ತಾರಿಕ್ ರಮದಾನ್: ಹದಗೆಡುತ್ತಿರುವ ಆರೋಗ್ಯ; ಸುದೀರ್ಘಗೊಳ್ಳುತ್ತಿರುವ ಅನ್ಯಾಯದ ಜೈಲು

0
349

ಎಲ್ಮಾ ಬೆರಿಶ್

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿ ಹಾಕಲಾದ ಬಳಿಕ ಸ್ವಯಂ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಲಂಡನ್‍ನಿಂದ ಪ್ಯಾರಿಸಿಗೆ ಹೋಗುವಾಗ ತಾರಿಕ್ ರಮದಾನ್ ಬಹಳ ವಿಶ್ವಾಸದಲ್ಲಿದ್ದಿರಬಹುದು. ಅವರು ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಇಸ್ಲಾಮಿಕ್ ಸ್ಟಡೀಸ್ ಪ್ರೊಫೆಸರ್. ಕಾರಣ ಏನೇ ಇದ್ದರೂ ತಾನು ಹೋಗುತ್ತಿರುವುದು ಭಯೋತ್ಪಾದಕ ತಂಡದ ಮುಂದೆ ಅಲ್ಲವಲ್ಲ. ಬದಲಾಗಿ ಫ್ರೆಂಚ್ ಪೊಲೀಸರ ಮುಂದೆ ತಾನೇ ಹೀಗೆ 2018 ಫೆಬ್ರವರಿ ಎರಡ ರಂದು ರಮದಾನ್‍ರನ್ನು ಜೈಲಿನೊಳಗೆ ದೂಡಲಾಯಿತು. ನಂತರ ಅವರು ಹೊರ ಜಗತ್ತನ್ನು ಕಂಡಿಲ್ಲ. ತನ್ನ ವಿರುದ್ಧದ ಆರೋಪಗಳನ್ನು ಆರಂಭದಿಂದಲೇ ಅವರು ನಿರಾಕರಿಸುತ್ತಾ ಬಂದಿದ್ದಾರೆ. ಮಾತ್ರವಲ್ಲ ಅವರ ಮೇಲಿರುವ ಆರೋಪಗಳನ್ನು ಸಾಬೀತುಗೊಳಿಸುವ ಯಾವುದೇ ಸಾಕ್ಷ್ಯವೂ ಇದುವರೆಗೆ ಸಿಕ್ಕಿಯೂ ಇಲ್ಲ. ಮತ್ತೆ ಯಾಕೆ ಹೆದರಬೇಕು? ಇನ್ನೇಕೆ ಅವರನ್ನು ಜೈಲಿಗೆ ಹಾಕಿರುವುದು? ಇದು ಕಗ್ಗಂಟು ಮತ್ತು ಗೋಜಲಾದ ಪ್ರಶ್ನೆಯೇ.

ಆರೋಪ ಸಾಬೀತಾಗುವ ವರೆಗೆ ಪ್ರತಿಯೊಬ್ಬರೂ ನಿರಪರಾಧಿ ಎಂಬ ಕಾನೂನಿನ ತತ್ವವು ಅವರಿಗೆ ನಿರಾಕರಿಸಲ್ಪಟ್ಟಿತು. ಪೊಲೀಸರ ಮುಂದೆ ಹಾಜರಾದರಲ್ಲ. ತಾನೇ ಹೋಗಿ ಅವರ ಬೋನಿಗೆ ಸಿಕ್ಕಿ ಹಾಕಿಕೊಂಡಂತೆ ಆಯಿತು ಅವರ ಪರಿಸ್ಥಿತಿ. ಮುಂದಿನ 45 ದಿವಸಗಳ ಕಾಲ ಏಕಾಂತ ಜೈಲಿನಲ್ಲಿ ಅವರನ್ನು ಇರಿಸಲಾಯಿತು. ಅವರಿಗೆ ತನ್ನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಕೂಡ ಅವಕಾಶ ನೀಡಲಿಲ್ಲ. ಆದ್ದರಿಂದ ಅವರ ವಕೀಲ ಎಂ. ಇಮಾನುವೆಲ್ ರಿಗೆ ರಮದಾನ್ ಎಲ್ಲಿದ್ದಾರೆ, ಅವರ ಅವಸ್ಥೆ ಏನು, ಏನಾಗಿದ್ದಾರೆ ಎಂಬ ಯಾವ ವಿವರಗಳೂ ಇರಲಿಲ್ಲ. ಕತ್ತಲ ಕೋಣೆಯಲ್ಲಿರಿಸಲಾದ ಓರ್ವ ಯುದ್ಧ ಕೈದಿಯಂತೆ ತಾರಿಕ್ ರಮದಾನ್ ನರಕಯಾತನೆ ಅನುಭವಿಸುವ ಸಮಯದಲ್ಲಿ ಆರೋಪ ಹೊರಿಸಿದವರು ತಮ್ಮ ಆರೋಪವನ್ನು ಸಾಬೀತು ಪಡಿಸುವ ಯಾವುದೇ ಹೊಣೆಯೂ ಇಲ್ಲದೆ, ಮಾಧ್ಯಮದಲ್ಲಿ ಮಿಂಚಿದರು. ಸೆಲಬ್ರಿಟಿ ಪಟ್ಟವೂ ದೊರಕಿತು.

