ಸ್ತ್ರೀವಾದದ ಪೊಳ್ಳುತನ

0
1453
ಸಾಂದರ್ಭಿಕ ಚಿತ್ರ

-ಪಿ. ರುಕ್ಸಾನ


ಇಪ್ಪತ್ತನೇ ಶತಮಾನದ ಮೊದಲಾರ್ಧದ ಬಳಿಕ ಉದಾರೀಕರಣವನ್ನು ಜೀವನದ ಶೈಲಿಯಾಗಿ ಎತ್ತಿ ತೋರಿಸಲಾಯಿತು. ಮಾನವನ ಸ್ವಯಂ ತೀರ್ಮಾನದ ಹಕ್ಕು, ಸ್ವಂತ ಶರೀರದ ಮೇಲಿನ ಹಕ್ಕು, ವ್ಯಕ್ತಿ ಸ್ವಾತಂತ್ರ್ಯ ಮೊದಲಾದುವನ್ನು ನಿಯಂತ್ರಿಸುವ ಯಾವ ಅಧಿಕಾರವನ್ನೇ ಆಗಲಿ ಪ್ರಶ್ನಿಸುವುದು ಅನಿವಾರ್ಯವೆಂದೂ ಅದನ್ನು ದಾಟಿದರೆ ಮಾತ್ರ ನೈಜ ಮನುಷ್ಯನಾಗುತ್ತಾನೆ ಎಂಬ ವಾದ ಬೆಳೆಯಿತು. ಈ ಹಂತದಲ್ಲಿಯೇ ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ವಿಮೋಚನೆಯೆಂಬುದು ಬಿಸಿ ಬಿಸಿ ಚರ್ಚೆಗೊಳಗಾಯಿತು.
ಇಂತಹ ಚರ್ಚೆಗಳು ಕೇವಲ ಯುರೋಪ್‍ಗೆ ಮಾತ್ರ ಸೀಮಿತವಾಗಿತ್ತು. ಹೀಗೆ ಉದಾರೀಕರಣ; ಸ್ತ್ರೀವಾದವು ಅಕಾಡೆಮಿಕ್ ರಂಗಕ್ಕೆ ಬಂತು. ಯುರೋಪಿಯನ್ನರು ತಮ್ಮ ಅನುಭವ ಪರಿಚಯ ಗಳಲ್ಲಿರುವ ಸ್ವಾತಂತ್ರ್ಯ, ಹಕ್ಕು ಎಂಬ ಮಾಪಕವನ್ನು ಉಪಯೋಗಿಸಿ ಇಂತಹ ಚರ್ಚೆಗಳನ್ನು ಮುಂದು ವರಿಸಿದರು. ವಿಶ್ವದ ಎಲ್ಲಾ ಕಡೆಗಳ ಸಮಸ್ಯೆಗಳೂ ಇದೇ ಅಳತೆಗೋಲನ್ನು ಉಪಯೋಗಿಸಿ ಆಧುನಿಕ ಮತ್ತು ಪ್ರಾಚೀನವೆಂದು ಮುದ್ರೆಯೊತ್ತಿತು. ತಮ್ಮ ಧರ್ಮ, ಯುಕ್ತಿ, ನಿಯಂತ್ರಣಗಳೇ ಅವರ ಸಿದ್ಧಾಂತವನ್ನು ರೂಪಿಸಿತು. (ಸ್ತ್ರೀ) ಮಹಿಳಾ ಚಿಂತಕರು ಯುರೋಪಿನ ಪರಿಸ್ಥಿತಿಯಂತೆ ಇತರ ವಿವಿಧ ಭಾಗಗಳ ಮಹಿಳೆಯ ಸಮಸ್ಯೆಗಳನ್ನು ಕಲಿಯಲು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟರು. ಇದರಿಂದಾಗಿಯೇ ಯುರೋಪ್ ಕೇಂದ್ರಿತವಾದ ಪಾಶ್ಚಾತ್ಯ ಚಿಂತನೆಗಳು ಎಲ್ಲದರಲ್ಲೂ ಸ್ಪಷ್ಟವಾಗಿ ಗೋಚರಿಸತೊಡಗಿತು.

ಯುರೋಪಿಯನ್ನರು ಅಸ್ಪೃಶ್ಯರೆಂದು ದೂರವಿರಿ ಸಿದ ಕಪ್ಪು ವರ್ಣೀಯರು, ಲ್ಯಾಟಿನ್ ಅಮೇರಿಕ ರನ್ನು ಹಾಗೂ ಇತರ ಇಂಡೀಜೀನಸ್ ವಂಶಗಳು, ಮುಸ್ಲಿಮರು ಹೀಗೆ ಇವರೆಲ್ಲರೂ ಸ್ವತಂತ್ರರು ಹಾಗೂ ಮನುಷ್ಯರಾಗಿ ಪರಿಗಣಿಸಲು ಅರ್ಹರಲ್ಲ ವೆಂಬ ದೃಷ್ಟಿಕೋನದಿಂದ ಚಿಂತನೆಗಳು, ಅಧ್ಯಯನ ಗಳು ಆರಂಭವಾಯಿತು. ಇಲ್ಲಿನ ಎಲ್ಲಾ ಸ್ತ್ರೀಯರೂ ಮೂಲಭೂತವಾಗಿ ಅದುಮಲ್ಪಟ್ಟವರೆಂದೂ ಹಿಂದುಳಿದವರೆಂಬ ಭಾವನೆಯಿಂದ ಫೆಮಿನಿಝಂ ತನ್ನ ಅಧ್ಯಯನವನ್ನು ಆರಂಭಿಸಿತು. ಸಾಮಾಜಿಕ ವಾಗಿ ಅತಿ ದೊಡ್ಡ ಮೊಬಿಲಿಟಿಕ್ ಸಾಧ್ಯತೆಯಿರುವ ಇಸ್ಲಾಮ್‍ನಂತಹ ಆದರ್ಶಗಳ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಆಧುನಿಕ ಉದಾರ ನೀತಿಗೆ ಸಾಧ್ಯವಾಗಲಿಲ್ಲ. ವಸಾಹತುಶಾಹಿ ಅಧಿಕಾರ ಸಂಕಲ್ಪದ ಹೊರತು ಹೊಸ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕತೆಯನ್ನು ಬೆಳೆಸಲು ಇವುಗಳ ಹಿಡಿತದ ಕಾರಣದಿಂದ ಉದಾರೀಕರಣಕ್ಕೆ ಸಾಧ್ಯವಾಗಲಿಲ್ಲ. ಮಹಿಳೆಯರ ಸಮಸ್ಯೆಗಳ ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಪರಾಜಯ ಸಂಭವಿಸಿತು.

ಯುರೋಪ್ ಎತ್ತಿ ಹಿಡಿದ ಆಧುನಿಕತೆ, ಉದಾರನೀತಿ, ಸ್ವಾತಂತ್ರ್ಯದಲ್ಲಿ ತಮಗಿರುವ ಸ್ಥಾನದ ಕುರಿತು ಕಪ್ಪು ವರ್ಣೀಯರೂ ಧರ್ಮ ವಿಶ್ವಾಸಿಗಳು, ಸ್ತ್ರೀಯರೂ ಆರಂಭದಲ್ಲೇ ಪ್ರಶ್ನಿಸಲಾರಂಭಿಸಿದ್ದರು. ಉದಾಹರಣೆಗೆ ಫೆಮಿನಿಝಂ(ಸ್ತ್ರೀವಾದ)ನ ವಿಷಯ ವನ್ನು ತೆಗೆದುಕೊಳ್ಳೋಣ.
ಈಗಿರುವ ದೇವ ವ್ಯವಸ್ಥೆಗೆ ವಿರುದ್ಧವಾಗಿ ಫೆಮಿ ನಿಸ್ಟ್ ಚಿಂತನೆಗಳಿಗಿರುವ ಸಾಧ್ಯತೆಯನ್ನು ವಸಾಹತು ಶಾಹಿ ಅಧಿಕಾರದಲ್ಲಿ ಪರಿಮಿತಗೊಳಿಸಿದ್ದರಿಂದ ಯುರೋಪ್‍ನ ಆರಂಭದ ಸ್ತ್ರೀವಾದಿಗಳು ಕಳೆದು ಕೊಂಡರು. ಪುರುಷರ ಅಧಿಕಾರವನ್ನು ಅಂಗೀಕರಿಸಿ ಕೊಂಡೇ ಸ್ತ್ರೀವಾದವನ್ನು ಬೆಳೆಸಬೇಕೆಂದು ಫೀಮೆಲ್ ನರೇಟಿವ್ಸ್ ಮಾಡಬೇಕಾದದ್ದೆಂದೂ ಸ್ತ್ರೀವಾದಿಗಳಿಂದಲೇ ವಾದಗಳು ಕೇಳಿಬಂದಿತ್ತು. ಇದರ ಮುಂದುವರಿದ ಭಾಗವಾಗಿ ಕಪ್ಪು ವರ್ಣೀಯ ಮಹಿಳೆಯರು ಯುರೋಪ್ ಕೇಂದ್ರೀಕೃತ ಫೆಮಿನಿಝಂನ ಸ್ತ್ರೀಯರಲ್ಲಿ ತಾವು ಸೇರಿಕೊಳ್ಳುವುದಿಲ್ಲವೆಂಬ ವಾದದೊಂದಿಗೆ ರಂಗಕ್ಕಿಳಿ ದರು. ತಾವು ಅನುಭವಿಸುತ್ತಿರುವ ಸಾಮಾಜಿಕ, ರಾಜಕೀಯ, ವಾಸ್ತವಿಕತೆಯನ್ನು ವೈಟ್ ಫೆಮಿನಿಝಂಗೆ ಎದುರಿಸಲು ಸಾಧ್ಯವಿಲ್ಲವೆಂಬುದು ಅವರ ವಾದವಾಗಿತ್ತು.

