ನನ್ನ ಸ್ಥಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ- ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ

0
203

ಸನ್ಮಾರ್ಗ ವಾರ್ತೆ

ಪಾಟ್ನ: ‘ಪಾರ್ಟಿ ಕಾರ್ಯಕರ್ತ’ ಎಂಬ ತನ್ನ ಸ್ಥಾನ ತನ್ನಿಂದ ಯಾರಿಗೂ ಕಿತ್ತುಕೊಳ್ಳಲು ಸಾದ್ಯವಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಸೋಮವಾರ ಅಧಿಕಾರಕ್ಕೆ ಬಂದಿರುವ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ತಾರ್ ಕಿಶೋರ್ ಪ್ರಸಾದ್ ಉಪಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದ ಬಳಿಕ ಸುಶೀಲ್ ಮೋದಿ ಪ್ರತಿಕ್ರಿಯಿಸಿದ್ದಾರೆ. 40 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿ ಆರೆಸ್ಸೆಸ್ ತನಗೆ ಲೆಕ್ಕಕ್ಕಿಂತ ಹೆಚ್ಚು ಸ್ಥಾನಮಾನಗಳನ್ನು ನೀಡಿದೆ. ಭವಿಷ್ಯದಲ್ಲಿ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ ಎಂದು ಅವರು ಹೇಳಿದರು.

ಒಬ್ಬ ಕಾರ್ಯಕರ್ತ ಎಂಬ ಸ್ಥಾನದಿಂದ ತೆಗೆದು ಹಾಕಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದರು. ಸಚಿವ ಸಂಪುಟ ರೂಪೀಕರಿಸುವ ಚರ್ಚೆಗಳಿಗಾಗಿ ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪಾಟ್ನದಲ್ಲಿದ್ದು ಈ ವೇಳೆ ನಿತೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಪಾರ್ಟಿಯ ವಿಧಾನಸಭಾ ನಾಯಕನಾಗಿ ಆಯ್ಕೆಯಾದ ತಾರ್ ಕಿಶೋರ್ ಪ್ರಸಾದ್‍ರನ್ನು ಸುಶೀಲ್ ಮೋದಿ ಅಭಿನಂದಿಸಿದರು.