ಕೊರೊನಾ: ಮಾರ್ಚ್ 31ರವರೆಗೆ ಲೋಕ್‍ಡೌನ್; ಇದು ದೇಶದ 15 ರಾಜ್ಯ

0
853

ಸನ್ಮಾರ್ಗ ವಾರ್ತೆ

ಮಾ.23: ಕೊರೊನಾ ವ್ಯಾಪಿಸದಂತೆ ತಮಿಳ್ನಾಡು ಸರಕಾರ ಕೂಡ ಲೌಕ್ ಡೌನ್ ಘೋಷಿಸಿದೆ. ಈ ತಿಂಗಳು 31ರವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಸಂಜೆ ಆರು ಗಂಟೆಯಿಂದ ನಿಷೇಧಾಜ್ಞೆ ಜಾರಿಗೆ ಬರಲಿದೆ. ಜಿಲ್ಲೆಗಳು ತಮ್ಮ ಗಡಿಗಳನ್ನು ಮುಚ್ಚಲಿದೆ. ಅಂಗಡಿಗಳು, ಮಾರುಕಟ್ಟೆಗಳು ಅಗತ್ಯ ಸೇವೆಗಳು ಮಾತ್ರ ಲಭ್ಯ ಗೊಳಿಸಲಾಗುವುದು. ಇದೇ ವೇಳೆ ಕೇರಳ ಸಹಿತ ಇತರ ರಾಜ್ಯಗಳಿಂದ ಸರಕು ಬರುವುದಕ್ಕೆ ಅಡ್ಡಿಯಿಲ್ಲ. ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಮನೆಯಲ್ಲಿ ಕುಳಿತು ಕೆಲಸ ಮಾಡಬೇಕು. ಸರಕಾರದ ಅಮ್ಮ ಕ್ಯಾಂಟಿಗಳು ತೆರೆದಿರಲಿವೆ.

ಲಾಕ್ ಡೌನ್ ಘೋಷಿಸಿದ ಹದಿನೈದನೆ ರಾಜ್ಯವಾಗಿ ತಮಿಳ್ನಾಡು ಸೇರ್ಪಡೆಗೊಂಡಿದ್ದು, ಹಿಮಾಚಲ ಪ್ರದೇಶ, ಮಹಾರಾಷ್ಟ್ರ , ಹರಿಯಾಣ, ಉತ್ತರಖಂಡ, ಪಶ್ಚಿಮಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ದಿಲ್ಲಿ, ನಾಗಲೆಂಡ್, ಜಮ್ಮು, ಕಾಶ್ಮೀರ, ಜಾರ್ಖಂಡ್ , ರಾಜಸ್ಥಾನ ಲಾಕ್‍ಡೌನ್ ಘೋಷಿಸಿವೆ. ಇದಲ್ಲದೆ ಕೊರೊನಾ ವರದಿಯಾದ ದೇಶದ ಎಂಬತ್ತು ಜಿಲ್ಲೆಗಳಲ್ಲಿ ಬಂದ್‍ಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.