ಬ್ಲ್ಯಾಕ್ ಥಿಯರಿಯ ಭಾಗವಾಗಿ ಆರಂಭವಾದ ಇಂತಹ ವಿಮರ್ಶೆಗಳು ಮಹಿಳೆಯರು ಆಶಯದ ಕುರಿತು ಚಿಂತನೆಗಳು ಹೆಚ್ಚು ಸಕಾರಾತ್ಮಕವೂ ವೈವಿಧ್ಯ ಪೂರ್ಣವಾಗಿಯೂ ಆಗುವಂತೆ ಮಾಡಿತು. ಅದ ರಿಂದ ಧರ್ಮ, ವಿಶ್ವಾಸದ ವಿಶೇಷವಾಗಿ ಇಸ್ಲಾಮ್‍ನ ದೃಷ್ಟಿಕೋನದ ಮಹಿಳಾಪರ ಸಾಹಿತ್ಯಗಳನ್ನು ಓದುವ ಅಭ್ಯಾಸಗಳು ಹೆಚ್ಚಿದವು. ಆರಂಭದಲ್ಲಿ ಬಿಳಿಯ ಸ್ತ್ರೀವಾದದ ಆಕರ್ಷಣೆ ಇಂತಹ ಇಸ್ಲಾಮಿಕ್ ಚಿಂತನೆ ಗಳಲ್ಲಿ ಕಂಡು ಬಂದಿದ್ದರೂ ಡಿಕಾಲನಿಯಲ್ ಸಾಧ್ಯತೆಗಳ ಕುರಿತ ಸಂಶೋಧನೆಗಳು ಸೋಶಿಯಲ್ ಥಿಯರಿಗಳಲ್ಲಿ ವ್ಯಾಪಕವಾಗುವುದರೊಂದಿಗೆ ಬಿಳಿಯ ಸ್ತ್ರೀವಾದವನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಳ್ಳಲು, ಅದರ ಸಮಸ್ಯೆಗಳು ಅರಿತು ಇಸ್ಲಾಮಿನ ಚಿಂತನೆಯ ಆಧಾರದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯವಾಯಿತು.

ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಂಶೋಧನೆ ಗಳ ಕುರಿತು ಉದಾರೀಕರಣವು ದೊಡ್ಡ ಧ್ವನಿಯಲ್ಲಿ ಮಾತನಾಡುವುದಿದೆ. ಇಸ್ಲಾಮ್ ಸೇರಿದಂತೆ ಹಲವು ಧರ್ಮಗಳು ಅವರ ಮೇಲೆ ತಮ್ಮ ಅಧಿಕಾರ ರೂಪೀಕರಿಸುವುದರಿಂದ ಆ ಬಂಧನ ವನ್ನು ತುಂಡರಿಸಿ, ಉದಾರತೆಯ ಅನಂತ ವಿಶಾಲತೆಯೆಡೆಗೆ ನೆಗೆಯುವ ಆಹ್ವಾನಗಳು ಹಲವೊಮ್ಮೆ ಕೇಳಿ ಬರುತ್ತದೆ. ಉದಾರವಾದದ ಭಾಗ ವಾದ ಸ್ವಯಂ ನಿರ್ಧರಿಸುವ ಹಕ್ಕು, ದೇಹದ ಮೇಲಿನ ಹಕ್ಕು, ಲಿಬರಾಲಿಝಂ ರೂಪೀಕರಿಸಿದ ಬಹಿರಂಗವಲ್ಲದ ಹಲವು ಅಧಿಕಾರಗಳ ಕುರಿತು ಪ್ರಶ್ನಿಸುವುದನ್ನೇ ಸ್ತ್ರೀವಾದಿಗಳು ಒಪ್ಪುವುದಿಲ್ಲ. ಮುಸ್ಲಿಮ್ ಮಹಿಳೆಯ ಪರ್ದಾದ ಕುರಿತು ನಿರ್ಣಯಿಸುವ ಹಕ್ಕು, ತನ್ನ ದೇಹವನ್ನು ಮರೆ ಸುವ ಹಕ್ಕು ಚರ್ಚೆಗೆ ಬಂದಾಗ ಇವೆಲ್ಲ ಸ್ಪಷ್ಟ ವಾಗಿದೆ. ಇವೆಲ್ಲವನ್ನೂ ಮುಸ್ಲಿಮ್ ಪುರುಷನು ನಿರ್ಧರಿಸುವುದೆಂದು ವಾದದೊಂದಿಗೆ ಮುಸ್ಲಿಮ್ ಮಹಿಳೆಯರು ಯೋಚಿಸಲಿಕ್ಕೂ ಕೂಡ ಸಾಮಥ್ರ್ಯ ವಿಲ್ಲದವರೆಂದು ಸ್ತ್ರೀವಾದಿಗಳು ತಿಳಿಯುತ್ತಾರೆ.

