ಕೊರೋನಾ ವಿರುದ್ಧ 2 ತಿಂಗಳ ಕಾಲ ಹೋರಾಡಿ ಗೆದ್ದ 71ರ ವೃದ್ಧೆ ಮರಿಯಾ

0
491

ಸನ್ಮಾರ್ಗ ವಾರ್ತೆ

ಮ್ಯಾಡ್ರಿಡ್,ಮೇ.26: ಆಸ್ಪತ್ರೆಯಲ್ಲಿ ಸತತ ಎರಡು ತಿಂಗಳ ಕಾಲ ಕೊರೊನಾ ವಿರುದ್ಧ 71 ವರ್ಷದ ಹಿರಿಯ ಮಹಿಳೆ ಹೋರಾಡಿದ್ದಾರೆ. ಸಾವು ಅವರ ಸನಿಹದಿಂದ ಹಾದು ಹೋಗಿದೆ. ಮರಿಯಾ ಫೆರ್ನಾಂಡೆಸ್ ಈಗ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಕೊರೋನ ಪೀಡಿತರಾಗಿ ಆಸ್ಪತ್ರೆಯಲ್ಲಿರುವಾಗ ಹಲವು ಸಲ ಸಾವು ಅವರ ಹತ್ತಿರ ಸುಳಿದಿತ್ತು.

ಮರಣದೊಂದಿಗೆ ಮುಖಾಮುಖಿ ಹೋರಾಟದಲ್ಲಿ ಗೆದ್ದ ಅವರು ಈಗ ನಡೆದಾಡುತ್ತಿದ್ದಾರೆ ಮತ್ತು ಮಾತಾಡಲು ಸಮರ್ಥರಾಗಿದ್ದಾರೆ. ನನಗೆ ಇಷ್ಟು ಸಾಧ್ಯವಾಗುತ್ತಿದೆ. ಇದರಿಂದ ತುಂಬ ಸಂತೋಷವಾಗಿದೆ ಎಂದು ಮರಿಯಾ ಹೇಳಿದರು. ಮಾರ್ಚ್ 6ರಂದು ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ದಿವಸದಲ್ಲಿ ಅವರಿಗೆ ಕೊರೋನ ತಗಲಿದ್ದು ಪತ್ತೆಯೂ ಆಯ್ತು. ಅಂದಿನಿಂದ ಆರೋಗ್ಯ ಕಾರ್ಯಕರ್ತರು ತುಂಬ ಎಚ್ಚರಿಕೆಯಿಂದ ಮರಿಯಾರನ್ನು ಉಪಚರಿಸಿದ್ದಾರೆ. ಸ್ಪೈನಿನಲ್ಲಿ ಕೊರೋನ ದೃಢಪಟ್ಟಿರುವ 2,35,000 ಮಂದಿಯಲ್ಲಿ ಮಾರಿಯಾ ಕೂಡ ಒಬ್ಬರು.

“ಪ್ರತೀ ಬಾರಿ ಉಸಿರಾಡುವಾಗ ಕಷ್ಟವಾಗುತ್ತಿತ್ತು. ತಾನು ಬದುಕಿ ಉಳಿಯಲಾರೆ ಎಂದು ಅನಿಸಿತ್ತು. ಯಾರೊಂದಿಗೂ ನನ್ನ ಅವಸ್ಥೆಯನ್ನು ಹೇಳಲು ಸಾಧ್ಯವಿಲ್ಲ. ಭಯಾನಕವಾದ ಆ ದಿವಸಗಳು ದಾಟಿ ಹೋಗಿದೆ. ಮರಣ ದೇವಚರ ನನ್ನನ್ನು ಬಿಟ್ಟು ಹೋಗಿದೆ. ದೇವನು ನನಗೆ ಜೀವಿಸಲು ಇನ್ನೂ ಸ್ವಲ್ಪ ಸಮಯ ಕೊಟ್ಟಿದ್ದಾನೆ” ಅವರು ಹೇಳಿದರು.

ಒಂದು ವಾರ ಅವರನ್ನು ವೆಂಟಿಲೇಟರ್‌ನಲ್ಲಿಯೇ ಇರಿಸಲಾಗಿತ್ತು. ಹೀಗೆ ರಕ್ಷೆ ಹೊಂದಿದ ರೋಗಿಗಳಲ್ಲಿ ಹಲವರಿಗೆ ಮಾತಾಡಲು ಕಷ್ಟವಾಗುತ್ತದೆ ಮತ್ತು ನೆನಪಿನ ಶಕ್ತಿ ಇಲ್ಲದಾಗುತ್ತದೆ ಎನ್ನಲಾಗುತ್ತಿದೆ. ಆದರೆ ಮರಿಯಾ ರೊಸಾ ಫೆರ್ನಾಂಡಿಸರ ವಿಷಯದಲ್ಲಿ ಹೀಗಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅಂತೂ ಕೊರೋನದಿಂದ ಗುಣಮುಖರಾಗಿದ್ದಾರೆ. ಎಲ್ಲವನ್ನೂ ನೆನಪಿಸಿಕೊಂಡು ನಡೆದಾಡಲು ಅವರಿಂದ ಈಗ ಆಗುತ್ತಿದೆ ಎಂದಿದ್ದಾರೆ.