ಸೂಜಿ ಮತ್ತು ಸ್ವರ್ಗ

0
728

ಬಾಲಪಂಕ್ತಿ

ಒಂದೂರಿನಲ್ಲಿ ಓರ್ವ ಶ್ರೀಮಂತ ವರ್ತಕನಿದ್ದನು. ಆತ ಜಿಪುಣನೂ ಆಸೆಬುರುಕನೂ ಆಗಿದ್ದನು. ಆತ ಎಂದಿಗೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲಿಕ್ಕಾಗಲಿ ಅಥವಾ ದೀನರಿಗೆ ಬಡವರಿಗೆ ಸಹಾಯ ಮಾಡಲಿ ಕ್ಕಾಗಲಿ ತನ್ನ ಹಣವನ್ನು ವಿನಿ ಯೋಗಿಸಲೇ ಇಲ್ಲ. ಎಷ್ಟರ ವರೆಗೆಂದರೆ ಆತ ತನ್ನ ಚಪ್ಪಲಿ ಗಳು ಹರಿದು ಹೋದರೂ ಕೂಡ ಅವುಗಳನ್ನು ಹೊಲಿದು ಹೊಲಿದು ಧರಿಸುತ್ತಿದ್ದನೇ ಹೊರತು ಹೊಸ ಚಪ್ಪಲಿ ಗಳನ್ನು ಖರೀದಿಸುವ ಗೋಜಿಗೆ ಹೋಗಿರಲಿಲ್ಲ. ತನ್ನ ಹಣವನ್ನು ಸಂಗ್ರಹಿಸುವಲ್ಲಿಯೇ ಆತ ತನ್ನ ಸಮಯವನ್ನು ವ್ಯಯಿಸುತ್ತಿದ್ದನು. ಹೀಗಿರುತ್ತಾ ಆತ ಒಂದು ದಿನ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದನು.
ಆತನ ಜೀವಿತಾವಧಿಯಲ್ಲಿ ಆತನಿಗೆ ಒಬ್ಬನೇ ಒಬ್ಬ ಗೆಳೆಯ ನಿದ್ದ. ಅವನು ವರ್ತಕನ ದರ್ಜಿ ಯಾಗಿದ್ದನು. ಆದರೆ ದರ್ಜಿಯಾ ದರೋ ಕೆಲವೇ ದಿನಗಳ ಹಿಂದೆ ಮರಣ ಹೊಂದಿದ್ದನು. ವರ್ತಕ ತನ್ನ ಅಂತ್ಯದಿನಗಳನ್ನು ಎಣಿಸುತ್ತಿದ್ದಾನೆಂಬುದು ಎಲ್ಲರ ಗಮನಕ್ಕೆ ಬಂತು. ಆತನ ಹತ್ತಿರದ ಸಂಬಂಧಿ ಕರು ಆತನ ಪರಿಚಯಸ್ಥರೆಲ್ಲರೂ ಆತನನ್ನು ಸಂದರ್ಶಿಸಲಾರಂಭಿಸಿ ದರು. ಬಂದವರು ಎಲ್ಲಿ ಆತನ ಬಳಿ ಹಣದ ಸಹಾಯವನ್ನು ಯಾಚಿಸುವರೋ ಎಂಬ ಭಯ ವರ್ತಕನ ಮನದಲ್ಲಿ ಮನೆ ಮಾಡಿತ್ತು. ವೀಕ್ಷಿಸಲು ಬಂದವ ರಾದರೋ ಆತನನ್ನು ಓರ್ವ ರೋಗಿ ಎಂಬ ನೆಲೆಯಲ್ಲಿ ಆತನಿಗೆ ಧೈರ್ಯ ತುಂಬಲು ಮತ್ತು ಆತನ ರೋಗ ಶಮನಕ್ಕಾಗಿ ಪ್ರಾರ್ಥಿಸಲು ಬಂದಿದ್ದರು. ವರ್ತಕನ ವರ್ತನೆಯಿಂದ ರೇಗಿ ಅವರು ಹಾಗೆಯೇ ಮರಳಿ ಹೋದರು.
ಅದೇ ರೀತಿ ಆತನ ಆಪ್ತನಾದ ದರ್ಜಿಯ ಮಗನು ಆತನ ಬಳಿಗೆ ಬಂದನು.
ವರ್ತಕ ಅವನನ್ನು ನೋಡಿ ” ನಾನಿನ್ನು ದೀರ್ಘಕಾಲ ಇಲ್ಲಿ ಬಾಳಲಾರೆನೆನ್ನಿಸುತ್ತಿದೆ. ನಾನು ಸ್ವರ್ಗಕ್ಕೆ ಹೋಗುವ ದಿನಗಳು ಹತ್ತಿರವಾಗುತ್ತಿವೆ ” ಎಂದನು.
