ಸಿರಿಯ: ಅಮೆರಿಕ ಸೇನಾ ಹಿಂತೆಗೆತದಿಂದ ನಷ್ಟವೋ ಲಾಭವೋ?

0
922

ಸಿರಿಯ: ಅಮೆರಿಕ ಸೇನಾ ಹಿಂತೆಗೆತದಿಂದ ನಷ್ಟವೋ ಲಾಭವೋ?

✒ ರಜಬ್ ತೈಯ್ಯಿಬ್ ಉರ್ದುಗಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯದಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದು ಒಳ್ಳೆಯದೇ ಆಯಿತು. ಆದರೂ ಸಿರಿಯದ ಜನರು, ಅಂತಾರಾಷ್ಟ್ರೀಯ ಸಮು ದಾಯ, ಅಮೆರಿಕ ಸಹಿತ ಎಲ್ಲರ ಹಿತದ ಸುರಕ್ಷೆಯನ್ನು ಖಚಿಪಡಿಸಲು ಹೀಗೆ ಹಿಂದೆ ಸರಿಯಲಾಗಿದೆ  ಎನ್ನಬಹುದು. ನ್ಯಾಟೊದ ಎರಡನೆ ದೊಡ್ಡ ಶಕ್ತಿಯಾದ ಟರ್ಕಿಗೆ ಮಾತ್ರ ಬದ್ಧತೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಿದೆ. 2016ರಲ್ಲಿ ಟರ್ಕಿ  ಸಿರಿಯದ ಐಸಿಸ್‍ನ ತಳ ಅಂತಸ್ತನ್ನು ಎದುರಿಸಲು ಸೇನೆಯನ್ನು ನಿಯೋಜಿಸಿದ್ದ ಮೊತ್ತ ಮೊದಲ ದೇಶವಾಗಿದೆ. ನಮ್ಮ ಸೇನೆಯು ನ್ಯಾಟೊ  ಗಡಿಗೆ ಈ ಐಸಿಸ್ ಬರದಂತೆ ತಡೆ ಯಿತು. ಟರ್ಕಿ ಮತ್ತು ಯುರೋಪಿನಲ್ಲಿ ಭಯೋತ್ಪಾದನೆ ನಡೆಸಲು ಹೊಂಚು ಹಾಕಿದ್ದ ಅವರ  ಆಯುಧ ಶಕ್ತಿಯನ್ನು ನಮ್ಮ ಸೇನೆ ನಾಶಪಡಿಸಿತು.

ರಖದಲ್ಲಿ ಮತ್ತು ಮೌಸಿಲ್‍ನಲ್ಲಿ ಧಾರಾಳವಾಗಿ ಸಾಮಾನ್ಯ ಪ್ರಜೆಗಳ ಜೀವಹಾನಿಗೆ ಕಾರಣವಾಗಿ ರುವ ಆಕಾಶ ದಾಳಿಗೆ ಟರ್ಕಿ ಆತುಕೊಳ್ಳಲಿ ಲ್ಲ. ಇದಕ್ಕಿಂತ ಬೇರೆಯೇ ರೀತಿಯಲ್ಲಿ ಟರ್ಕಿಯ ಸೈನ್ಯ ಮತ್ತು ಫ್ರೀ ಸಿರಿಯನ್ ಆರ್ಮಿ ಹೋರಾಟಗಾರರು ಐಸಿಸ್‍ನ ಶಕ್ತಿ ಕೇಂದ್ರವಾದ ಅಲ್‍ಬಾಬಿಲ್‍ನ ಮನೆಮನೆಗೆ ನುಗ್ಗಿ ಗಲಭೆಕೋರ ರನ್ನು ನಿರ್ಮೂಲಿಸಿದರು. ನಮ್ಮ ಈ ಕಾರ್ಯಾ ಚರಣೆಯಿಂದಾಗಿ ನಗರದ ಆಂತರಿಕ  ವ್ಯವಸ್ಥೆಗೆ ಹಾನಿಯಾಗಿಲ್ಲ. ಮಾತ್ರವಲ್ಲ ನಗರ ಕೆಲವೇ ದಿವಸಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿತು. ಈಗ ಮಕ್ಕಳು ಅಲ್ಲಿ ಶಾಲೆಗೆ  ಹೋಗುತ್ತಿದ್ದಾರೆ. ಟರ್ಕಿಯ ಆರ್ಥಿಕ ಸಹಾಯದಲ್ಲಿ ಒಂದು ಆಸ್ಪತ್ರೆ ಅಲ್ಲಿ ಕಾರ್ಯವೆಸಗುತ್ತಿದೆ. ಪ್ರಾದೇಶಿಕ ಆರ್ಥಿಕ ವ್ಯವಸ್ಥೆ ಊರ್ಜಿತವಾಗಿ  ಇಡಲು ಮತ್ತು ಕೆಲಸ ಸೃಷ್ಟಿಸಲು ಹೊಸ ಉದ್ದಿಮೆ ಸ್ಥಾಪಿಸಲು ಅಲ್ಲಿ ಚಾಲನೆ ನೀಡಲಾಗಿದೆ. ಈ ರೀತಿ ಸುಸ್ಥಿರ ಪರಿಸ್ಥಿತಿಯನ್ನು  ಹುಟ್ಟುಹಾಕುವುದು ಭಯೋತ್ಪಾದನೆಯನ್ನು ತಡೆ ಯುವ ಪರ್ಯಾಯ ವ್ಯವಸ್ಥೆಯಾಗಿದೆ.