ಹೆಂಡಾ ಅಯಾರಿ

ದಿನಂಪ್ರತಿ ಆರೋಗ್ಯ ಕೆಟ್ಟು ಹೋಗುತ್ತಿದ್ದರೂ ತಾರಿಕ್ ರಮದಾನ್ ಅನ್ಯಾಯವಾಗಿ ಜೈಲಿನಲ್ಲಿ ಕೊಳೆಯುತ್ತಲೇ ಇದ್ದಾರೆ. ಫ್ರೆಂಚ್ ನ್ಯಾಯ ವ್ಯವಸ್ಥೆಗೆ ಕಿವಿಯೋ ಕಣ್ಣೋ ಇಲ್ಲ. 2018 ಫೆಬ್ರವರಿ ಎರಡರಂದು ಫ್ಲೋರಿ ಮರಾಗಿಸ್ ಜೈಲಿನಲ್ಲಿ ಇರಿಸುವ ವೇಳೆ ರಮದಾನ್ ಸಂಪೂರ್ಣ ಆರೋಗ್ಯಪೂರ್ಣ ಆಗಿದ್ದರು. ಆದರೆ ಈಗಿನ ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ. ಮಲ್ಟಿಪಲ್ ಸ್ಲೋರಿಸ್ ರೋಗ ತಗಲಿದೆ. ಅವರ ಕೈ ಕಾಲುಗಳಲ್ಲಿ ರೋಗ ಕಂಡು ಬಂದಿದೆ. ಹದಿನೈದು ದಿವಸಗಳಲ್ಲಿ ರೋಗ ಉಲ್ಬಣಿಸಿತು. ಸೊಂಟದ ಭಾಗದ ವರೆಗೆ ಹರಡಿತು.
ಮಾತ್ರವಲ್ಲ ಕೈಗಳಿಗೂ ರೋಗ ಹರಡಿತು. ಅಸಹ್ಯ ತಲೆನೋವು ಇತ್ಯಾದಿ ನೋವು ಕಾಣಿಸಿತು. ಕೈಕಾಲುಗಳು ಚಲಿಸುವಾಗ ಸ್ಪರ್ಶ ಅರಿಯಲು ಸಾಧ್ಯವಾಗದ ಅವಸ್ಥೆ ಸೃಷ್ಟಿಯಾಯಿತು. ಮಾರ್ಚ್ 20ಕ್ಕೆ ಫ್ಲೋರಿ ಮರಾಗಿಸ್ ಜೈಲಿನಿಂದ ಪ್ರೆಸ್ನಸ್ ಜೈಲಿಗೆ ವರ್ಗಾಯಿಸುವ ಸಮಯದಲ್ಲಿ ತಾರಿಕ್ ರಮದಾನ್‍ರನ್ನು ನಾಲ್ಕು ಬಾರಿ ಆಸ್ಪತ್ರೆಗೆ ಸೇರಿಸ ಲಾಯಿತು. ಜೂನ್ 12ಕ್ಕೆ ತಾರಿಕ್ ರಮದಾನ್‍ರನ್ನು ಪೀಟ್ ಸಲ್ಪ್ರಿಟಿಯಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆರೋಗ್ಯ ಸ್ಥಿತಿ ಬಿಗಡಾಯಿಸಿತು. ನ್ಯೂರೋಲಜಿಸ್ಟ್ ಇದನ್ನು ಪತ್ತೆ ಮಾಡಿದರು. ಅಂದರೆ ಅವರಿಗೆ ಈಗ ವಾಕರ್ ಇಲ್ಲದೆ ನಡೆಯಲು ಸಾಧ್ಯವಿಲ್ಲ. ಇಂದ್ರಿಯ ಸಂವೇದನೆಯ ಗುಣ ನಶಿಸಿದೆ. ನೆನಪು ಮಾಸುತ್ತಿದೆ. ದೇಹವಿಡಿ ನಡುಗ ತೊಡಗಿದೆ. ಆರೋಗ್ಯ ಕ್ಷೀಣಿಸುತ್ತಿರುವ ಎಲ್ಲ ಸೂಚನೆಗಳೂ ಕಾಣತೊಡಗಿದೆ.

