15 ನಿಮಿಷ ಬಿಸಿಲಿಗೆ ನಿಲ್ಲಿ; ಕೊರೊನಾ ಬರುವುದಿಲ್ಲ- ಕೇಂದ್ರ ಆರೋಗ್ಯ ಸಹ ಸಚಿವ

0
1143

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 19: ದಿನಾಲು ಹದಿನೈದು ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕು, ಕೊರೊನಾ ವೈರಸ್‍ ಅನ್ನು ಪ್ರತಿರೋಧಿಸಬಹುದು ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಹ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಸೂರ್ಯ ಪ್ರಕಾಶ ಪ್ರತಿರೋಧ ಶಕ್ತಿ ಕೊಡುತ್ತದೆ. ಕೊರೊನಾ ವೈರಸ್‍ನಂತಹವುಗಳನ್ನು ಅದು ಕೊಲ್ಲುತ್ತದೆ ಎಂದು ಸಚಿವರು ಹೇಳಿದರು. ಅವರು ಮಾಧ್ಯಮದೊಂದಿಗೆ ಪಾರ್ಲಿಮೆಂಟಿನ ಹೊರಗೆ ಮಾತಾಡುತ್ತಿದ್ದರು.

ಜನರು ದಿನಾಲೂ 10-15 ನಿಮಿಷ ಬಿಸಿಲಿಗೆ ನಿಲ್ಲಬೇಕು. ಸೂರ್ಯಪ್ರಕಾಶದಿಂದ ವಿಟಮಿನ್ ಡಿ ಮಾತ್ರವಲ್ಲ ಸಿಗುವುದು. ಬಿಸಿಲಿನಿಂದ ಪ್ರತಿರೋಧ ಶಕ್ತಿ ಹೆಚ್ಚುತ್ತದೆ. ಕೊರೊನಾ ವೈರಸ್‍ನಂತಹವು ನಶಿಸಿ ಹೋಗುತ್ತದೆ ಎಂದು ಸಚಿವರು ತಿಳಿಸಿದರು.

ಭಾರತದಲ್ಲಿ 25 ವಿದೇಶಿ ಪ್ರಜೆಗಳ ಸಹಿತ 170 ಮಂದಿಗೆ ಈಗ ಕೊರೊನಾ ಇದೆ. ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿಯಲ್ಲಿ ಒಟ್ಟು ಮೂವರು ಕೊರೊನ ಪೀಡಿತರು ಮೃತಪಟ್ಟಿದ್ದಾರೆ.