ಐಸಿಸ್ ಮತ್ತು ಸಿರಿಯದ ಇತರ ಭಯೋತ್ಪಾದಕ ಸಂಘಟನೆಗಳನ್ನು ಸೋಲಿಸಲು ಟರ್ಕಿ ಪ್ರತಿಜ್ಞಾ ಬದ್ಧವಾಗಿದೆ. ಕಾರಣ, ಟರ್ಕಿಯ ಜನರು  ಭಯೋತ್ಪಾದಕರ ಬೆದರಿಕೆ ಅನುಭವಿಸಿ ದವರು. 2003ರರಲ್ಲಿ ತಾನು ಪ್ರಧಾನಿಯಾಗಿದ್ದಾಗ ಅಲ್‍ಕಾಯಿದ ದಾಳಿಯಲ್ಲಿ ಹಲವಾರು ಟರ್ಕಿ  ಪ್ರಜೆಗಳು ಕೊಲ್ಲಲ್ಪಟ್ಟಿದ್ದರು. ಇತ್ತೀಚೆಗೆ ಐಸಿಸ್ ನಮ್ಮ ಪ್ರಜೆಗಳ ಸಂತುಲಿತ ಐಹಿಕ ದೃಷ್ಟಿಕೋನ ಮತ್ತು ಜೀವನ ಶೈಲಿಯ ಮೇಲೆ ದಾಳಿ  ಮಾಡಿತ್ತು. ಕೆಲವು ವರ್ಷಗಳ ಹಿಂದೆ ಒಂದು ಭಯೋತ್ಪಾದಕ ಸಂಘಟನೆ ವಂಚಕನಾದ ಪಿಶಾಚಿ ಎಂದು ತನ್ನನ್ನು ಕರೆದಿತ್ತು. ಇರಾಕ್, ಸಿರಿಯದಿಂದ ಈ ಭಯೋತ್ಪಾದಕರ ದಾಳಿಗೆ ಹೆದರಿ ಆಶ್ರಯ ಕೇಳಿ ಬಂದ ಸಾವಿರಾರು ಯಝೀದಿಗಳು, ಕ್ರೈಸ್ತರ ಮುಖದಲ್ಲಿ ಭೀತಿಯನ್ನು  ನಾವು ಕಂಡಿ ದ್ದೇವೆ. ಭಯೋತ್ಪಾದಕರು ಎಂದೂ ಗೆಲ್ಲುವುದಿಲ್ಲ ಎಂದು ನಾನು ಪುನರುಚ್ಚರಿಸುತ್ತೇನೆ. ಟರ್ಕಿಯ ಸುರಕ್ಷೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಕ್ಷೇಮಕ್ಕಾಗಿ ಅಗತ್ಯವಿರುವುದನ್ನೆಲ್ಲ ಇನ್ನು ಕೂಡ ಮುಂದುವರಿಸುತ್ತೇವೆ. ಸೈನಿಕವಾಗಿ ಐಸಿಸ್ ಸಿರಿಯ ದಲ್ಲಿ ಸೋಲುಂಡಿದ್ದರೂ ಕೆಲವು ಹೊರಗಿನ ಶಕ್ತಿಗಳು ಸಿರಿಯದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಇದನ್ನು ಒಂದು ಕಾರಣವಾಗಿ  ಉಪಯೋಗಿಸುತ್ತಿರುವುದು ತೀರ ಗಂಭೀರ ವಿಚಾರವಾಗಿದೆ.