ಜೈಲು ವಾಸದಲ್ಲಿ ಅವರಿಗೆ ನಾಡಿಗೆ ಸಂಬಂಧಿಸಿದ ಗಂಭೀರ ರೋಗ ತಗುಲಿರುವುದು ಸ್ಪಷ್ಟವಾಯಿತು. ಆದರೂ ಜಾಮೀನು ಅರ್ಜಿ ನಿರಂತರ ತಿರಸ್ಕರಿಸಲ್ಪಟ್ಟಿತು. ಜೈಲಿನ ಮೆಡಿಕಲ್ ಅಥಾರಿಟಿ ಚೀಫ್ ಅವರ ವರದಿಯನ್ನು ಸಂಪೂರ್ಣ ಕಡೆಗಣಿಸಲಾಯಿತು. ಜಾಮೀನಿಗೆ ಇದನ್ನು ಪರಿಗಣಿಸಲಿಲ್ಲ. ಕೋರ್ಟು ರಮದಾನ್‍ಗೆ ನಿರಂತರ ಜಾಮೀನು ಮಂಜೂರು ಮಾಡಲಿಲ್ಲ. ರಮದಾನ್‍ರ ವಕೀಲರು ಕೋರ್ಟಿನ ಮುಂದಿಟ್ಟ ವಿಷಯಗಳೂ ಪುರಸ್ಕರಿಸಲ್ಪಡಲಿಲ್ಲ. ತಾರಿಕ್ ರಮದಾನ್‍ರ ಆರೋಗ್ಯ ಸಂಪೂರ್ಣ ಕೆಡ ತೊಡಗಿದೆ. ಅವರ ಮಾನಸಿಕ ಸ್ಥಿತಿಯತ್ತಲೂ ಕಣ್ಣುಮುಚ್ಚಿ ಕೂರಲಾಗಿದೆ. ಮ್ಯಾಜಿಸ್ಟ್ರೇಟ್ ಇದನ್ನು ಕೂಡ ಪರಿಗಣಿಸಿಲ್ಲ. ಸಂಪೂರ್ಣ ಅವರೊಂದಿಗೆ ಪಕ್ಷಪಾತತನದಿಂದ ವರ್ತಿಸಲಾಗಿದೆ. ಪೊಲೀಸರ ತನಿಖೆಯೂ ನ್ಯಾಯಯುತವಾಗಿದೆಯೇ ಎಂಬ ಶಂಕೆಯನ್ನು ರಮದಾನ್‍ರ ವಕೀಲರು ವ್ಯಕ್ತ ಪಡಿಸಿದ್ದಾರೆ.

`Metoo#’ ಮೀಟೂ ಮೂವ್‍ಮೆಂಟಿನ ಹೆಸರಿನಲ್ಲಿ ರಮದಾನ್ ವಿರುದ್ಧ ಪ್ರಕರಣ ಮುಂದುವರಿದರೂ ಪ್ರಕರಣದ ಹಿಂದೆ ಇಸ್ಲಾಮ್ ಭೀತಿ ಸೃಷ್ಟಿಸುವ ಕಾಲೆಳೆತಗಳು ನಡೆಯುತ್ತಿವೆಯೇ ಎಂದು ಕೆಲವರು ಪ್ರಶ್ನಿಸತೊಡಗಿದ್ದಾರೆ. ರಮದಾನ್ ವಿರುದ್ಧ ಮೊದಲು ರುಯಿನ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ದೂರು ನೀಡಲಾಗಿದ್ದರೂ ಕೆಲವು ಅಜ್ಞಾತ ಕಾರಣಗಳಿಂದಾಗಿ ಆ ದೂರನ್ನು ಭಯೋತ್ಪಾದಕ ಕೇಸುಗಳನ್ನು ನಿರ್ವಹಿಸುವುದರಲ್ಲಿ ಮುಂಚೂಣಿಯಲ್ಲಿರುವ ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಗೆ ಹೋಯಿತು. ಫ್ರಾನ್ಸ್ ಅಧ್ಯಕ್ಷ ಇಮಾನುವೆಲ್ ಮ್ಯಾಕ್ರೋನ್‍ರ ಸಚಿವ ಸಂಪುಟದ ಇಬ್ಬರು ಸಚಿವರು ಮಿ ಟೂ ಫೆಮಿನಿಸ್ಟ್ ಅಭಿ ಯಾನದ ಭಾಗವಾಗಿ ಲೈಂಗಿಕ ಆರೋಪ ಎದುರಿಸುತ್ತಿದ್ದಾರೆ. ಇದೇ ವೇಳೆ ಅವರು ಸಚಿವ ಕುರ್ಚಿಯಲ್ಲಿ ಯಾವುದೇ ಅಡ್ಡಿಯಿಲ್ಲದೆ ಸುಖವಾಗಿ ಕೂತಿದ್ದಾರೆ. ಹೀಗಿರುವಾಗ ತಾರಿಕ್ ರಮದಾನ್ ನರಕ ಯಾತನೆ ಅನುಭವಿಸುತ್ತಿರುವುದು ಆಶ್ಚರ್ಯ ಜನಕ.