ಮುಸ್ಲಿಮ್ ಮಹಿಳೆಯರು ಹಲವು ರಂಗಗಳಲ್ಲಿ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಿದರೂ ಹಲವರು ಹೆಚ್ಚಾಗಿ ಅಸಹಿಷ್ಣುತೆಯೊಂದಿಗೆಯೇ ಕಾಣುತ್ತಾರೆ- `ತರ್ತೀಲ್’ ಎಂಬ ಹೆಸರಿನಲ್ಲಿ ಕುರ್‍ಆನ್ ಪಾರಾಯಣಕ್ಕೆ ಹೊಸ ಆವಿಷ್ಕಾರವನ್ನು ನೀಡಿದ ಇಸ್ಲಾಮೀ ವಿದ್ಯಾರ್ಥಿನಿಯರ ಸಂಘಟನೆ ತಮ್ಮ ಧಾರ್ಮಿಕ ಸದಾಚಾರ ಚೌಕಟ್ಟಿನಲ್ಲಿದ್ದುಕೊಂಡೇ ತಾವು ಕಾಣುವ ವಿಶ್ವವನ್ನು ಅದರ ಸೌಂದರ್ಯ ವನ್ನು ಚಿತ್ರದೊಂದಿಗೆ ಪ್ರದರ್ಶಿಸಿದ ಕ್ಯಾನ್‍ವಾಸ್ ಕಾರ್ಫ್ ಎಂಬ ಕಾರ್ಯಕ್ರಮವನ್ನು ಆಯೋಜಿ ಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಾಮಾಜಿಕ-ರಾಜಕೀಯ ಜವಾಬ್ದಾರಿಯನ್ನು ನಿಭಾಯಿಸಲು ಸಾರ್ವಜನಿಕ ರಂಗದಲ್ಲೂ ಕಾರ್ಯ ನಿರ್ವಹಿಸಿದರು.

ಆದರೆ ಇವೆಲ್ಲವುಗಳನ್ನು ವಿಮರ್ಶಿಸುವುದನ್ನೇ ಬಂಡವಾಳ ಮಾಡಿಕೊಂಡಿರುವ ಸ್ತ್ರೀವಾದಿಗಳು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಮಗೆ ಸೇಫ್ ಝೋನ್ ಎಲ್ಲಿದೆ? ಎಂದು ಸ್ತ್ರೀವಾದಿಗಳು ಹಾಗೂ ಸ್ತ್ರೀ ಸ್ವಾತಂತ್ರ್ಯವನ್ನು ಆಸ್ವಾದಿಸುತ್ತಿದ್ದೇ ವೆಂದು ಹೇಳುವವರು ಈಗ ಹುಡುಕಾಡುತ್ತಿದ್ದಾರೆ. ಕುಟುಂಬಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ, ಉದ್ಯೋಗ ಸ್ಥಳಗಳಲ್ಲೂ ಮಹಿಳೆಯರ ಮೇಲಾಗುತ್ತಿ ರುವ ಪುರುಷರ ದಬ್ಬಾಳಿಕೆ ಹಾಗೂ ಲೈಂಗಿಕಾ ಕ್ರಮಣಗಳ ವಿರುದ್ಧ ಹೋರಾಟವೂ ನಡೆಯುತ್ತದೆ. ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳ ಕುರಿತು ಮಾತನಾಡುವವರೂ, ಅಲ್ಲದವರೂ, ವಿಷಯದ ಸ್ಪಷ್ಟತೆಗೆ ಧಾರ್ಮಿಕ ಸದಾಚಾರಗಳ ಕುರಿತು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಾಗಿ ಬಂದಿದೆ.
ಯಾವಾಗಲೂ ಮುಸ್ಲಿಮ್ ಮಹಿಳೆಯರು ಹಾಗೂ ಇಸ್ಲಾಮ್ ಇಂತಹ ಸಂದರ್ಭಗಳಲ್ಲೇ ಚರ್ಚೆಗೊಳಗಾಗಿ ತೀರ್ಪುಗಳು ಕಲ್ಪಿಸಲ್ಪಡುತ್ತದೆ. ಸದಾಚಾರ, ಧಾರ್ಮಿಕತೆ, ಪುರುಷ ಸ್ವಾತಂತ್ರ್ಯ, ಹೆಣ್ಣಿನ ಮೈಮಾಟ, ಲೈಂಗಿಕತೆ, ಶೋಷಿತಳು, ದೌರ್ಜನ್ಯಕ್ಕೊಳಗಾದವರು ಎಂದು ಹೀಗೆ ವಿಷ ಯವು ವಿಶಾಲತೆಯನ್ನು ಪಡೆಯುತ್ತಲೇ ಇರುತ್ತದೆ. ಶಿರವಸ್ತ್ರ, ಪರ್ದಾ, ವೈಯಕ್ತಿಕ ಕಾನೂನು, ಪ್ರವಾದಿಯ ವಿವಾಹ, ಸುನ್ನತ್ ಕರ್ಮ ಮುಂತಾದ ಎಲ್ಲಾ ವಿಷಯಗಳು ಪದೇ ಪದೇ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಸ್ವಚ್ಛಂದ ಲೈಂಗಿಕತೆ ಅಪರಾಧವಲ್ಲವೆಂದೂ ಮಹಿಳೆಯ ಶರೀರವನ್ನು ಮುಚ್ಚಿ, ರಹಸ್ಯವಾಗಿ ಇರಿಸುವುದರಿಂದ ಪುರುಷರಿಗೆ ಕುತೂಹಲ ಮೂಡುತ್ತದೆಂಬ ವಾದಗಳೂ ಕೇಳಿಬಂತು. ಮಹಿಳೆ ಯರ ವಸ್ತ್ರಾಧಾರಣೆಯ ಕುರಿತು ಚರ್ಚೆಗಳಲ್ಲಿ, ಶಿರವಸ್ತ್ರ ಹಾಗೂ ಪರ್ದಾಧರಿಸಿದ ಸ್ತ್ರೀಯ ಶರೀ ರವು ಧರ್ಮದ ದೇಹವಾಗಿಯೂ ಮೃತದೇಹ ವಾಗಿಯೂ ಚಿತ್ರೀಕರಿಸಲ್ಪಟ್ಟಿತು. ಮರೆಸುವುದು ಪುರುಷರು ಮಾಡುವ ಶೋಷಣೆಯೆಂದೂ ತೆರೆದಿರಿ ಸುವುದು ಸ್ವಾತಂತ್ರ್ಯವೆಂಬ ವಾದವು ಫೆಮಿನಿಸ್ಟ್‍ಗಳ ನಡುವೆ ಬಲ ಪಡೆಯಿತು. ಆಯ್ಕೆಯ ಸ್ವಾತಂತ್ರ್ಯ ಮಹಿಳೆಯರಿಗೆಂದೂ ಶಿರವಸ್ತ್ರ ಆಯ್ದುಕೊಳ್ಲುವುದು ಮುಸ್ಲಿಮ್ ಮಹಿಳೆಗೆ ಸ್ವಾತಂತ್ರವೆಂಬ ವಾದಗಳು ಪೊಳ್ಳೆಂದೂ, ಅದು ಪುರುಷರು ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯವೆಂದೂ ಹೇಳಲಾ ಯಿತು. ಮಹಿಳೆಯ ವಸ್ತ್ರಧಾರಣೆಯ ಚರ್ಚೆಗಳಲ್ಲಿ ಧಾರ್ಮಿಕ ಪುರುಷಾಧಿಪತ್ಯವೆಂದು ಒಂದು ಕಡೆ ಹೇಳುವಾಗ, ಇನ್ನೊಂದೆಡೆ ಮಹಿಳಾ ವಿರೋಧಿ ಗಳೆಂಬ ಪಟ್ಟವನ್ನು ನೀಡಿತು. ಮಹಿಳೆಯರು ಲೆಗ್ಗಿನ್ಸ್, ಜೀನ್ಸ್ ಧರಿಸಬಾರದೆಂಬ ಗಾಯಕ ಯೇಸುದಾಸ್ ಹಾಗೂ ನ್ಯಾಯಾಧೀಶ ಶ್ರೀದೇವಿ ಯವರ ಅಭಿಪ್ರಾಯವೂ ಸ್ತ್ರೀ ವಿರೋಧಿಯೆಂಬ ಮುದ್ರೆಯೊತ್ತಲ್ಪಟ್ಟಿತು. ಪುರುಷರು ಧರಿಸುವ ವಸ್ತ್ರಗಳೂ, ಅವನ ಹಾವಭಾವವೂ, ಇಚ್ಛೆಗಳೂ ಮಹತ್ವ ಪಡೆದುಕೊಂಡು ಅವುಗಳನ್ನೇ ಅದೇ ರೀತಿಯಲ್ಲಿ ಅನುಕರಿಸುವ ಮಹಿಳೆಯರನ್ನು ಸ್ವತಂತ್ರರೆಂದು ಹೇಳುವುದೂ ವಿರೋಧಾಭಾಸ ವೆಂಬಂತೆ ಗೋಚರಿಸುತ್ತಿದೆ.

ಗಂಡು-ಹೆಣ್ಣಿನ ಶರೀರದ ನಡುವೆ ವ್ಯತ್ಯಾಸ ಗಳಿವೆಯೆಂಬ ಸತ್ಯವನ್ನು ಒಪ್ಪಿಕೊಳ್ಳುವುದು ಕೂಡಾ ಹೆಣ್ಣಿನ ಶರೀರದ ಮೇಲೆ ಪುರುಷನ ಅಧಿಕಾರ ದರ್ಪದ ಕಾರಣವೆಂಬ ವಾದವು ಇಂತಹವರು ಎತ್ತುತ್ತಾರೆ. ತಾವು ಅನುಭವಿಸುವ ಲಿಂಗಭೇದಗಳಲ್ಲಿ ಹೆಚ್ಚಿನ ಪಾತ್ರವು ಸ್ತ್ರೀ ಪುರುಷರ ದೇಹದಲ್ಲಿರುವ ಜೈವಿಕ ವ್ಯತ್ಯಾಸವನ್ನು ತೆರೆದು ತೋರಿಸುವುದು ಎಂಬುದನ್ನು ಉದ್ದೇಶಪೂರ್ವಕವಾಗಿ ಗಮನಿಸದೆ ಹೋಗುತ್ತಾರೆ. “ಶಿರವಸ್ತ್ರಗಳನ್ನು ಎದೆಯ ಮೇಲೆ ಇಳಿಸಿಕೊಳ್ಳಿರಿ” ಎಂಬ ಪವಿತ್ರ ಕುರ್ ಆನ್‍ನ ವಾಕ್ಯಗಳು ಸ್ತ್ರೀಯ ದೇಹ ಸೌಂದರ್ಯವನ್ನು ಯಾರೂ ಆಸ್ಪದಿಸಲು ಇರುವಂತಹದ್ದಲ್ಲ ಎಂಬ ಸ್ತ್ರೀ ಪರವಾದ ನಿಲುವಿನ ಘೋಷಣೆಯಾಗಿದೆ. ತನ್ನ ಶರೀರವು ತನ್ನದೆಂದೂ, ತನ್ನಿಚ್ಛೆಯಂತೆ ಅದನ್ನು ಪ್ರದರ್ಶಿಸುತ್ತೇನೆಂಬ ಸ್ವಚ್ಛಂದ ಲೈಂಗಿ ಕತೆಯ ವಾದವನ್ನು ನೈತಿಕ ಹಾಗೂ ಧಾರ್ಮಿಕ ವಸ್ತ್ರದ ಮೂಲಕ ಕುರ್‍ಆನ್ ವಿರೋಧಿಸುತ್ತದೆ.

ಇಸ್ಲಾಮ್ ಗಂಡು ಹೆಣ್ಣು ಪರಸ್ಪರ ವ್ಯವಹರಿ ಸುವ ಕುರಿತು ಸ್ಪಷ್ಟ ಮಾರ್ಗ ನಿರ್ದೇಶನಗಳು ನೀಡುತ್ತದೆ. ಪೌರೋಹಿತ್ಯದ ಕಪಿಮುಷ್ಠಿಯಲ್ಲಿ ಸಿಲುಕಿರುವ ಮಹಿಳೆಯರನ್ನು ಎತ್ತಿ ತೋರಿಸಿ, ಮುಸ್ಲಿಮ್ ಮಹಿಳೆ ಗುಲಾಮಳೆಂದು ಸ್ತ್ರೀವಾದಿಗಳು ವಾದಿಸುತ್ತಾರೆ. ಫಾರೂಕ್ ಕಾಲೇಜಿನ ಗಂಡು-ಹೆಣ್ಣು ಆ ವಿದ್ಯಾರ್ಥಿಗಳ ಆಸನದ ವಿವಾದದಲ್ಲಿ ತಾಲಿಬಾನಿಝಂ, ಮದ್ರಸ, ಮೂಲಭೂತವಾದಿಗಳು ಎಂಬ ಪದಗಳ ಪ್ರಯೋಗವಾದದ್ದನ್ನು ಗಮನಿಸ ಬೇಕು. “ನೀವು ಪುರುಷರೊಂದಿಗೆ ವಯ್ಯಾರದಿಂದ ಮಾತನಾಡಬೇಡಿ. ಅದು ರೋಗವುಳ್ಳ ಹೃದಯಗಳ ರೋಗವನ್ನು ಹೆಚ್ಚಿಸಲು ಕಾರಣವಾಗುತ್ತದೆ. ವಿಷಯ ವನ್ನು ದೃಢ ಸ್ವರದಲ್ಲಿ ತಿಳಿಸಿಕೊಡಿ” ಮುಂತಾದ ಕುರ್‍ಆನ್ ಸೂಕ್ತಗಳು ಒಂದು ಹೆಣ್ಣಿಗೆ ನೀಡುವ ಗೌರವ ಹಾಗೂ ಅಭಿಮಾನವು ಅನಿರ್ವಚನೀಯ ವಾಗಿದೆ. ವಿಷಯಗಳನ್ನು ಅಧ್ಯಯನ ಮಾಡಿ ಸ್ಪಷ್ಟವಾಗಿ ತಿಳಿಸಬೇಕೆಂದೂ ವರ್ಚಸನ್ನು ಉತ್ತಮ ಪಡಿಸಬೇಕೆಂಬ ಕರೆಯೊಂದಿಗೆ ಕೆಲವು ಪುರುಷರ ಹೃದಯಗಳಲ್ಲಿ ರೋಗವಿರುತ್ತದೆಯೆಂದೂ, ಅದು ಹೆಚ್ಚಾಗಬಹುದೆಂದು ಪುರುಷರ ಸಮಸ್ಯೆಗಳನ್ನು ಕುರ್‍ಆನ್ ಇಲ್ಲಿ ಸೂಚಿಸಿದೆ. ಆ ರೋಗವು ಹೆಚ್ಚಳ ಗೊಂಡು ಅವಘಡಗಳಿಗೆ ಕಾರಣವಾಗಬಾರ ದೆಂಬುದು ಸ್ತ್ರೀ ಜವಾಬ್ದಾರಿಯೆಂದು ಸೂಚಿಸಿದೆ.

ಸ್ತ್ರೀ ವಿಮೋಚನೆ, ಸ್ತ್ರೀ ಸ್ವಾತಂತ್ರ್ಯವೆಂದು ನಿರಂತರ ಹೇಳಿಕೊಂಡು ಬೆಂಬಲ ಸೂಚಿಸಿದವ ರಿಂದಲೇ ಮಹಿಳೆಯರು ಅಪಮಾನಕ್ಕೀಡಾದ ಘಟನೆ ಸಣ್ಣದಲ್ಲ. ಲಿಬರಲ್ ವಾದದ ಪ್ರತ್ಯಾಘಾತ ಗಳೆಂದು ಅದನ್ನು ಹೇಳಬೇಕಾಗುತ್ತದೆ. ತಾವು ಹೇಳಿ ಅದನ್ನು ಇತರರ ಮೇಲೆ ಪ್ರಯೋಗಿಸಿದ ಅದೇ ಸ್ತ್ರೀವಾದಿ ಚಿಂತನೆಗಳೇ ಪುರುಷನ ಆಸೆಯ ಪೂರ್ತೀಕರಣಕ್ಕಾಗಿ ಅವರೂ ಉಪ ಯೋಗಿಸಿದ್ದಾರೆ ಎಂಬುದು ಬಹಿರಂಗವಾದ ಸತ್ಯ. ಹಗ್ ಮಾಡಲು ಬರುವವನೊಂದಿಗೆ, ಮದ್ಯಪಾನ ಮಾಡಲು ಬರುತ್ತೀಯಾ? ಎಂದು ಕೇಳುವವನೊಡನೆ `ನೋ’ ಎಂದು ಹೇಳುವುದು ನಾಚಿಗೇಡು ಮತ್ತು ಅನಾಗರಿಕತೆ ಎಂದು ಚಿತ್ರೀ ಕರಿಸಲ್ಪಡುವ ಪರಿಸ್ಥಿತಿ ಸ್ತ್ರೀವಾದಿಗಳಲ್ಲೇ ಇತ್ತು. ಪ್ರೋಗ್ರೆಸಿವ್ ವಿಚಾರಗಳನ್ನು ಹೇಳಿಕೊಂಡು ನೀವು ಬ್ಲಾಕ್‍ಮೇಲ್ ಆಗುತ್ತೀರಿ’ ಎಂದು ಇದರ ಕುರಿತು ರೇಖರಾಜ್ ಹೇಳುತ್ತಾರೆ. ಸ್ತ್ರೀವಾದಗಳು ಪುರುಷರ ಕಾಮನೆಗಳಿಗೆ ಮಣ್ಣು ಒದಗಿಸುವ ಕೆಲಸ ಮಾಡುತ್ತಿದೆಯೆಂಬುದೇ ಇದರಿಂದ ತಿಳಿದು ಬರುವ ಸತ್ಯ. ತಾನೋರ್ವ ಪುರುಷನೆಂದೂ, ಇದೊಂದು ಸಾಮಾನ್ಯ ಸಂಗತಿಯೆಂದು ಸರಳೀ ಕರಿಸಿ ತನ್ನ ಕಾಮನೆಗಳ ಪೂರ್ತೀಕರಣಕ್ಕಾಗಿ ಪುರುಷನು ಬೀಸಿದ ಬಲೆಯೆಂದು ತಿಳಿಯಬೇಕಾಗು ತ್ತದೆ. ಇಲ್ಲಿ ಇಸ್ಲಾಮಿನ ನೈತಿಕ ಮೌಲ್ಯಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. `ನಿಮ್ಮ ದೃಷ್ಟಿ ಗಳನ್ನು ಕೆಳಗಿರಿಸಿ’ ಎಂದು ಮೊದಲು ಗಂಡಿ ನೊಂದಿಗೂ ಬಳಿಕ ಹೆಣ್ಣಿನೊಡನೆಯೂ ಹೇಳಿದ ಕುರ್‍ಆನ್, ಲೈಂಗಿಕ ಅರಾಜಕತೆಯ ಪ್ರಥಮ ದ್ವಾರವನ್ನೇ ಮುಚ್ಚಿ ಬಿಟ್ಟಿದೆ. ನೋಟದಿಂದ ಆರಂಭವಾಗಿ ಲೈಂಗಿಕಾಸಕ್ತಿಯ ಮಾತುಕತೆಗಳು, ಸ್ಪರ್ಶಗಳಿಗೂ ತಲುಪುವ ಗಂಡು-ಹೆಣ್ಣಿನ ಸೌಹಾ ರ್ದತೆಯನ್ನು ಇಸ್ಲಾಮ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಸ್ವಂತ ಇಚ್ಛೆಯೊಂದಿಗಿನ ಹೋರಾ ಟವೇ ಅತ್ಯಂತ ದೊಡ್ಡ ಧರ್ಮಯುದ್ಧ (ಜಿಹಾದ್) ಎಂದು ಇಸ್ಲಾಮ್ ಕಲಿಸಿದೆ.

