ತಾಯಿಯ ಆರೈಕೆಯಲ್ಲಿ ವಿವಾಹಿತ ಹೆಣ್ಣು ಮಕ್ಕಳ ಪಾತ್ರವೇನೂ ಇಲ್ಲವೇ?

0
3157

ಉಮ್ಮು ಫಾತಿಮಾ ಬೆಂಗಳೂರು

ಎಲ್ಲಿಯೂ ‘ತಾಯಿಯ ಪಾದದಡಿಯಲ್ಲಿ

ಗಂಡು ಮಕ್ಕಳ ಸ್ವರ್ಗವಿದೆ’ ಅಂದಿಲ್ಲ..

ಬಹಳ ಚಿಂತಿಸಬೇಕಾದ ವಿಚಾರ ಇದು.

ಹಲವು ಕಡೆ ಹೆತ್ತವರನ್ನು ನೋಡಿಕೊಳ್ಳ ಬೇಕಾದದ್ದು ಗಂಡು ಮಕ್ಕಳ ಮಾತ್ರ ಹಕ್ಕು, ಕರ್ತವ್ಯ ಎಂದು ಪರಿಗಣಿಸಲಾಗುತ್ತದೆ.

ಹಾಗೂ.. ಈ ಬಗ್ಗೆ ಹೆಣ್ಣುಮಕ್ಕಳು ಬಹಳ ಅಸಡ್ಡೆ ತೋರುವುದೂ..ಇದೆ. ಅಂತಹವರು ನಿಜಕ್ಕೂ ಇಂದು ತುಂಬಾ ತುಂಬಾ ಯೋಚಿಸಬೇಕಾಗಿದೆ.

ಅದೇ ತಾಯಿಯೂ.. ತನ್ನ ಮಕ್ಕಳು ಮಗುವಾಗಿರುವಾಗ ತನ್ನ ಮಗು ಹೆಣ್ಣಿರಲಿ ಗಂಡಿರಲಿ ಒಂದೇ ತರ ಒಂಬತ್ತು ತಿಂಗಳೂ ಹೊಟ್ಟೆಯಲ್ಲಿ ಹೊರುವಳು.

ಮಗು ಹೆಣ್ಣಿರಲಿ ಗಂಡಿರಲಿ ಹೊಟ್ಟೆಯಲ್ಲಿರುವಾಗ ಅಮ್ಮನ ಪಾಲಿಗೆ ಸಂಕಟಗಳೂ ಸಮಾನವಾಗಿರುವುದು. ಹೆರುವಾಗಿನ ನೋವುಗಳೂ ಕೂಡಾ.. ಹೆಣ್ಣೊ ಗಂಡೊ ಸಮಾನ ನೋವನ್ನನುಭವಿಸಿಯೇ ಅಮ್ಮ ಹೆರುವಳು. ಹೆತ್ತ ನಂತರವೂ ಅಷ್ಟೆ ಅಮ್ಮ ತನ್ನ ಮಗುವನ್ನು ಗಂಡು ಹೆಣ್ಣೆಂಬ ತಾರತಮ್ಯವಿಲ್ಲದೇ ಸಮಾನ ಮಮತಾ ಮನೋಭಾವದಿಂದಲೇ ಸಾಕಿಸಲಹುವಳು.. ಮಗೂ, ಬಾ ಕಂದಾ.. ಎನ್ನುತ್ತಾ ಬಿಗಿದಪ್ಪಿ ಮುದ್ದಾಡುವಳು.. ತುತ್ತ ನೀಡುವಳು.. ಹೊಟ್ಟೆ ತುಂಬಿಸುವಳು ತಟ್ಚಿ ಮಲಗಿಸುವಳು.

ತನ್ನ ಮಗು ಗಂಡಿರಲೀ.. ಹೆಣ್ಣಿರಲಿ ಎಲ್ಲೂ ಅಮ್ಮನಾದವಳು ತನ್ನ ಮಗುವಿನಲ್ಲಿ ಹೆಣ್ಣು-ಗಂಡೆಂಬ ತಾರತಮ್ಯ ತೋರಲು ಹೋಗುವುದಿಲ್ಲ.