ದರ್ಜೆಯ ಮಗನಾದರೋ ಬುದ್ದಿವಂತನಾಗಿದ್ದನು. ವರ್ತಕ ನಿಗೆ ತನ್ನ ಸಂಪತ್ತಿನ ಮೇಲೆ ಅತಿಯಾದ ಪ್ರೀತಿ ಇರುವುದೂ ಆತ ಜಿಪುಣನಾಗಿರುವುದೂ ಆತನಿಗೆ ತಿಳಿದಿತ್ತು. ಆತ ಕೂಡಲೇ ವರ್ತಕನ ಬಳಿ
“ಅಂಕಲ್! ನೀವು ನನಗೊಂದು ಸಹಾಯ ಮಾಡುವಿರಾ?”
ಎಂದು ಕೇಳಿದನು.
ವರ್ತಕನಿಗೆ ಬಾಲಕನೆಲ್ಲಿ ತನ್ನಲ್ಲಿ ಹಣ ಕೇಳುವನೋ ಎಂಬ ಭಾವನೆ ಆವರಿಸಿತ್ತು .ಆದರೂ ಆತ ಅಸಮಾಧಾನದಿಂದ ಆತನತ್ತ ತಿರುಗಿದನು.
ಆತ ಕೂಡಲೇ “ಅಂಕಲ್, ನಿಮಗೆ ಗೊತ್ತಿದೆ ಅಲ್ಲವೇ, ನನ್ನ ಅಪ್ಪ ಇತ್ತೀಚೆಗಷ್ಟೇ ತೀರಿಕೊಂಡಿದ್ದಾರೆಂದು. ಆದರೆ ಅವರ ಸಮಾಧಿಯೊಂದಿಗೆ ಅವರಿಗಿಷ್ಟವಿದ್ದ ಸೂಜಿಯನ್ನು ಹೂಳಲು ನಾವು ಮರೆತಿದ್ದೇವೆ. ನೀವು ಸ್ವರ್ಗಕ್ಕೆ ಹೋದರೆ ನನ್ನ ಅಪ್ಪನಿಗೆ ಈ ಸೂಜಿಯನ್ನು ಕೊಟ್ಟು ಬಿಡಿರಿ. ಅವರಿಗೆ ಇದರಿಂದ ಅತೀವ ಸಂತೋಷವಾಗಬಹುದು” ಎಂದನು.
ಆಗ ವರ್ತಕನಿಗೆ ಈತ ಹಣವನ್ನು ಕೇಳಲಿಲ್ಲವಲ್ಲ ಎಂಬ ಸಂತೋಷವಾಯ್ತು.
ಆತ ಸಂತೋಷದಿಂದ ಅದನ್ನು ತೆಗೆದಿರಿಸಿಕೊಂಡನು.
ಆತನು ವರ್ತಕನಿಗೆ ಧನ್ಯ ವಾದ ಹೇಳಿ ಮರಳಿದನು.
ಆತ ಹೋದ ನಂತರ ವರ್ತಕ ಸೂಜಿಯನ್ನು ಎಲ್ಲಿರಿಸಿ ಕೊಳ್ಳಬೇಕೆಂದು ಆಲೋಚಿಸ ತೊಡಗಿದನು.
ತದನಂತರ ತನ್ನ ಶರ್ಟ್ ನಲ್ಲಿ ಇರಿಸುತ್ತೇನೆ ಎಂದು ತೀರ್ಮಾನಿ ಸಿದನು. ಆಗ ಸತ್ತ ನಂತರ ಬಿಳಿ ಬಟ್ಟೆಯ ತುಂಡುಗಳ ಹೊರತು ತನ್ನಲ್ಲಿ ಏನೂ ಇರದು ಎಂಬುದು ಆತನಿಗೆ ನೆನಪಾಯ್ತು. ತದನಂತರ ತನ್ನ ಬಾಯಲ್ಲಿ ಅದನ್ನು ಇರಿಸಿ ಕೊಳ್ಳುತ್ತೇನೆ ಎಂದು ನೆನೆಸಿದನು. ಆದರೆ ಬಾಯಲ್ಲಿರಿಸಿಕೊಂಡರೆ ಸತ್ತ ನಂತರ ಅಂತ್ಯಕ್ರಿಯೆಗೆ ಮೊದಲು ಮಾಡಿಸುವ ಸ್ನಾನದಲ್ಲಿ ತನ್ನ ಬಾಯಿಯನ್ನು ತೊಳೆಯುವರು. ಅದಲ್ಲದೇ ಈ ದೇಹವು ಮಣ್ಣಿನಡಿಯಲ್ಲಿ ಕೊಳೆತು ಕರಗಿ ಹೋಗುವುದು ಎಂಬುದು ಆತನಿಗೆ ನೆನಪಾಯ್ತು.