ನೈತಿಕ, ಧಾರ್ಮಿಕ, ಲೈಂಗಿಕಾಸಕ್ತಿ, ಮನುಷ್ಯನ ಪ್ರಕೃತಿ ಇವೆಲ್ಲವನ್ನೂ ನ್ಯಾಯಯುತವಾಗಿ ಹಾಗೂ ಕುಟುಂಬ ಸಾಮಾಜಿಕ ಭದ್ರತೆಯನ್ನು ಮುಂದಿರಿಸಿ ಇಸ್ಲಾಮ್ ನಿಶ್ಚಯಿಸಿದೆ. ವೈಯಕ್ತಿಕವಾಗಿ ನೈತಿಕ ಮೌಲ್ಯಗಳನ್ನೂ, ಗಂಡು-ಹೆಣ್ಣಿನ ನಡುವಿನ ಅಂತರ ವನ್ನು ಸ್ಪಷ್ಟವಾಗಿ ತಿಳಿಯಪಡಿಸಿದೆ. ಇಸ್ಲಾಮ್ ದಾಂಪತ್ಯದಲ್ಲಿ ಪ್ರೀತಿಗೂ, ಲೈಂಗಿಕಾಸಕ್ತಿಗೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತದೆ. ಪ್ರೀತಿ, ಕಾರುಣ್ಯ ವನ್ನು ನೀನು ನಮ್ಮೊಳಗೆ ತುಂಬಿಸಬೇಕು ಎಂಬ ಪ್ರಾರ್ಥನೆಯನ್ನು ಇಸ್ಲಾಂ ಕಲಿಸಿಕೊಟ್ಟಿದೆ. ಮಿಲನದ ಸಂದರ್ಭದಲ್ಲಿ ಸಂಗಾತಿಯ ಸಂತೃಪ್ತಿಯನ್ನು ಪರಿಗಣಿಸಬೇಕು. ನೀವು ಪಕ್ಷಿಯಂತಾಗಬಾರ ದೆಂದೂ ಪುರುಷರೊಂದಿಗೆ ಪ್ರವಾದಿಯವರು(ಸ) ಹೇಳಿದ್ದಾರೆ. ತನ್ನ ಸಂಗಾತಿ ಹಾಸಿಗೆಗೆ ಆಹ್ವಾನಿಸಿ ದರೆ ಅದನ್ನು ನಿರಾಕರಿಸಿದರೆ ಆ ರಾತ್ರಿಯಿಡೀ ಅಲ್ಲಾಹನ ದೇವಚರರು ಅವಳ ಮೇಲೆ ಶಾಪ ಪ್ರಾರ್ಥನೆ ನಡೆಸುತ್ತಾರೆಂದು ಮಹಿಳೆಯರಿಗೆ ಕಲಿಸಿಕೊಡಲಾಗಿದೆ. ಆರು ವರ್ಷವಾದರೆ ಮಕ್ಕ ಳನ್ನು ಹೆತ್ತವರಿಂದ ದೂರ ಮಲಗಿಸಬೇಕೆಂದೂ, ಮಧ್ಯಾಹ್ನ ಹಾಗೂ ರಾತ್ರಿಯ ವಿಶ್ರಾಂತಿ ವೇಳೆಯಲ್ಲಿ ಹೆತ್ತವರ ಕೋಣೆಗೆ ಅನುಮತಿಯಿಲ್ಲದೆ ಪ್ರವೇಶಿಸ ಬಾರದೆಂಬ ಪಾಠಗಳು ಮನುಷ್ಯನ ವಿಕಾರ ಭಾವನೆಗಳನ್ನು ಯುಕ್ತಿಯುತವಾಗಿ ನಿರ್ವ ಹಿಸುವ ಒಂದು ತತ್ವಶಾಸ್ತ್ರದಿಂದಾಗಿದೆಯೆಂಬುದು ಇವೆಲ್ಲವೂ ಅನಾಗರಿಕವೂ, ಕಾಲಹರಣ ಗೊಂಡಿದೆಯೆಂದು ವ್ಯಾಖ್ಯಾನಿಸುವವರಿಗೆ ಚುಂಬನ ಪ್ರತಿಭಟನೆಯನ್ನು ಪ್ರಗತಿಪರವೆಂದು ಹೇಳಬೇಕಾಗಿ ಬರುತ್ತದೆ. ಸ್ತ್ರೀ ವಿರೋಧಿ ರಾಜಕೀಯದ ಹಾಗೂ ಅಧಿಕಾರವನ್ನು ಕೈಯೊಳಗಿರಿಸಿದ ತೀವ್ರ ಬಲಪಂಥೀಯ ರಾಜಕೀಯವನ್ನು ಎದುರಿಸಲು ನಡೆಸಿದ ಪ್ರತಿಭಟನೆಯು ನಂತರ ಎಷ್ಟು ವೇಗವಾಗಿ ಸ್ತ್ರೀ ವಿರೋಧಿಯಾದ ಫ್ಯಾಸಿಸ್ಟ್‍ಗಳ ವಿರುದ್ಧದ ಹೋರಾಟವನ್ನು ಯಾವ ರೀತಿ ನೀರ್ವಿಯುಗೊಳಿಸಿತು ಎಂಬುದನ್ನು ನಾವು ಕಂಡೆವು. ಕೆಲವು ಮಹಿಳಾ ಹೋರಾಟಗಾರ್ತಿ ಸಹ ಕಾರ್ಯಕರ್ತರಿಂದಾದ ಲೈಂಗಿಕ ಕಿರುಕುಳದ ಕುರಿತು ಹೇಳಿದ ಬಹಿರಂಗ ಹೇಳಿಕೆಗಳು ಸ್ತ್ರೀ-ಪುರುಷ ಸಂಬಂಧಗಳು ಸದಾಚಾರ ನೈತಿಕ ಮೇರೆಗಳು ಹೀಗೆ ಹಲವು ವಿಷಯಗಳ ಕುರಿತು ಚರ್ಚಿಸಿ ನಾಂದಿ ಹಾಡಿದೆ.