ಆದರೇ… ಎಲ್ಲೊ ಹಲವು ಕಡೆ ಹೆಣ್ಣುಮಕ್ಕಳು ತನ್ನ ಅಮ್ಮನನ್ನು ನೋಡಿಕೊಳ್ಳುವ, ಸಾಕುವ ಹಕ್ಕು ನನಗೇನು ಇಲ್ಲ ಎಂಬಂತೆ ವರ್ತಿಸುವುದೂ ಗೋಚರಿಸುತ್ತಿದೆ. ಖ0ಡಿತಕ್ಕೂ ಇದು ಬಹಳ ದೊಡ್ಡ ತಪ್ಪು ತಿಳುವಳಿಕೆಯಾಗಿರುತ್ತದೆ. ಇನ್ನು ಗಂಡುಮಕ್ಕಳೇ ಇಲ್ಲದ ಅಮ್ಮಂದಿರ ಪರಿಸ್ಥಿತಿ ಏನಾಗಬೇಕು..?? ಪತಿಯ ಮರಣಾ ನಂತರ ಗಂಡುಮಕ್ಕಳೂ ಇಲ್ಲ ನನಗಿನ್ನಾರು ಗತಿ ಎಂದು ಮೂಲೆ ಮೂಲೆಯಲ್ಲಿ ಕುಳಿತು ಹೆತ್ತಮ್ಮ ಕಣ್ಣೀರು ಹಾಕುವಾಗ ನಾನವರ ಹೆಣ್ಣುಮಗಳು ನನಗವರನ್ನು ನೋಡಿಕೊಳ್ಳಲೇ ಬೇಕೆಂಬ ಕರ್ತವ್ಯವೇನೂ ಇಲ್ಲ ಎಂದು ಯೋಚಿಸುವ ಮಗಳು.. ಅಥವಾ ಅಮ್ಮನಿಗೆ ನೋಡಿಕೊಳ್ಳಬೇಕಾದ ಸಂದರ್ಭ ಬಂದಾಗಲೆಲ್ಲಾ ನನಗೆ ಬಹಾಳ ಅನಾನುಕೂಲವಿದೆ ಕಷ್ಟಪಾಡುಗಳಿವೆ ಎನ್ನುತ್ತಾ ತನ್ನ ಕಷ್ಟಗಳ ಲಿಸ್ಟನ್ನಿಡುತ್ತಾ.. ಪದೇ ಪದೇ ಏನಾದರೊಂದು ಹುಸಿ ನೆವನ ಹೇಳಿಕೊಳ್ಳುತ್ತಾ ತಪ್ಪಿಸಿಕೊಳ್ಳುತ್ತಾ ಬರುತ್ತಿದ್ದು.. ಜೀವನವನ್ನು ಆರಾಮದಾಯಕವಾಗಿಯೇ ಕಳೆಯುವಂತಹ ಹೆಣ್ಣುಮಕ್ಕಳಿಗೆ ನಾಳಿನ ಪ್ರಜ್ಞೆ ಖ0ಡಿತಕ್ಕೂ ಇಲ್ಲ. ಹೆತ್ತ ತಾಯಿಯ ಮನಸ್ಸಿಗೆ ಅಣುಮಾತ್ರ ನೋವು ನೀವು ಕೊಟ್ಟರೂ ನಿಮ್ಮ ಎಲ್ಲಾ ಪುಣ್ಯ ಕಾರ್ಯಗಳೂ ಖಡಾ ಖ0ಡಿತಕ್ಕೂ ವ್ಯರ್ಥವಾಗುತ್ತದೆ.

