ನ್ಯಾಯಾಧೀಶರ ಬಂಡಾಯ : ಪ್ರಜಾತಂತ್ರ ಅಪಾಯದಲ್ಲಿದೆ ?

0
363

ಸು. ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಾರಿರುವ ಬಂಡಾಯವು ಅಂತಿಮವಾಗಿ ಪ್ರಜಾತಂತ್ರವನ್ನು ವಿರೋಧಿಸುವ ಮತ್ತು ಅಂಬೇಡ್ಕರ್ ಸಂವಿಧಾನವನ್ನು ಬದಲಿಸಬೇಕೆಂದು ಬಯಸುವವರ ಕೈ ಬಲಪಡಿಸಬಹುದೇ? ಅಥವಾ ಅವರೇ ಹೆಣೆದ ಸಂಚಿನ ಫಲಿತಾಂಶವೇ ಈ ಬಂಡಾಯ? ಈ ಬಂಡಾಯಕ್ಕೆ ಪೂರಕವಾದ ಸನ್ನಿವೇಶವನ್ನು ಆ ಮಂದಿಯೇ ಹೆಣೆದರೆ? ಸರ್ವಾಧಿಕಾರಿ ವ್ಯವಸ್ಥೆಯ ಕಡೆಗೆ ನಾಗರಿಕರನ್ನು ಆಕರ್ಷಿಸಬೇಕೆಂದರೆ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಅವರಲ್ಲಿ ಅಪನಂಬಿಕೆ ಹುಟ್ಟಬೇಕಾದುದು ಅನಿವಾರ್ಯ. ಸದ್ಯ ದೇಶದ ಬಹುತೇಕ ಸಂಸ್ಥೆಗಳ ಮೇಲೆ ಅಪನಂಬಿಕೆಯ ವಾತಾವರಣವನ್ನು ಹುಟ್ಟುಹಾಕಲಾಗಿದೆ. ಚುನಾವಣಾ ಆಯೋಗದಿಂದ ಹಿಡಿದು ರಿಸರ್ವ್ ಬಾಂಕ್ ಗವರ್ನರ್ ವರೆಗೆ, ಚಲಚಿತ್ರ ಮಂಡಳಿಯಿಂದ ಹಿಡಿದು ವಿವಿ ಆಡಳಿತ ಮಂದಳಿವರೆಗೆ ಎಲ್ಲದರ ಮೇಲೂ ಅನುಮಾನವೊಂದು ಹುಟ್ಟಿಕೊಂಡಿದೆ. ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಗೆ ಈ ವರೆಗೆ ಅನುಸರಿಸುತ್ತಿದ್ದ ಕೊಲಿಜಿಯಂ ಬಗ್ಗೆಯೂ ಕೇಂದ್ರ ತಕರಾರು ಎತ್ತಿದೆ. ಇತಿಹಾಸ, ಪುರಾಣ, ಆಹಾರ, ದೇಶಪ್ರೇಮ, .. ಎಲ್ಲದರ ಮೇಲೂ ಪ್ರಶ್ನೆಗಳನ್ನೆತ್ತಲಾಗಿದೆ. ಜಾತ್ಯತೀತತೆಯೇ ಮಹಾ ಗೊಂದಲದಲ್ಲಿದೆ. ಇದೀಗ ಸು. ಕೋರ್ಟೇ ಕಟಕಟೆಯಲ್ಲಿ ನಿಂತುಕೊಂಡಿದೆ.
ಇದು ಯಾವುದರ ಸೂಚನೆ? ಅಂಬೇಡ್ಕರ್ ಜಾಗದಲ್ಲಿ ಮತ್ತೆ ಮನು ಕುಳಿತುಕೊಳ್ಳುವನೇ?

ಏ ಕೆ ಕುಕ್ಕಿಲ