, ಹೇಳಿರಿ ುನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ. ನಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವ ಶಿP್ಷÀಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅïಕೂಬ್ ಮತ್ತು ಯಅïಕೂಬರ ಸಂತತಿಗಳ ಮೇಲೆ ಅವತೀರ್ಣಗೊಳಿಸಲ್ಪಟ್ಟ ಶಿP್ಷÀಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ಕಡೆಯಿಂದ ನೀಡಲ್ಪಟ್ಟವುಗಳ ಮೇಲೂ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ಭೇದವೆಣಿ ಸುವುದಿಲ್ಲ ಮತ್ತು ನಾವು ಅಲ್ಲಾಹನ ಆe್ಞÁಪಾಲಕ `ಮುಸ್ಲಿಮ್’ ಆಗಿರುತ್ತೇವೆ.”(ಆಲಿ ಇಮ್ರಾನ್: 85)

ಅಲ್ಲಾಹನು ಕೊನೆಯದಾಗಿ ಕಳುಹಿಸಿದ ಈ ಗ್ರಂಥದಲ್ಲಿ ಯಾವುದೇ ಹಸ್ತಕ್ಷೇಪವಾಗದಂತೆ ಮತ್ತು ಅಂತ್ಯದಿನದ ವರೆಗೆ ಇದರ ಸಂರಕ್ಷಣೆಯ ಹೊಣೆಯನ್ನು ಅವನೇ ಹೂತ್ತಿದ್ದಾನೆ. ಇದರ ಸೂಕ್ತಗಳನ್ನು ವಚನಗಳನ್ನು ಹಿಂದಿನ ಗ್ರಂಥಗಳನ್ನು ಹಸ್ತಕ್ಷೇಪ ದಿಂದ ಸ್ವಾರ್ಥ ಲಾಭಕ್ಕೆ ಬಳಸಿಕೊಂಡಂತೆ ಇದನ್ನು ಬಳಸಬಾರದು. ಅಂತಹವರಿಗೆ ಅಲ್ಲಾಹನು ತಾಕೀತು ಮಾಡುತ್ತಾನೆ.

“ಅಲ್ಲಾಹನು ತನ್ನ ಗ್ರಂಥದಲ್ಲಿ ಅವತೀರ್ಣ ಗೊಳಿಸಿದ ಆದೇಶಗಳನ್ನು ಬಚ್ಚಿಟ್ಟು, ಅವುಗಳನ್ನು ಲೌಕಿಕ ಲಾಭಕ್ಕಾಗಿ ಬಲಿ ಕೊಡುವವರು ವಾಸ್ತವದಲ್ಲಿ ತಮ್ಮ ಹೊಟ್ಟೆಯನ್ನು ಅಗ್ನಿಯಿಂದ ತುಂಬುತ್ತಿದ್ದಾರೆ.” (ಅಲ್‍ಬಕರ: 174)

ಅಲ್ಲಾಹನು ಭೂಲೋಕಕ್ಕೆ ಕಳುಹಿಸಿದ ಯಾವ ಗ್ರಂಥವನ್ನೂ ಸುಳ್ಳಾಗಿಸುವ ಅದನ್ನು ನಿರಾಕರಿಸುವ ಹಕ್ಕು ಮನುಷ್ಯನಿಗಿಲ್ಲ. ಅದರಲ್ಲಿ ವಿಶ್ವಾಸ ತಾಳಿ ಅದರ ಒಳಿತನ್ನು ಪಾಲಿಸಬೇಕಾಗಿರುವುದು ನಮ್ಮ ಧರ್ಮವಾಗಿರುತ್ತದೆ. ಎಲ್ಲಾ ಧರ್ಮ ಗ್ರಂಥಗಳೂ, ಒಳಿತನ್ನು ಸಂಸ್ಥಾಪಿಸಲು ಇರುವುದು. ಎಲ್ಲಾ ಧರ್ಮ ಗ್ರಂಥಗಳೂ ಒಳಿತಿನ ಸಂದೇಶವನ್ನೇ ಸಾರುತ್ತವೆ. ಧರ್ಮ ಗ್ರಂಥದ ಮೇಲೆ ಜಗಳವಾಡುವುದು, ಹೊಡೆದಾಡುವುದು, ಹಿಯಾಳಿಸುವುದು ನಿಂದಿಸುವುದು, ಧರ್ಮ ವಿರುದ್ಧ ಕೆಲಸ. ಕುರ್‍ಆನ್ ಹೇಳುತ್ತದೆ, “ಅಲ್ಲಾಹನ ವಚನಗಳ ಬಗ್ಗೆ ಜಗಳ ಮಾಡುವವರನ್ನು ನೀವು ಕಂಡಿರಾ? ಅವರು ಎಲ್ಲಿಂದ ದಾರಿಗೆಡಿಸಲ್ಪಡುತ್ತಿದ್ದಾರೆ? ಇವರು ಈ ಗ್ರಂಥವನ್ನೂ ನಾವು ನಮ್ಮ ಸಂದೇಶವಾಹಕರೊಂದಿಗೆ ಕಳುಹಿಸಿದ್ದ ಎಲ್ಲ ಗ್ರಂಥಗಳನ್ನೂ ಸುಳ್ಳಾಗಿಸುತ್ತಾರೆ.” (ಅಲ್ ಮುಅïಮಿನೂನ್: 69)

ತಮ್ಮ ಧರ್ಮದ ಗ್ರಂಥಗಳನ್ನು ಸರಿಯಾಗಿ ಶ್ರದ್ಧೆಯಿಂದ ಓದುವುದರಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಗ್ರಂಥಗಳನ್ನು ಓದುವುದರೊಂದಿಗೆ ಸಮಾಜದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಶ್ರಮಿಸುತ್ತೇವೆ. ಕೇವಲ ವೇದ ಓದುವುದರಿಂದ ಮನುಷ್ಯನಾಗಿ ಬದಲಾಗಲು ಸಾಧ್ಯವಿಲ್ಲ. “ಕೋಶ ಓದು ದೇಶ ಸುತ್ತು” ಎಂಬ ಪದದಂತೆ ಗ್ರಂಥಗಳನ್ನು ಓದುವುದರೊಂದಿಗೆ ದೇವನನ್ನು ಕಾಣುವಂತಾಗಬೇಕು. ಅದಲ್ಲದಿದ್ದರೆ ದೇವನು ನಮ್ಮನ್ನು ಕಾಣುತ್ತಿದ್ದಾನೆ ಎಂಬ ಭಯ ಬರಬೇಕು. ಹಾಗಾದರೆ ಅದರಂತೆ ದೈವಿಕ ಆಜ್ಞೆಯಂತೆ ಬದುಕಲು ಸಾಧ್ಯವಾಗುತ್ತದೆ.

ಎಲ್ಲರೂ ಅವರವರ ಧರ್ಮದ ಅಧ್ಯಯನವನ್ನು ನಡೆಸಿ ಅದರಂತೆ ನಡೆಯುವುದಾದರೆ ಇಲ್ಲಿ ಕೋಮುವಾದ, ಭಯೋತ್ಪಾದನೆ, ಅನೈತಿಕ ಚಟುವಟಿಕೆಗಳು, ಅಕ್ರಮ, ಕೊಲೆ, ದರೋಡೆಗಳು ನಡೆಯಲು ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಸಿಗುವುದಿಲ್ಲ. ಪ್ರತಿಯೊಬ್ಬನೂ ತನ್ನ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಇನ್ನೊಬ್ಬರ ಧರ್ಮವನ್ನು ಗೌರವಿಸುತ್ತಾನೆ. ತನ್ನ ಗ್ರಂಥವನ್ನು ಓದುವುದರ ಜೊತೆಗೆ ಇನ್ನೊಬ್ಬರ ಗ್ರಂಥವನ್ನು ಓದುವ ಮನಸ್ಸು ಬೆಳೆಸುತ್ತಾನೆ. ಈ ಹೃದಯ ವೈಶಾಲ್ಯತೆಯಿಂದಲೇ ಜಗತ್ತು ಶಾಂತಿ ಸಮಾಧಾನವನ್ನು ಕಾಣಲು ಸಾಧ್ಯ.