ಈ ಭಯೋತ್ಪಾದಕರ ವಿರುದ್ಧ ಸೈನಿಕ ವಿಜಯ ಮೊದಲ ಹಂತದ್ದು ಮಾತ್ರವಾಗಿದೆ. ಇವರು ಪಡೆದ ಇರಾಕಿನ ಅಪಕ್ವ ವಿಜಯ ಘೋಷಣೆ  ನಂತರ ಪರಿಹಾರಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸಿತು. ಇದು ಒಂದು ಪಾಠ ವಾಗಿದೆ. ರಾಡಿಕಲೈಶೇಷನ್‍ನ ಮೂಲಕಾರಣಗಳ ನಿರ್ಮೂಲನೆಗೆ ಸಮಗ್ರವಾದ ಸ್ಟ್ರಾಟಜಿಯನ್ನು ಟರ್ಕಿ ಮುಂದಿಡುತ್ತಿದೆ. ಪ್ರಜೆಗಳಿಗೆ ಒಮ್ಮೆಯೂ ಸರಕಾದಿಂದ ವಿಚ್ಛೇದನಗೊಳ್ಳುವ ಭಾವನೆ ಸೃಷ್ಟಿಯಾಗಬಾರದು ಎಂದು ಬಯಸುತ್ತೇನೆ. ಸುಸ್ಥಿರ ಭವಿಷ್ಯವನ್ನು ನಿರೀಕ್ಷಿಸುವ ಸಾಮಾನ್ಯರು ಮತ್ತು ಪ್ರಾದೇಶೀಕ ಸಮುದಾಯಗಳ ಕಷ್ಟಗಳು ಭಯೋತ್ಪಾದಕ ವಿಭಾಗಗಳು ಬಳಸಿಕೊಳ್ಳುವ ಸ್ಥಿತಿ ಬರಬಾರದು. ಸಿರಿಯದ ನಾನಾ ಕಡೆಯಿಂದ ಹೋರಾಟಗಾರ ಕೂಟ ಸೃಷ್ಟಿಸುವುದು  ಮೊದಲ ಹೆಜ್ಜೆಯಾಗಿದೆ. ವೈವಿಧ್ಯಮಯವಾದ ಕೂಟಕ್ಕಷ್ಟೇ ಸಿರಿಯದ ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ವ್ಯವರಿಸಲು ಮತ್ತು ಕಾನೂನು  ಸುಸ್ಥಿತಿಯನ್ನು ನೆಲೆಗೊಳಿಸಲು ಸಾಧ್ಯವಿದೆ. ಈ ಅರ್ಥದಲ್ಲಿ ಸಿರಿಯದ ಕುರ್ದುಗಳೊಂದಿಗೆ ನಮಗೆ ಭಿನ್ನ ಅಭಿಪ್ರಾಯವೇ ಇಲ್ಲ.

ಯುದ್ಧ ಪರಿಸ್ಥಿತಿಯಲ್ಲಿ ಹಲವು ಯುವಕರು ಟರ್ಕಿ ಮತ್ತು ಅಮೆರಿಕವು ಭಯೋತ್ಪಾದಕರೆಂದು ಪರಿಗಣಿಸುವ ಪಿಕೆಕೆಯ ಸಿರಿಯದ ಶಾಖೆಯಾದ ಪಿವೈಡಿ/ವೈಪಿಜಿಗೆ ಸೇರಲು ಬಂದಿದ್ದರು. ವೈಪಿಜಿ ಮಕ್ಕಳನ್ನು ನೇಮಕಗೊಳಿಸಿ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದೆ ಎಂದು ಹ್ಯೂಮನ್ ರೈಟ್ ವಾಚ್ ಹೇಳಿದೆ. ಅಮೆರಿಕದ ಸೈನ್ಯ ಸಿರಿಯದಿಂದ ಹೋಗುವುದರಿಂದ ಬಾಲ ಸೈನಿಕ ರನ್ನು ಅವರ ಕುಟುಂಬಕ್ಕೆ  ಕಳುಹಿಸಲು ಮತ್ತು ಭಯೋತ್ಪಾದಕರೊಂದಿಗೆ ಸಂಬಂಧ ಇಲ್ಲದ ಹೋರಾಟಗಾರರನ್ನು ಹೊಸ ಕಾನೂನು ಪಾಲನಾ ಸೇನೆಗೆ ಸೇರಿಸುವ  ವಿಚಾರವಿದೆ. ಇದು ಬಹಳ ಸೂಕ್ಷ್ಮ ಮತ್ತು ತೀಕ್ಷ್ಣ ಕ್ರಮವಾಗಿರುತ್ತದೆ.

