ಅಲ್ಪಸಂಖ್ಯಾತರು ಬಿಜೆಪಿ ಸೇರುತ್ತಿದ್ದಾರೆ: ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೆ ಹೇಳಿಕೆ

0
385

ಕೇರಳ,ಆ. 21: ಹೊಸದಾಗಿ ಏಳು ಲಕ್ಷದಷ್ಟು ಮಂದಿ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದ್ದಾರೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೆ ಹೇಳಿದ್ದು, ಆರಂಭ ಹಂತದಲ್ಲಿ ಸದಸ್ಯತ್ವ ವಿತರಣೆ ಪೂರ್ಣಗೊಂಡಿದೆ ಎಂದು ತಿಳಿಸಿದರು. ಕೇರಳದ ಮಲಬಾರು ಸಹಿತ ಅಲ್ಪಸಂಖ್ಯಾತರು ವ್ಯಾಪಕವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಬದಲಾವಣೆಯ ಆರಂಭವಾಗಿದೆ. ಸಿಪಿಎಂ ಕಾಂಗ್ರೆಸ್‍ನ ಕುಪ್ರಚಾರಕ್ಕೆ ಇದೊಂದು ಉತ್ತರವಾಗಿದೆ ಎಂದರು. ಅವರು ಬಿಜೆಪಿ ರಾಜ್ಯ ನಾಯಕರ ಸಭೆಯಲ್ಲಿ ಈ ವಿವರವನ್ನು ನೀಡಿದರು.

ನೆರೆ, ಪ್ರಕೃತಿ ದುರಂತದಿಂದಾಗಿ ಉದ್ದೇಶಿಸಿದಷ್ಟು ಸಮಯದಲ್ಲಿ ಸದಸ್ಯತ್ವ ಅಭಿಯಾನ ಮಾಡಿ ಮುಗಿಸಲು ಆಗಿಲ್ಲ. ಆದ್ದರಿಂದ ಎರಡು ವಾರ ಅಭಿಯಾನ ವಿಸ್ತರಣೆ ಮಾಡಲಾಯಿತು. ಶೇ.20ರಷ್ಟು ಸದಸ್ಯತ್ವ ಈಗ ಹೆಚ್ಚಳವಾಗಿದೆ ಎಂಬ ನಿರೀಕ್ಷೆ ತನಗಿದೆ. ಮಾಜಿ ಶಾಸಕ ಎಸ್‍ಎನ್‍ಡಿಪಿ ಯೂನಿಯನ್ ಮಾಜಿ ಅಧ್ಯಕ್ಷ ಉಮೇಶ್ ಚಳ್ಳಿಯಿಲ್, ನಿರ್ದೇಶಕ ಸೋಮನ್ ಅಂಬಾಟ್, ಸೇವಾದಳ ಕಾರ್ಯಕರ್ತ ಪ್ರಕಾಶ್ ಅಟ್ಟಕುಳಂಗರ ಮೊದಲಾದವರು ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ. ಬುಧವಾರ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಿ.ಸಿ.ಡಾ.ಅಬ್ದುಸ್ಸಲಾಂ, ಬಾಫಕಿ ತಂಙಳ್‍ರ ಮೊಮ್ಮಗ ತಾಹ ಬಾಫಕಿ ತಂಙಳ್, ಪರೋ. ಪಿ.ಕೆ. ಉಮರ್ , ಯಹ್ಯಾ ಖಾನ್, ಡಾ. ಮುಹಮ್ಮದ್ ಜಾಸಿರ್, ಡಾ. ಹರ್ಷನ್ ಆಂಟನಿ, ಕಲ್ಲಿಕೋಟೆ ಮಾಜಿ ಮೇಯರ್ ಯುಟಿ ರಾಜನ್ ಸಹಿತ ಹದಿನಾರು ಮಂದಿ ಸದಸ್ಯತ್ವ ಸ್ವೀಕರಿಸುವರು ಎಂದು ಶ್ರೀಧರನ್ ಪಿಳ್ಳೆ ತಿಳಿಸಿದರು.