ಸಿರಿಯಾದಲ್ಲಿ ರಾಸಾಯನಿಕ ದಾಳಿ: ಬಶರ್ ಅಲ್ ಅಸದ್ ವಿರುದ್ಧ ಜರ್ಮನಿ ಕೋರ್ಟಿನಲ್ಲಿ ದಾವೆ

0
128

ಸನ್ಮಾರ್ಗ ವಾರ್ತೆ

ಬರ್ಲಿನ್,ಅ.8: ದೀರ್ಘ ಕಾಲದಿಂದ ದೇಶದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಬಶರ್ ಅಲ್ ಅಸದ್ ಸರಕಾರ ರಾಸಾಯನಿಕ ಆಯುಧವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ ಎನ್‌ಜಿಓಗಳು ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಜರ್ಮನಿಯ ಅಧಿಕಾರಿಗಳು ದೃಢೀಕರಿಸಿದ್ದಾರೆ.

ಭಿನ್ನಮತೀಯರ ವಶದಲ್ಲಿರುವ ಡಮಸ್ಕಸ್‍ನ ಸಮೀಪದ ಪೂರ್ವ ಗೌತಿ, ಖಾನ್ ಶೈಖೂನ್ ಗರಗಳಲ್ಲಿ 2013, ಮತ್ತು 2017ರಲ್ಲಿ ಬಶರ್ ಸರಕಾರ ರಾಸಾಯನಿಕ ಅಸ್ತ್ರ ಪ್ರಯೋಗಿಸಿದೆ. ಇದರ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಓಪನ್ ಸೊಸೈಟಿ ಜಸ್ಟಿಸ್ ಇನೇಶಿಯೇಟಿವ್, ಸಿರಿಯನ್ ಸೆಂಟರ್ ಫಾರ್ ಮೀಡಿಯ ಆಂಡ್ ಎಕ್ಸ್‌ಪ್ರೆಶನ್, ಸಿರಿಯನ್ ಆರ್ಕೈವ್ ಎನ್‍ಜಿಓಗಳು ಜರ್ಮನ್ ಅಟಾರ್ನಿ ಜನರಲ್‍ಗೆ ಆಗ್ರಹಿಸಿದ್ದಾರೆ.

ಬಶರ್ ಸರಕಾರ ವಿರುದ್ಧ ತನಿಖೆಗೆ ಆವಶ್ಯಕವಾದ ಸಾಕ್ಷ್ಯಗಳನ್ನು ಒದಗಿಸಿದ್ದೇವೆ ಎಂದು ಮೂರು ಎನ್‍ಜಿಓಗಳು ಮಂಗಳವಾರ ತಿಳಿಸಿವೆ.

LEAVE A REPLY

Please enter your comment!
Please enter your name here