ವಾರಣಾಸಿ ಲೋಕಸಭಾ| ಪ್ರಧಾನಿ ಮೋದಿ ವಿರುದ್ಧ ಅರ್ಜಿ: ತೀರ್ಪು ಮುಂದೂಡಿದ ಸುಪ್ರೀಂ ಕೋರ್ಟ್

0
418

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.19: ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಮಾಜಿ ಬಿಎಸ್‍ಎಫ್ ಯೋಧ ತೇಜ್‍ಬಹಾದ್ದೂರ್ ಸಲ್ಲಿಸಿ ಅರ್ಜಿಯಲ್ಲಿ ತೀರ್ಪನ್ನು ಸುಪ್ರೀಂ ಕೋರ್ಟು ಮುಂದೂಡಿದೆ.

ಪ್ರಧಾನಿಯ ಕಚೇರಿ ವಿಶೇಷವಾಗಿದ್ದು ಇಷ್ಟು ಪ್ರಧಾನ ಕಚೇರಿಯ ವಿರುದ್ಧ ದೂರು ಬಾಕಿ ಉಳಿಯಬಾರದೆಂದು ಹೇಳಿದ ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆ ಅಧ್ಯಕ್ಷತೆಯ ಪೀಠ ತೀರ್ಪು ನೀಡುವುದನ್ನು ಮುಂದೂಡಿದ್ದಾರೆ. ಅರ್ಜಿದಾರರ ವಕೀಲ ಪುನಃ ಪ್ರಕರಣವನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರಿಂದ ತೀರ್ಪನ್ನು ಮುಂದೂಡಲಾಗಿದೆ.

ತೇಜ್‍ಬಹಾದೂರ್‌ರ ನಾಮಪತ್ರ ತಪ್ಪಾಗಿದೆ ಎಂದು ಕಾರಣ ತೋರಿಸಿ ತಿರಸ್ಕರಿಸಿತ್ತು. ನೋಟಿಸಿಗೆ ಉತ್ತರ ನೀಡಲು ಚುನಾವಣಾ ಆಯೋಗ ಸಾಕಷ್ಟು ಸಮಯ ನೀಡಿಲ್ಲವೆಂದು ವಕೀಲರು ಕೋರ್ಟಿಗೆ ತಿಳಿಸಿದರು. ಈ ವಿಷಯವನ್ನು ಹೈಕೋರ್ಟಿಗೆ ತಿಳಿಸಿಲ್ಲ ಎಂದು ಮೋದಿಗಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಲ್ವೆ ಹೇಳಿದರು.

ತೇಜ್‍ಬಹಾದ್ದೂರ್ ಬಿಎಸ್ಪಿ ಟಿಕೆಟ್‍ನಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದರು. ಅವರ ನಾಮಪತ್ರ ತಿರಸ್ಕೃತವಾಗಿತ್ತು. ಆದರೆ, ಬಿಎಸ್‍ಎಫ್‍ನಿಂದ ತೇಜ್‍ಬಹಾದೂರರನ್ನು ಹೊರಹಾಕಿದ್ದು ಶಿಸ್ತು ಉಲ್ಲಂಘಿಸಿದ್ದಕಾಗಿಯೋ ಭ್ರಷ್ಟಾಚಾರಕ್ಕಾಗಿಯೋ ಎಂದು ತಿಳಿಸುವ ಅಫಿದಾವಿತ್ ನಾಮಪತ್ರದಲ್ಲಿರಲಿಲ್ಲ ಎಂದು ಕಾರಣ ತೋರಿಸಿ ವಾರಣಾಸಿ ರಿಟರ್ನಿಂಗ್ ಆಫಿಸರ್ ನಾಮಪತ್ರವನ್ನು ತಿರಸ್ಕರಿಸಿದ್ದರು.

ಇದರ ವಿರುದ್ಧ ಸಲ್ಲಿಸಿದ ಅರ್ಜಿ ಅಲಹಾಬಾದ್ ಹೈಕೋರ್ಟು ತಿರಸ್ಕರಿಸಿದ್ದರಿಂದ ತೇಜ್‍ಬಹಾದೂರ್ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು.