ಭೀಮ ಕೋರೆಗಾಂವ್ ಪ್ರಕರಣ: ಸುಧಾ ಭಾರದ್ವಾಜ್‍‌ರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

0
122

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.25: ಭೀಮ ಕೋರೆಗಾಂವ್ ಪ್ರಕರಣದಲ್ಲಿ ಎರಡು ವರ್ಷದಿಂದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಪ್ರಮುಖ ವಕೀಲೆ, ಹೋರಾಟಗಾರ್ತಿ ಸುಧಾ ಭಾರದ್ವಾಜ್‍ರಿಗೆ ಚಿಕಿತ್ಸೆಗಾಗಿ ಜಾಮೀನು ಕೊಡಲು ಆಗುವುದಿಲ್ಲ ಎಂದು ಜಸ್ಟಿಸ್ ಯುಯು ಲಲಿತ್ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಹೇಳಿದೆ.

ವೈದ್ಯಕೀಯ ವರದಿಯ ಪ್ರಕಾರ ಸುಧಾರಿಗೆ ಆರೋಗ್ಯ ಸಮಸ್ಯೆಯಿಲ್ಲ ಎಂದು ತಿಳಿದು ಬಂದಿದೆ ಎಂದು ಸುಪ್ರೀಂ ಕೋರ್ಟು ತಿಳಿಸಿದೆ. ಇದನ್ನು ಹೊರತು ಪಡಿಸಿ ಜಾಮೀನು ಪಡೆಯಲು ಅರ್ಹವಾದ ಪರಿಸ್ಥಿತಿಯಲ್ಲಿ ಜಾಮೀನಿಗೆ ಕೋರ್ಟನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟು ಸೂಚಿಸಿತು. ನಂತರ ಸುಧಾ ಭಾರದ್ವಾಜ್ ವಕೀಲರು ಜಾಮೀನು ಅರ್ಜಿಯನ್ನು ಹಿಂಪಡೆದರು.

ಎರಡು ವರ್ಷಗಳಿಂದ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಸುಧಾಭಾರದ್ವಾಜ್ ಜೈಲಿನಲ್ಲಿದ್ದಾರೆ. ಸುಧಾರಿಗೆ 58ವರ್ಷವಾಗಿದ್ದು ಅವರಿಗೆ ಚಿಕಿತ್ಸೆಗಾಗಿ ಜಾಮೀನು ನೀಡಬೇಕೆಂದು ಸುಧಾರ ವಕೀಲೆ ವೃಂದಾಗ್ರೋವರ್ ವಾದಿಸಿದ್ದರು.