ಇನ್ನು ಪ್ರತೀಯೊಬ್ಬ ಮನುಷ್ಯನ ಪ್ರಾರ್ಥನೆ, ದುವಾ’ಗಳ ಸಾರವೇ ನರಕದಿಂದ ಪಾರಾಗಿ ಸ್ವರ್ಗ ಸೇರುವುದಾಗಿದೆ. ಹೌದಲ್ಲವೇ….. ಹಾಗಾದರೇ…

ಈ ವಾಕ್ಯವನ್ನು ನಾವೆಲ್ಲಾರೂ ಮತ್ತೊಮ್ಮೆ ಮಗದೊಮ್ಮೆ ಅವಲೋಕಿಸಲೇ ಬೇಕಾಗಿದೆ.

“ತಾಯಿಯ ಪಾದದಡಿ ಸ್ವರ್ಗವಿದೆ”. ಪ್ರವಾದಿ ಮುಹಮ್ಮದ್ (ಸ) ರವರ ಈ ವಾಕ್ಯವನ್ನು ಮೇಲಿಂದ ಮೇಲೆ ಹಗುರವಾಗಿ ಓದುವವನಿಗೆ ಇದೊಂದು ವಾಕ್ಯ ಮಾತ್ರ. ಆದರೇ, ಖಂಡಿತಕ್ಕೂ ಇದು ‘ಕೇವಲ’ ವಾಕ್ಯವಲ್ಲ.. ನಮ್ಮೆಲ್ಲರ ಬ್ರಹದಾಕಾರದ ಕನಸು ನನಸಾಗಿಸಲೆಂದೇ ಇರುವ ಉತ್ತಮವಾದ ಸುಲಭ ಮಾರ್ಗವಾಗಿದೆ.

ನಿಮ್ಮ ಗುರಿ ಸ್ವರ್ಗ ಸೇರುವುದೇ ಆಗಿದ್ದರೇ… ನೀವೆಷ್ಟೇ.. ಒಳ್ಳೆಯ ಕೆಲಸ ಮಾಡಿದ್ದರೂ ಕೂಡ.. ಇದೊಂದು ವಾಕ್ಯವನ್ನು ಕಡೆಗಣಿಸಿದರೇ ಮುಗಿಯಿತು. ಸ್ವರ್ಗ ಸೇರುವುದು ಬಿಡಿ ಸ್ವರ್ಗದ ಸುವಾಸನೆಯನ್ನು ಕೂಡ ಎಂದೂ ಆಸ್ವಾದಿಸಲಾರಿರಿ. ಆದುದರಿಂದ… ಗಂಡೋ, ಹೆಣ್ಣೊ.. ಮಕ್ಕಳು ಕುಳಿತು ಪ್ರವಾದಿ (ಸ) ರವರು ಹೇಳಿದ ಈ ವಾಕ್ಯವನ್ನು ಬಹಳ ಆಳದಿಂದ ಅಧ್ಯಯನ ಮಾಡಿ ನೋಡಿ.

ಅಗ ನೋವಿನಿಂದ ನಿಮ್ಮ ಆ ಹ್ರದಯವು ಬಿಕ್ಕಳಿಸುವುದು ಖ0ಡಿತ. ಇಷ್ಟು ಸ್ಪಷ್ಟವಾಗಿರುವುದನ್ನು ಅರ್ಥ ಮಾಡಿಕೊಳ್ಳದೇ ಇಷ್ಟು ವರುಷ ವ್ಯರ್ಥ ಮಾಡಿಕೊಂಡಿರುವುದಕ್ಕಾಗಿ.

ಸುವರ್ಣ ಕಾಲದ ಸಂಪೂರ್ಣಾವಧಿ ಮುಗಿದು ಪಶ್ಚಾತ್ತಾಪವೆಂಬ ಬೆಂಕಿಯಲ್ಲಿ ಬಿದ್ದು ಕೊನೇವರೆಗೂ ಬೇಯುವ ಮುನ್ನವೇ ಎಚ್ಚೆತ್ತುಕೊಳ್ಳಿ. ಇಂದಿನಿಂದಲೇ ಪಣತೊಟ್ಟು ನಿಮ್ಮ ಸ್ವರ್ಗ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಳ್ಳಿ.