ತಮಿಳ್ನಾಡಿನಲ್ಲಿ ಅಣ್ಣಾಡಿಎಂಕೆ ತೆಕ್ಕೆಗೆ ನಟ ವಿಜಯಕಾಂತ್‍ರ ಡಿಎಂಡಿಕೆ

0
615

ಚೆನ್ನೈ, ಮಾ.12: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ನಟ ವಿಜಯ್‍ಕಾಂತ್‍ರ ಡಿಎಂಡಿಕೆ ಪಾರ್ಟಿ ಅಣ್ಣಾಡಿಎಂಕೆಯೊಂದಿಗೆ ಸಖ್ಯ ಬೆಳೆಸಿದೆ. ತಮಿಳ್ನಾಡಿನ 39 ಪಾರ್ಲಿಮೆಂಟು ಸೀಟುಗಳಲ್ಲಿ ಡಿಎಂಡಿಕೆ ನಾಲ್ಕರಲ್ಲಿ ಸ್ಪರ್ಧಿಸಲಿದೆ. ಚೆನ್ನೈಯಲ್ಲಿ ತಮಿಳ್ನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹಾಗೂ ನಟ ವಿಜಯಕಾಂತ್ ಅವರ ಪತ್ನಿ ಡಿಎಂಡಿಕೆ ಖಚಾಂಚಿ ಪ್ರೇಮಲತಾ ಮೈತ್ರಿ ಚರ್ಚೆಯಲ್ಲಿ ಭಾಗವಹಿಸಿದರು. ಅಣ್ಣಾ ಡಿಎಂಕೆ ಬಿಜೆಪಿಯೊಂದಿಗೆ ಈಗಾಗಲೇ ಸಖ್ಯ ಮಾಡಿಕೊಂಡಿದೆ.

ಏಳು ಲೋಕಸಭಾ ಸೀಟುಗಳು ಹಾಗೂ ಒಂದು ರಾಜ್ಯಸಭಾ ಸೀಟುಗಳನ್ನು ಡಿಎಂಡಿಕೆ ಕೇಳಿತ್ತು. ಆದರೆ ನಾಲ್ಕು ಸೀಟುಗಳನ್ನು ನೀಡಲು ಅಣ್ಣಾಡಿಎಂಕೆ ಸಮ್ಮತಿಸಿದೆ. ಕಳೆದವಾರ ಪ್ರಧಾನಿ ನರೇಂದ್ರ ಮೋದಿ ಚೆನ್ನೈ ಸಮೀಪ ಸಖ್ಯದ ಚುನಾವಣಾ ಪ್ರಚಾರವನ್ನು ಉದ್ಘಾಟಿಸಿದಾಗ ಡಿಎಂಡಿಕೆ ದೂರ ವುಳಿದಿತ್ತು. ಸಖ್ಯದಲ್ಲಿ ಬಿಜೆಪಿ ಐದು ಸೀಟುಗಳು, ಪಟ್ಟಾಳಿ ಮಕ್ಕಳ್ ಕಚ್ಚಿ ಏಳು ಸೀಟುಗಳು ಮತ್ತು ಪುದಿಯ ತಮಿಳಗಂ (ಪಿಟಿ), ಎನ್‍ಜಿಪಿ, ಎನ್‍ಆರ್ ಕಾಂಗ್ರೆಸ್ ತಲಾ ಒಂದು ಸೀಟುಗಳಲ್ಲಿ ಸ್ಪಧಿಸಲಿದೆ. ಎಪ್ರಿಲ್ 18ಕ್ಕೆ ತಮಿಳ್ನಾಡಿನಲ್ಲಿ ಲೋಕಸಭಾ ಚನಾವಣೆ ನಡೆಯಲಿದೆ. ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ.