ಮತ್ತೆ ಸಿರಿಯಾದಲ್ಲಿ ಯುದ್ಧ ಭೀತಿ: ಹನ್ನೊಂದು ಸಾವಿರಕ್ಕೂ ಹೆಚ್ಚು ಜನರು ಪಲಾಯನ

0
397

ಸನ್ಮಾರ್ಗ ವಾರ್ತೆ

ಡಮಸ್ಕಸ್,ಡಿ.4: ಆಂತರಿಕ ಯುದ್ಧದ ಒಂದು ವಿರಾಮದ ಬಳಿಕ ಯುದ್ಧವು ಪುನಃ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪಲಾಯನ ಮಾಡುತ್ತಿದ್ದಾರೆ. ರಕ್ತರಂಜಿತ ಯುದ್ಧ ಭೂಮಿಯಿಂದ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಎಲ್ಲಿಗೆ ಹೋಗುವುದೆಂದು ಗೊತ್ತಿಲ್ಲದೆ ಹೆಚ್ಚಿನ ಸಿರಿಯಾದ ಕುಟುಂಬಗಳು ಪಲಾಯನಕ್ಕೆ ತೊಡಗಿವೆ. ಇದರ ಚಿತ್ರಗಳು ಕಳೆದ ದಿವಸ ಅಂತಾರಾಷ್ಟ್ರೀಯ ಮಾಧ್ಯಮಗಳು ಬಹಿರಂಗೊಳಿಸಿವೆ.

ರಷ್ಯ ನೇತೃತ್ವದಲ್ಲಿ ಯುದ್ಧ ನಡೆಯುತ್ತಿದ್ದು ಕಳೆದ ದಿವಸ ಆಕಾಶ ದಾಳಿ ತೀವ್ರಗೊಂಡಿತ್ತು. ಹತ್ತು ಸಾವಿರಕ್ಕೂ ಹೆಚ್ಚು ಯುದ್ಧಗ್ರಸ್ಥರು ಮನೆ-ಮಠ ತೊರೆದು ಓಡಿ ಹೋಗುತ್ತಿದ್ದಾರೆ. ಮನೆಗಳು ಸಂಪೂರ್ಣ ನಾಶವಾಗಿದೆ. ಅವರ ಕೈಯಲ್ಲಿ ಸ್ವಲ್ಪ ಬಟ್ಟೆಗಳಿವೆ. ಹಣ್ಣು, ಪಾತ್ರೆಗಳಿವೆ. ಮಹಿಳೆಯರು ಮಕ್ಕಳ ಗುಂಪು ನೆರೆಯ ಊರಿನತ್ತ ಓಡಿದೆ. ಸಿರಿಯದ ಬಂಡುಕೋರರು ಇರುವ ಇದ್‍ಲಿಬ್‍ನಲ್ಲಿ ಪುನಃ ಯುದ್ಧ ತೀವ್ರಗೊಡಿದೆ. ಕಳೆದ ದಿವಸ ಇದ್‍ಲಿಬ್ ಮಾರ್ಕೆಟಿಗೆ ಬಾಂಬು ಹಾಕಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.