ಕೂಡಲೇ ಆತ ಆ ಯುವಕನಿಗೆ ಬರ ಹೇಳಲು ತಿಳಿಸಿದನು. ಆತ ಬಂದಾಗ ಆತ ಆ ಸೂಜಿಯನ್ನು ವಾಪಸು ನೀಡಿ ಇದನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗದು ಎಂದು ಖಡಾಖಂಡಿತವಾಗಿ ಹೇಳಿದನು.
ಆಗ ಆತ “ಅಂಕಲ್ ನೀವು ಕೋಟ್ಯಂತರ ರೂಪಾಯಿ ಗಳನ್ನು ಸ್ವರ್ಗಕ್ಕೆ ಒಯ್ಯುತ್ತೀರಿ. ಹೀಗಿರುವಾಗ ನಿಮಗೆ ಈ ಚಿಕ್ಕ ಸೂಜಿಯನ್ನು ಕೊಂಡೊಯ್ಯಲಾಗದೇ?” ಎಂದು ಪ್ರಶ್ನಿಸಿದನು.
ವರ್ತಕನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ಜಿಪುಣತೆ ಮತ್ತು ಆಸೆಬುರುಕತನಕ್ಕೆ ಆತ ಮರುಗಿದನು. ಅಲ್ಲಾಹನಲ್ಲಿ ಪ್ರಾರ್ಥಿಸಿ ಪಶ್ಚಾತ್ತಾಪ ಪಟ್ಟನು. ತನಗೆ ಇನ್ನೊಂದು ಅವಕಾಶವನ್ನು ದಯಪಾಲಿಸುವಂತೆ ಆತನಲ್ಲಿ ಕೇಳಿಕೊಂಡನು.
ಅಲ್ಲಾಹನು ಆತನ ಪ್ರಾರ್ಥನೆಯನ್ನು ಸ್ವೀಕರಿಸಿ ಆತನನ್ನು ಗುಣಮುಖನಾಗಿಸಿದನು. ವರ್ತಕ ತನ್ನ ಸಂಪತ್ತನ್ನು ನೇರ ಮಾರ್ಗದಲ್ಲಿ ಬಡವರಿಗೆ ನಿರ್ಗತಿಕರಿಗೆ ಆಶ್ರಯ ಒದಗಿಸಲು ಬಳಸಿದನು. ಹಲವಾರು ಶಾಲೆಗಳನ್ನು ನಿರ್ಮಿಸಿದನು.
ಅಲ್ಲಾಹನ ಮಾರ್ಗದಲ್ಲಿ ವ್ಯಯಿಸಿದ ಸಂಪತ್ತು, ಬಡವರ ಮತ್ತು ನಿರ್ಗತಿಕರ ಸಹಾಯ ಕ್ಕಾಗಿ ವ್ಯಯಿಸಿದ ಸಂಪತ್ತು ಮಾತ್ರವೇ ನಮ್ಮನ್ನು ಅಂತ್ಯ ದಿನದಲ್ಲಿ ಕಾಪಾಡುವುದು. ನಮ್ಮ ಸತ್ಕರ್ಮಗಳು ಮಾತ್ರವೇ ಈ ಲೋಕದಿಂದ ನಮ್ಮೊಂದಿಗೆ ಬರುತ್ತವೆಯೇ ಹೊರತು ಬೇರಾ ವುದೇ ಸಂಪತ್ತು ನಮ್ಮೊಂದಿಗೆ ಬರುವುದಿಲ್ಲ.
“ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ ಮತ್ತು ಪ್ರತಿಯೊಬ್ಬನೂ, ತಾನು ನಾಳೆಗಾಗಿ ಏನನ್ನು ಸಿದ್ಧಪಡಿಸಿಟ್ಟಿರುವೆನೆಂಬುದನ್ನು ನೋಡಿಕೊಳ್ಳಲಿ. ಅಲ್ಲಾಹನನ್ನು ಭಯಪಡುತ್ತಲಿರಿ. ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಸಕಲ ಕರ್ಮಗಳನ್ನು ಅಲ್ಲಾಹನು ಬಲ್ಲವನಾಗಿರುತ್ತಾನೆ.

ಅನು: ಬಿಂತಿ ಯಾಸೀನ್