ಕೇಂದ್ರ ವಿತ್ತ ಸಚಿವೆ ನಿರ್ಮಲಾರಿಗೆ ಇಕನಾಮಿಕ್ಸ್ ಗೊತ್ತಿಲ್ಲ- ಸುಬ್ರಮಣಿಯನ್ ಸ್ವಾಮಿ

0
306

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 2: ದೇಶದ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಕುಸಿದಿರುವುದಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ರನ್ನು ಟೀಕಿಸಿದ್ದಾರೆ. ಅವರಿಗೆ ಅರ್ಥಶಾಸ್ತ್ರದ ಜ್ಞಾನ ಇಲ್ಲ. ಜೊತೆಗೆ ಪ್ರಧಾನಿ ಮೋದಿಯನ್ನು ಯೆಸ್‍ಮೇನ್ ಎಂದು ಕರೆದಿದ್ದಾರೆ. ಅವರು ಹಂಪಿಗ್ ಸ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ನಿಜವಾಗಿ ಇಂದು ಸರಕಾರ ಹೇಳುವ 4.8 ಅಭಿವೃದ್ಧಿ ದರ ಇಲ್ಲ. ನಾನು ಶೇ. 1.5 ಅಭಿವೃದ್ಧಿ ದರ ಇದೆ ಎನ್ನುವೆ ಎಂದು ಸ್ವಾಮಿ ಹೇಳಿದರು.

ಸೀತಾರಾಮನ್ ಅವರು ಅರ್ಥವ್ಯವಸ್ಥೆ ಹಳಿಗೆ ಮರಳುತ್ತಿದೆ ಎಂದು ಹೇಳಿದ ನಂತರ ಸುಬ್ರಮಣಿಯನ್ ಸ್ವಾಮಿ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಹಾವರ್ಡ್ ಯುನಿವರ್ಸಿಟಿಯಿಂದ ಅರ್ಥಶಾಸ್ತ್ರ ಕಲಿತವರು. ನಿರ್ಮಲಾರಿಗೆ ಇಕನಾಮಿಕ್ಸ್ ಗೊತ್ತಿಲ್ಲ. ನೀವು ಅರ್ಥವ್ಯವಸ್ಥೆಯನ್ನು ಸರಿಯಾಗಿ ನೋಡಿದರೆ ಅಭಿವೃದ್ಧಿ ಕುಂಟಿತವಾಗಿರುವುದು ಕಾಣಿಸುತ್ತದೆ ಎಂದು ಸ್ವಾಮಿ ಹೇಳಿದರು.