ಎಲ್ಲ ವಿಭಾಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಖಚಿತಪಡಿಸುವುದು ಇನ್ನೊಂದು ಆದ್ಯತೆಯ ವಿಚಾರವಾಗಿದೆ. ವೈಪಿಜಿಯ ಮತ್ತು ಐಸಿಸ್ ನ ಅಧೀನದಲ್ಲಿರುವ ಪ್ರದೇಶಗಳು ಟರ್ಕಿಯ ಮೇಲ್ನೋಟದಲ್ಲಿ ಜನರು ಆಯ್ಕೆಮಾಡಿದ ಕೌನ್ಸಿಲರು ಆಡಳಿತ ನಡೆಸುವರು. ಭಯೋತ್ಪಾದಕರೊಂದಿಗೆ ಸಂಬಂಧ ಇಲ್ಲದ ವ್ಯಕ್ತಿಗಲೂ ಪ್ರದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಲು ಸಾಧ್ಯವಿದೆ. ಕುರ್ದಿಶ್ ಬಹುಸಂಖ್ಯಾತ ಪ್ರದೇಶವಾದ ಉತ್ತರ ಸಿರಿಯದ ಪ್ರಾದೇಶಿಕ ಕೌನ್ಸಿಲ್‍ಗಳಲ್ಲಿ ಕುರ್ದಿಶ್ ಪ್ರತಿನಿಧಿಗಳಿಗೆ ಮುಖ್ಯತ್ವ ಇದ್ದರೂ ಇತರರಿಗೂ ಉಚಿತವಾದ ಪ್ರಾತಿನಿಧ್ಯ ಇರುತ್ತದೆ. ಆಡಳಿತ ಪರಿಚಯವಿರುವ ಟರ್ಕಿಶ್ ಅಧಿಕಾರಿಗಳು ಮುನ್ಸಿಪಲ್ ವಿಷಯಗಳು, ಶಿಕ್ಷಣ, ಆರೋಗ್ಯ ಇತರ ತುರ್ತು ಸೇವೆಗಳಿಗೆ ಸಲಹೆ, ನಿರ್ದೇಶಗಳನ್ನು ನೀಡಬೇಕಾಗಿದೆ. ಟರ್ಕಿಯ ಸಖ್ಯ ಪಕ್ಷಗಳು ಮತ್ತು ಮಿತ್ರರು ಸಹಕರಿಸಲು ನಮ್ಮ ಚಟುವಟಿಕೆಗಳನ್ನು  ಏಕೀಕೃತಗೊಳಿಸಲು ಬಯಸುತ್ತೇನೆ. ಜಿನೀವದಲ್ಲಿ ಈ ವಿಷಯವನ್ನು ಚರ್ಚಿಸಿದ್ದೇನೆ. ಅದರಂತೆ ಅಮೆರಿಕ, ರಷ್ಯ ಒಟ್ಟಿಗೆ ಕೆಲಸ ಮಾಡಲು  ಕೂಡ ಸಾಧ್ಯವಿದೆ. ಈ ಸಹಕಾರದಲ್ಲಿ ಟರ್ಕಿ ತನ್ನ ದೌತ್ಯವನ್ನು ಪೂರ್ತಿಗೊಳಿಸುವ ವಿಶ್ವಾಸವಿದೆ.

ಇಸ್ಲಾಮ್ ಮತ್ತು ಮುಸ್ಲಿಂ ಜಗತ್ತಿನ ಶತ್ರುವಾದ ಐಸಿಸ್ ಭಯೋತ್ಪಾದಕರನ್ನು ನಿರ್ಮೂಲಿಸಿ ಸಿರಿಯದ ಪ್ರಾದೇಶಿಕ ಅಖಂಡತೆಯನ್ನು ಸಂರಕ್ಷಿ  ಸಲು ಎಲ್ಲ ಪಕ್ಷಗಳು ಒಟ್ಟಿಗೆ ಸೇರಬೇಕಾದ ಪರಿಸ್ಥಿತಿಯಿದು. ಇತಿಹಾಸದ ನಿರ್ಣಾಯಾತ್ಮಕ ವೇಳೆಯಲ್ಲಿ ಈ ಭಾರೀ ಭಾರಕ್ಕೆ ಭುಜ ಕೊಡಲು  ಟರ್ಕಿ ಸಿದ್ಧವಿದೆ. ನಮ್ಮೊಂದಿಗೆ ಅಂತಾರಾಷ್ಟ್ರೀಯ ಸಮುದಾಯ ಕೈಜೋಡಿಸುತ್ತದೆ ಎನ್ನುವ ನಿರೀಕ್ಷೆ ನನಗಿದೆ.