ತಾರಿಕ್ ರಂಜಾನ್ ರವರ ಪತ್ನಿ ಈಮಾನ್ ರಂಜಾನ್ (ರಬತ್ )

ಎರಡನೆ ದೂರುದಾರಳ ಆರೋಪದಲ್ಲಿ ಇಸ್ಲಾಮೊಫೋಬಿಯ ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ತೀವ್ರ ಬಲಪಂಥೀಯ ಪ್ರಚಾರಕಿಯಾದ ಆಕೆಯ ಹೆಸರು ಪೌಲ ಎಮ್ಮ ಅಥಾಕ್ರಿಸ್ಟಲ್ಲ. ತಾರಿಕ್ ರಮದಾನ್‍ರನ್ನು ಕೆಟ್ಟದಾಗಿ ಚಿತ್ರಿಸಲು ಅವರ ಹೆಸರಿನಲ್ಲಿ ನಕಲಿ ಇಮೇಲ್ ಖಾತೆ ಸೃಸ್ಟಿಸಿದ್ದೇನೆ ಎಂಬುದನ್ನು ಆಕೆ ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಪ್ರಕರಣದ ಮೂರನೇ ದೂರುಗಾರ್ತಿ ಮೌನಿಯಾರರ ಆರೋಪವನ್ನು ಕೋರ್ಟು ತಳ್ಳಿಹಾಕಿದೆ. ರಮದಾನ್ ಮೊದಲು ಮತ್ತು ಕೊನೆಯದಾಗಿ ನೇರ ಹಾಜರಾದ ಜುಲೈ ಐದರ ಕೋರ್ಟು ವಿಚಾರಣೆಯಲ್ಲಿ ಮೌನಿಯ ಆರೋಪ ನಿರಾಧಾರವೆಂದು ಸಾಬೀತಾಗಿದೆ.

ತಾರಿಕ್ ರಮದಾನ್‍ರ ಆರೋಗ್ಯ ಕೆಡುತ್ತಿದೆ. ಅವರನ್ನು ಜೈಲಿನಲ್ಲಿಟ್ಟದ್ದನ್ನು ಖಂಡಿಸಿ ಫ್ರೆಂಚ್ ದೂತವಾಸದ ಮುಂದೆ 2018 ಜುಲೈ 17ಕ್ಕೆ ಇಂಟರ್ ನ್ಯಾಶನಲ್ ಡೇ ಆಫ್ ಆಕ್ಷನ್ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು. ತಾರಿಕ್ ರಮದಾನ್ ಬಿಡುಗಡೆಗೆ ಹಲವಾರು ಸಂಘಟನೆಗಳು ಆಗ್ರಹಿಸುತ್ತಿವೆ. ಸಮಾನತೆ, ಸಮತ್ವ, ಸಾಹೋದರ್ಯ ಮೌಲ್ಯಗಳು ಫ್ರಾನ್ಸಿನ ಮುಸ್ಲಿಮರು ಮತ್ತು ಕಪ್ಪು ವರ್ಣೀಯರಿಗೆ ನಿರಾಕರಿಸಲ್ಪಡುತ್ತಿರುವುದನ್ನು ಸಂಘಟನೆಗಳು ಎತ್ತಿ ತೋರಿಸಿವೆ. ಸಂಘಟನೆಗಳು ಈಗ ಪ್ರೋಫೆಸರ್ ರಮದಾನ್‍ಗೆ ಜಾಮೀನು ತೆಗೆಸಿಕೊಡುವ ದೌತ್ಯವನ್ನು ಎತ್ತಿ ಕೊಂಡಿವೆ. ತಾರಿಕ್ ರಮದಾನ್‍ರ ಆರೋಗ್ಯ ಸ್ಥಿತಿ ಸ್ಥಿರವಾಗಲಿ ಎಂದಷ್ಟೇ ಹಾರೈಸಲು ನಮಗೆ ಸಾಧ್ಯ. ಉಳಿದೆಲ್ಲವೂ ಫ್ರಾನ್ಸ್ ಕೋರ್ಟಿನ ನಿರ್ಧಾರವನ್ನು ಅವಲಂಬಿಸಿದ್ದಾಗಿರುತ್ತದೆ.